
ಲಾರ್ಡ್ಸ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ಮತ್ತು ಐರ್ಲೆಂಡ್ ನಡುವಿನ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್‌ನ ವೇಗದ ಬೌಲರ್ ಸ್ಟುವರ್ಟ್ ಬ್ರಾಡ್ ಆರಂಭಿಕ ಓವರ್‌ಗಳಲ್ಲಿಯೇ 3 ವಿಕೆಟ್ ಉರುಳಿಸಿ ಅಪರೂಪದ ದಾಖಲೆಯೊಂದನ್ನು ಬರೆದಿದ್ದಾರೆ.

ಇಂಗ್ಲೆಂಡ್ ಪರ ಟೆಸ್ಟ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಎರಡನೇ ಬೌಲರ್ ಎನಿಸಿಕೊಂಡಿರುವ ಬ್ರಾಡ್. ಐರ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ನ ಮೊದಲ ಸೆಷನ್ನಲ್ಲಿ ಏಳು ಓವರ್ ಬೌಲ್ ಮಾಡಿ ಮೂರು ವಿಕೆಟ್ ಪಡೆದರು. ಐದನೇ ಓವರ್‌ನ ಎರಡನೇ ಎಸೆತದಲ್ಲಿ ಪೀಟರ್ ಮೂರ್ ಅವರನ್ನು ಔಟ್ ಮಾಡುವ ಮೂಲಕ ಐರ್ಲೆಂಡ್‌ಗೆ ಮೊದಲ ಹೊಡೆತ ನೀಡಿದ ಬ್ರಾಡ್ ಇದಾದ ಬಳಿಕ ಏಳನೇ ಓವರ್‌ನ ಮೊದಲ ಎಸೆತದಲ್ಲಿ ಆಂಡಿ ಬಲ್ಬರಿನಿ ಅವರನ್ನು ಶೂನ್ಯಕ್ಕೆ ಔಟ್ ಮಾಡಿದರು. ಆನಂತರ ಇದೇ ಓವರ್‌ನ ಮೂರನೇ ಎಸೆತದಲ್ಲಿ ಅವರು ಹ್ಯಾರಿ ಟೆಕ್ಟರ್‌ನನ್ನು ಪೆವಿಲಿಯನ್‌ಗೆ ಕಳುಹಿಸಿದರು.

ಈ ಮೂಲಕ ಬ್ರಾಡ್ ಕಳೆದ 25 ವರ್ಷಗಳಲ್ಲಿ ಎರಡನೇ ಬಾರಿಗೆ ಟೆಸ್ಟ್ ಪಂದ್ಯದ ಇನ್ನಿಂಗ್ಸ್‌ನಲ್ಲಿ ಮೊದಲ ಏಳು ಓವರ್‌ಗಳಲ್ಲಿ ಮೂರು ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ.

2015ರಲ್ಲಿ ಟ್ರೆಂಟ್ ಬ್ರಿಡ್ಜ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಐರ್ಲೆಂಡ್ ವಿರುದ್ಧ ಬ್ರಾಡ್ ಈ ಸಾಧನೆ ಮಾಡಿದ್ದು, ಈಗ ಈ ಸಾಧನೆ ಮಾಡಿದ್ದಾರೆ. ಆಸ್ಟ್ರೇಲಿಯಾ ವಿರುದ್ಧ ಮೊದಲ ಏಳು ಓವರ್‌ಗಳಲ್ಲಿ ಬ್ರಾಡ್ ಐದು ವಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದರು.

ಇನ್ನು ಈ ಟೆಸ್ಟ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಐರ್ಲೆಂಡ್ ತಂಡ ಬ್ರಾಡ್ ದಾಳಿಗೆ ನಲುಗಿ ಕೇವಲ 172 ರನ್ಗಳಿಗೆ ತನ್ನ ಮೊದಲ ಇನ್ನಿಂಗ್ಸ್ ಮುಗಿಸಿದೆ. ಇಂಗ್ಲೆಂಡ್ ಪರ ಬ್ರಾಡ್ 51 ರನ್ ನೀಡಿ 5 ವಿಕೆಟ್ ಪಡೆದಿದ್ದಾರೆ.

ಐರ್ಲೆಂಡ್ ವಿರುದ್ಧದ ಈ ಟೆಸ್ಟ್ ಪಂದ್ಯವು ಇಂಗ್ಲೆಂಡ್‌ಗೆ ಆಶಸ್‌ಗಾಗಿ ಒಂದು ರೀತಿಯ ತಯಾರಿಯಾಗಿದೆ. ಆಶಸ್ ಸರಣಿ ಜೂನ್ 17 ರಿಂದ ಪ್ರಾರಂಭವಾಗುತ್ತಿದೆ. ಆಸ್ಟ್ರೇಲಿಯ ಮತ್ತು ಇಂಗ್ಲೆಂಡ್ ನಡುವೆ ನಡೆಯಲಿರುವ ಈ ಸರಣಿಯ ಮೊದಲ ಪಂದ್ಯ ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆಯಲಿದೆ. ಈ ಸರಣಿಯ ಕೊನೆಯ ಪಂದ್ಯ ಜುಲೈ 27 ರಿಂದ 31 ರವರೆಗೆ ಓವಲ್‌ನಲ್ಲಿ ನಡೆಯಲಿದೆ.