CPL 2021: ಸ್ಪೋಟಕ ಶತಕದೊಂದಿಗೆ ಡುಪ್ಲೆಸಿಸ್ ಕಂಬ್ಯಾಕ್: ಸಿಪಿಎಲ್​ನಲ್ಲಿ ಹೊಸ ದಾಖಲೆ

| Updated By: ಝಾಹಿರ್ ಯೂಸುಫ್

Updated on: Sep 05, 2021 | 8:10 PM

Faf du Plessis: 224 ರನ್​ಗಳ ಬೃಹತ್ ಗುರಿಯನ್ನು ಬೆನ್ನಟ್ಟಿದ ಸೇಂಟ್ ಕಿಟ್ಸ್ ಅ್ಯಂಡ್ ನೆವಿಸ್ ಪೇಟ್ರಿಯಾಟ್ಸ್ ತಂಡ 16.5 ಓವರ್ ಗಳಲ್ಲಿ ಕೇವಲ 124 ರನ್ ಗಳಿಗೆ ಆಲೌಟ್ ಆದರು. ಇದರೊಂದಿಗೆ ಸೇಂಟ್ ಲೂಸಿಯಾ ತಂಡ 100 ರನ್​ಗಳ ಭರ್ಜರಿ ಜಯ ಸಾಧಿಸಿತು.

1 / 5
ದಕ್ಷಿಣ ಆಫ್ರಿಕಾದ ಸ್ಪೋಟಕ ಬ್ಯಾಟ್ಸ್​ಮನ್ ಫಾಫ್ ಡುಪ್ಲೆಸಿಸ್​ ಪಾಕಿಸ್ತಾನ್ ಸೂಪರ್ ಲೀಗ್​ನಲ್ಲಿ ಗಾಯಗೊಂಡು ಕೆಲ ತಿಂಗಳುಗಳ ಕಾಲ ಕ್ರಿಕೆಟ್​ನಿಂದ ದೂರ ಉಳಿದಿದ್ದರು. ಇದಾದ ಬಳಿಕ ದಿ ಹಂಡ್ರೆಡ್ ಲೀಗ್​ನಲ್ಲಿ ಕಾಣಿಸಿಕೊಂಡರೂ ಫಾಫ್ ಎಂದಿನ ಆಟ ಮೂಡಿ ಬಂದಿರಲಿಲ್ಲ.

2 / 5
ಇದೀಗ ಕೆರಿಬಿಯನ್ ಪ್ರೀಮಿಯರ್ ಲೀಗ್​ನಲ್ಲಿ ತಮ್ಮ ಹಳೆಯ ಚಾರ್ಮ್​ ಅನ್ನು ತೋರಿಸಿದ್ದಾರೆ. ಸಿಪಿಎಲ್​ನ 15ನೇ ಪಂದ್ಯದಲ್ಲಿ ಸೇಂಟ್ ಲೂಸಿಯಾ ಕಿಂಗ್ಸ್ ಹಾಗೂ ಸೇಂಟ್ ಕಿಟ್ಸ್ ಅ್ಯಂಡ್ ನೆವಿಸ್ ಪೇಟ್ರಿಯಾಟ್ಸ್ ಮುಖಾಮುಖಿಯಾಗಿತ್ತು. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಸೇಂಟ್ ಲೂಸಿಯಾ ಪರ ಫಾಫ್ ಡು ಪ್ಲೆಸಿಸ್ ಹಾಗೂ ಫ್ಲೆಚರ್ ಆರಂಭಿಕರಾಗಿ ಕಣಕ್ಕಿಳಿದಿದ್ದರು. ಈ ಜೋಡಿ ಮೊದಲ ವಿಕೆಟ್​ಗೆ 76 ರನ್​ ಬಾರಿಸುವ ಮೂಲಕ ತಂಡಕ್ಕೆ ಉತ್ತಮ ಅಡಿಪಾಯ ಹಾಕಿಕೊಟ್ಟರು.

