Faf du Plessis: ಮತ್ತೆ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ ಪಾಲಾದ ಫಾಫ್ ಡುಪ್ಲೆಸಿಸ್​

Edited By:

Updated on: Aug 11, 2022 | 2:03 PM

CSA T20 League 2022: ಮುಂದಿನ ವರ್ಷ ಪ್ರಾರಂಭವಾಗುವ ಕ್ರಿಕೆಟ್ ಸೌತ್ ಆಫ್ರಿಕಾ T20 ಲೀಗ್‌ನ ಎಲ್ಲಾ 6 ತಂಡಗಳ ಮಾಲೀಕತ್ವವನ್ನು IPL ಫ್ರಾಂಚೈಸಿಗಳೇ ಖರೀದಿಸಿರುವುದು ವಿಶೇಷ.

1 / 8
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ಫಾಫ್ ಡುಪ್ಲೆಸಿಸ್ ಮತ್ತೆ ಚೆನ್ನೈ ಸೂಪರ್ ಕಿಂಗ್ಸ್​ ಪಾಲಾಗಿದೆ. ಆದರೆ ಇದು ಐಪಿಎಲ್​​ನಲ್ಲಿ ಅಲ್ಲ ಎಂಬುದಷ್ಟೇ ವ್ಯತ್ಯಾಸ. ಅಂದರೆ ಸೌತ್ ಆಫ್ರಿಕಾ ಕ್ರಿಕೆಟ್ ಬೋರ್ಡ್ ಆಯೋಜಿಸುತ್ತಿರುವ ಹೊಸ ಟಿ20 ಲೀಗ್​ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್​ ಫ್ರಾಂಚೈಸಿ ಜೋಹಾನ್ಸ್​ಬರ್ಗ್​ ತಂಡವನ್ನು ಖರೀದಿಸಿದೆ. ಇದೀಗ ಈ ತಂಡಗಳ ಆಟಗಾರರ ಆಯ್ಕೆ ಪ್ರಕ್ರಿಯೆ ನಡೆಯುತ್ತಿದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ಫಾಫ್ ಡುಪ್ಲೆಸಿಸ್ ಮತ್ತೆ ಚೆನ್ನೈ ಸೂಪರ್ ಕಿಂಗ್ಸ್​ ಪಾಲಾಗಿದೆ. ಆದರೆ ಇದು ಐಪಿಎಲ್​​ನಲ್ಲಿ ಅಲ್ಲ ಎಂಬುದಷ್ಟೇ ವ್ಯತ್ಯಾಸ. ಅಂದರೆ ಸೌತ್ ಆಫ್ರಿಕಾ ಕ್ರಿಕೆಟ್ ಬೋರ್ಡ್ ಆಯೋಜಿಸುತ್ತಿರುವ ಹೊಸ ಟಿ20 ಲೀಗ್​ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್​ ಫ್ರಾಂಚೈಸಿ ಜೋಹಾನ್ಸ್​ಬರ್ಗ್​ ತಂಡವನ್ನು ಖರೀದಿಸಿದೆ. ಇದೀಗ ಈ ತಂಡಗಳ ಆಟಗಾರರ ಆಯ್ಕೆ ಪ್ರಕ್ರಿಯೆ ನಡೆಯುತ್ತಿದೆ.

2 / 8

ಅದರಂತೆ ಇದೀಗ ಸಿಎಸ್​ಕೆ ಫ್ರಾಂಚೈಸಿಯು ದಕ್ಷಿಣ ಆಫ್ರಿಕಾದ ಮಾಜಿ ನಾಯಕ ಫಾಫ್ ಡು ಪ್ಲೆಸಿಸ್ ಅವರನ್ನು ಜೋಹಾನ್ಸ್​ಬರ್ಗ್​ ತಂಡದ ಮಾರ್ಕ್ಯೂ ಲೀಸ್ಟ್​ ಆಟಗಾರನನ್ನಾಗಿ ಆಯ್ಕೆ ಮಾಡಿದೆ. ಹೀಗಾಗಿ ಮತ್ತೊಮ್ಮೆ ಸಿಎಸ್​ಕೆ ಫ್ರಾಂಚೈಸಿ ಅಡಿಯಲ್ಲಿ ಡುಪ್ಲೆಸಿಸ್ ಆಡುವುದು ಖಚಿತ. ಮುಂದಿನ ವರ್ಷ ಪ್ರಾರಂಭವಾಗುವ ಕ್ರಿಕೆಟ್ ಸೌತ್ ಆಫ್ರಿಕಾ T20 ಲೀಗ್‌ನ ಎಲ್ಲಾ 6 ತಂಡಗಳ ಮಾಲೀಕತ್ವವನ್ನು IPL ಫ್ರಾಂಚೈಸಿಗಳೇ ಖರೀದಿಸಿದೆ.

