- Kannada News Photo gallery Cricket photos MS Dhoni Surgery MS Dhoni discharged from Kokilaben Hospital after knee surgery
MS Dhoni Surgery: ಸರ್ಜರಿ ಬಳಿಕ ಆಸ್ಪತ್ರೆಯಿಂದ ಧೋನಿ ಡಿಸ್ಚಾರ್ಜ್; ಚೇತರಿಸಿಕೊಳ್ಳಲು ಎಷ್ಟು ತಿಂಗಳು ಬೇಕು?
MS Dhoni Surgery: ಧೋನಿ ಅವರನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದ್ದು, ಶಸ್ತ್ರಚಿಕಿತ್ಸೆಯ ನಂತರ ಧೋನಿಯವರನ್ನು ಭೇಟಿಯಾಗಿದ್ದ ಚೆನ್ನೈ ಸಿಇಒ ಕಾಶಿ ವಿಶ್ವನಾಥ್, ಧೋನಿ ಆರೋಗ್ಯವಾಗಿದ್ದಾರೆ ಎಂಬ ಮಾಹಿತಿ ನೀಡಿದ್ದಾರೆ ಎಂದು ವರದಿಯಾಗಿದೆ.
Updated on: Jun 02, 2023 | 11:46 AM

ಐಪಿಎಲ್ ವೇಳೆ ಮೊಣಕಾಲು ನೋವಿಗೆ ತುತ್ತಾಗಿದ್ದ ಧೋನಿ, ಫೈನಲ್ ಪಂದ್ಯ ಮುಗಿದ ಕೂಡಲೇ ಮುಂಬೈನ ಕೋಕಿಲಾಬೆನ್ ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದರು. ಇದೀಗ ಯಶಸ್ವಿ ಶಸ್ತ್ರಚಿಕಿತ್ಸೆಯ ಬಳಿಕ ಎಂಎಸ್ ಧೋನಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ ಎಂದು ವರದಿಯಾಗಿದೆ.

ಚೆನ್ನೈ ತಂಡ ಫೈನಲ್ ಗೆದ್ದು ಚಾಂಪಿಯನ್ ಆದ ಬಳಿಕ ಇಡೀ ತಂಡ ವಿಜಯೋತ್ಸವ ಆಚರಿಸುತ್ತಿದ್ದರೆ, ಮತ್ತೊಂದೆಡೆ ಧೋನಿ ಕುಟುಂಬ ಸಮೇತ ಮುಂಬೈಗೆ ಪ್ರಯಾಣ ಬೆಳೆಸಿದ್ದರು. ಕೋಕಿಲಾಬೆನ್ ಆಸ್ಪತ್ರೆಯಲ್ಲಿ ಮೊಣಕಾಲು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಧೋನಿ ಎರಡು ದಿನ ಆಸ್ಪತ್ರೆಯಲ್ಲಿ ಇರಬೇಕಾಗುತ್ತದೆ ಎಂದು ಈ ಹಿಂದೆ ವರದಿಯಾಗಿತ್ತು.

ಇದೀಗ ನಿನ್ನೆ ಸಂಜೆಯೇ ಡಿಸ್ಚಾರ್ಜ್ ಆಗಿದ್ದಾರೆ ಎಂಬ ಸುದ್ದಿ ಕೇಳಿಬರುತ್ತಿದೆ. ಕ್ರಿಕ್‌ಬಜ್ ಪ್ರಕಾರ, ಧೋನಿ ಅವರನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದ್ದು, ಶಸ್ತ್ರಚಿಕಿತ್ಸೆಯ ನಂತರ ಧೋನಿಯವರನ್ನು ಭೇಟಿಯಾಗಿದ್ದ ಚೆನ್ನೈ ಸಿಇಒ ಕಾಶಿ ವಿಶ್ವನಾಥ್, ಧೋನಿ ಆರೋಗ್ಯವಾಗಿದ್ದಾರೆ ಎಂಬ ಮಾಹಿತಿ ನೀಡಿದ್ದಾರೆ ಎಂದು ವರದಿಯಾಗಿದೆ.

ಇನ್ನು ಮುಂಬೈನ ಕೋಕಿಲಾಬೆನ್ ಆಸ್ಪತ್ರೆಯಲ್ಲಿ ಡಾ.ದಿನ್‌ಶಾ ಪಾರ್ದಿವಾಲಾ ಅವರು ಧೋನಿಗೆ ಶಸ್ತ್ರಚಿಕಿತ್ಸೆ ಮಾಡಿದ್ದು, ಕಾರು ಅಪಘಾತಕ್ಕೊಳಗಾಗಿದ್ದ ಟೀಂ ಇಂಡಿಯಾದ ವಿಕೆಟ್ ಕೀಪರ್ ರಿಷಬ್ ಪಂತ್ ಅವರಿಗೂ ಇವರೇ ಶಸ್ತ್ರಚಿಕಿತ್ಸೆ ಮಾಡಿದ್ದರು.

ಮಾಧ್ಯಮಗಳ ವರದಿ ಪ್ರಕಾರ ಧೋನಿ ಸುಮಾರು 2 ತಿಂಗಳಲ್ಲಿ ಸಂಪೂರ್ಣ ಫಿಟ್ ಆಗಲಿದ್ದಾರೆ ಎಂಬುದು ತಿಳಿದುಬಂದಿದೆ.