3 / 5
ಇದಾದ ಬಳಿಕ ಸೇಂಟ್ ಲೂಸಿಯಾ 2 ವಿಕೆಟ್ ಕಳೆದುಕೊಂಡರೂ ಒಂದೆಡೆ ಡುಪ್ಲೆಸಿಸ್ ಗಟ್ಟಿಯಾಗಿ ನೆಲೆಯೂರಿದ್ದರು. ಅಲ್ಲದೆ ಸೇಂಟ್ ಕಿಟ್ಸ್​ ಬೌಲರುಗಳ ಬೆಂಡೆತ್ತಿದ್ದ ಫಾಫ್ ಬೌಂಡರಿ-ಸಿಕ್ಸರ್​ಗಳ ಸುರಿಮಳೆಗೈದರು. ಅದರಂತೆ 60 ಎಸೆತಗಳಲ್ಲಿ 13 ಬೌಂಡರಿ ಹಾಗೂ 5 ಭರ್ಜರಿ ಸಿಕ್ಸ್ ಸಿಡಿಸಿ 120 ರನ್ ಚಚ್ಚಿದರು. ಡುಪ್ಲೆಸಿಸ್​ ಅಬ್ಬರ ನೆರವಿನಿಂದ ಸೇಂಟ್ ಲೂಸಿಯಾ ತಂಡವು  2 ವಿಕೆಟ್ ನಷ್ಟಕ್ಕೆ 224 ರನ್ ಗಳಿಸಿತು.

4 / 5
ಇನ್ನು ಬಿರುಸಿನ ಬ್ಯಾಟಿಂಗ್ ಮೂಲಕ 120 ರನ್ ಬಾರಿಸಿದ ಡುಪ್ಲೆಸಿಸ್ ಕೆರಿಬಿಯನ್ ಪ್ರೀಮಿಯರ್ ಲೀಗ್​ನಲ್ಲಿ ಹೊಸ ದಾಖಲೆ ಬರೆದರು. ಸಿಪಿಎಲ್​ನಲ್ಲಿ ಅತ್ಯಧಿಕ ರನ್​ ವೈಯುಕ್ತಿಕ ಮೊತ್ತ ಬಾರಿಸಿದ ವಿದೇಶಿ ಬ್ಯಾಟ್ಸ್​​ಮನ್ ಎನಿಸಿಕೊಂಡರು. ಇದಕ್ಕೂ ಮುನ್ನ ಈ ದಾಖಲೆಯು ಗ್ಲೆನ್ ಫಿಲಿಪ್ಸ್ ಹೆಸರಿನಲ್ಲಿತ್ತು. ಫಿಲಿಪ್ಸ್​ 2018 ರಲ್ಲಿ ಜಮೈಕಾ ಪರ 103 ರನ್ ಗಳಿಸಿದ್ದು ಸಿಪಿಎಲ್​ನ ವಿದೇಶಿ ಆಟಗಾರ ಶ್ರೇಷ್ಠ ಸಾಧನೆಯಾಗಿತ್ತು. ಇದೀಗ 120 ರನ್ ಬಾರಿಸುವ ಮೂಲಕ ಫಾಫ್ ಡುಪ್ಲೆಸಿಸ್ ದಾಖಲೆ ನಿರ್ಮಿಸಿದ್ದಾರೆ.

5 / 5
ಈ ಪಂದ್ಯದಲ್ಲಿ 224 ರನ್​ಗಳ ಬೃಹತ್ ಗುರಿಯನ್ನು ಬೆನ್ನಟ್ಟಿದ ಸೇಂಟ್ ಕಿಟ್ಸ್ ಅ್ಯಂಡ್ ನೆವಿಸ್ ಪೇಟ್ರಿಯಾಟ್ಸ್  16.5 ಓವರ್ ಗಳಲ್ಲಿ ಕೇವಲ 124 ರನ್ ಗಳಿಗೆ ಆಲೌಟ್ ಆದರು. ಇದರೊಂದಿಗೆ ಸೇಂಟ್ ಲೂಸಿಯಾ 100 ರನ್​ಗಳ ಭರ್ಜರಿ ಜಯ ಸಾಧಿಸಿತು.

Published On - 5:54 pm, Sun, 5 September 21