3 / 8

ಹಾಗೆಯೇ ಈ ಲೀಗ್​ನಲ್ಲಿ ಮುಂಬೈ ಇಂಡಿಯನ್ಸ್ ತಂಡವು ರಶೀದ್ ಖಾನ್ ಅವರನ್ನು ಆಯ್ಕೆ ಮಾಡಿಕೊಂಡಿದೆ. ರಶೀದ್ ಖಾನ್ ಜೊತೆಗೆ ಮುಂಬೈ ಇಂಡಿಯನ್ಸ್ ತಂಡವು ಲಿಯಾಮ್ ಲಿವಿಂಗ್‌ಸ್ಟನ್, ಕಗಿಸೊ ರಬಾಡ ಮತ್ತು ಸ್ಯಾಮ್ ಕರ್ರನ್ ಅವರನ್ನು ಕೂಡ ಆರಿಸಿಕೊಂಡಿದೆ.

4 / 8

ಇನ್ನು ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿಯು ತನ್ನ ಮಾರ್ಕ್ಯೂ ಆಟಗಾರನಾಗಿ ಎನ್ರಿಕ್ ನೋರ್ಕಿಯಾ ಅವರನ್ನು ಹೆಸರಿಸಿದೆ. ಸನ್‌ರೈಸರ್ಸ್ ಹೈದರಾಬಾದ್ ತನ್ನ ಮಾರ್ಕ್ಯೂ ಪ್ಲೇಯರ್ ಆಗಿ ಏಡನ್ ಮಾರ್ಕ್ರಾಮ್ ಅವರನ್ನು ಆಯ್ಕೆ ಮಾಡಿದೆ.

5 / 8

ರಾಜಸ್ಥಾನ್ ರಾಯಲ್ಸ್ ಫ್ರಾಂಚೈಸಿ ಜೋಸ್ ಬಟ್ಲರ್ ಅವರನ್ನು ಆಯ್ಕೆ ಮಾಡಿಕೊಂಡಿದೆ.

6 / 8

ಲಕ್ನೋ ಸೂಪರ್‌ಜೈಂಟ್ಸ್ ಫ್ರಾಂಚೈಸಿಯು ಕ್ವಿಂಟನ್ ಡಿಕಾಕ್ ಅವರನ್ನು ಆಯ್ಕೆ ಮಾಡಿದೆ.

7 / 8

CSA T20 ಲೀಗ್‌ನಲ್ಲಿ, ಪ್ರತಿ ತಂಡಕ್ಕೆ ಗರಿಷ್ಠ ಐದು ಆಟಗಾರರನ್ನು ಆಯ್ಕೆ ಮಾಡುವ ಅವಕಾಶ ನೀಡಲಾಗಿದೆ. ಈ ಆಯ್ಕೆಯ ಬಳಿಕ ಉಳಿದ ಆಟಗಾರರನ್ನು ಹರಾಜಿನ ಮೂಲಕ ಖರೀದಿಸಲಾಗುತ್ತದೆ. ಇಲ್ಲಿ ಪ್ರತಿ ತಂಡವು 10 ದಕ್ಷಿಣ ಆಫ್ರಿಕಾ ಮತ್ತು 7 ವಿದೇಶಿ ಆಟಗಾರರನ್ನು ಆಯ್ಕೆ ಮಾಡಬೇಕಾಗುತ್ತದೆ. ಹಾಗೆಯೇ ಪ್ಲೇಯಿಂಗ್ 11 ನಲ್ಲಿ 7 ದಕ್ಷಿಣ ಆಫ್ರಿಕಾದ ಆಟಗಾರರು ಮತ್ತು 4 ವಿದೇಶಿ ಆಟಗಾರರು ಇರಲಿದ್ದಾರೆ.

8 / 8

ಈಗಾಗಲೇ ಮಿನಿ ಐಪಿಎಲ್​ ಎಂದೇ ಗುರುತಿಸಿಕೊಂಡಿರುವ ಸಿಎಸ್​ಎ ಟಿ20 ಲೀಗ್ ಮುಂಬರುವ ದಿನಗಳಲ್ಲಿ ಮತ್ತಷ್ಟು ಜನಪ್ರಿಯತೆ ಪಡೆಯುವುದರಲ್ಲಿ ಅನುಮಾನವೇ ಇಲ್ಲ. ಏಕೆಂದರೆ ಈ ಲೀಗ್​ನ 6 ತಂಡಗಳನ್ನು ಐಪಿಎಲ್​ ಫ್ರಾಂಚೈಸಿಗಳೇ ಖರೀದಿಸಿರುವುದರಿಂದ ಐಪಿಎಲ್​ನಲ್ಲಿ ಕಾಣಿಸಿಕೊಳ್ಳುವ ಬಹುತೇಕ ವಿದೇಶಿ ಸ್ಟಾರ್ ಆಟಗಾರರು ಈ ಲೀಗ್​ನಲ್ಲಿ ಆಡಲಿದ್ದಾರೆ.

Published On - 2:00 pm, Thu, 11 August 22

Loading...
Unable to load recommendations.
Follow Us