Fastest Century Record: ಪ್ರತಿ ತಂಡಗಳ ಪರ ಅತೀ ವೇಗದ ಏಕದಿನ ಶತಕ ಸಿಡಿಸಿದ ಬ್ಯಾಟರ್​ಗಳ ಪಟ್ಟಿ ಇಲ್ಲಿದೆ

| Updated By: ಝಾಹಿರ್ ಯೂಸುಫ್

Updated on: Jun 21, 2023 | 8:30 PM

Fastest Century in Odi Cricket: ಹಾಗಿದ್ರೆ ಏಕದಿನ ಕ್ರಿಕೆಟ್​​ನಲ್ಲಿ ಪ್ರತಿ ತಂಡಗಳ ಪರ ಸ್ಪೋಟಕ ಶತಕ ಸಿಡಿಸಿದ ಬ್ಯಾಟರ್​ಗಳ ಪಟ್ಟಿ ಈ ಕೆಳಗಿನಂತಿದೆ.

1 / 12
Fastest Century in ODI: ಹರಾರೆಯಲ್ಲಿ ನಡೆದ ಏಕದಿನ ವಿಶ್ವಕಪ್​ನ ಅರ್ಹತಾ ಸುತ್ತಿನ ಪಂದ್ಯದಲ್ಲಿ ಝಿಂಬಾಬ್ವೆ ಆಟಗಾರ ಸಿಕಂದರ್ ರಾಝ ಭರ್ಜರಿ ಶತಕ ಸಿಡಿಸಿ ಮಿಂಚಿದ್ದಾರೆ. ನೆದರ್​ಲ್ಯಾಂಡ್ಸ್ ವಿರುದ್ಧದ ಈ ಪಂದ್ಯದಲ್ಲಿ ರಾಝ ಕೇವಲ 54 ಎಸೆತಗಳಲ್ಲಿ ಶತಕ ಪೂರೈಸಿದ್ದರು.

2 / 12
ಇದರೊಂದಿಗೆ ಝಿಂಬಾಬ್ವೆ ಪರ ಏಕದಿನ ಕ್ರಿಕೆಟ್​ನಲ್ಲಿ ಅತೀ ವೇಗದ ಶತಕ ಬಾರಿಸಿದ ದಾಖಲೆ ರಾಝ ಪಾಲಾಯಿತು. ಹಾಗಿದ್ರೆ ಏಕದಿನ ಕ್ರಿಕೆಟ್​​ನಲ್ಲಿ ಪ್ರತಿ ತಂಡಗಳ ಪರ ಸ್ಪೋಟಕ ಶತಕ ಸಿಡಿಸಿದ ಬ್ಯಾಟರ್​ಗಳು ಯಾರೆಲ್ಲಾ ಎಂದು ನೋಡೋಣ...

3 / 12
1- ಎಬಿ ಡಿವಿಲಿಯರ್ಸ್ (ಸೌತ್ ಆಫ್ರಿಕಾ)​: 2015 ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿ ಸೌತ್ ಆಫ್ರಿಕಾದ ಎಬಿ ಡಿವಿಲಿಯರ್ಸ್ ಕೇವಲ 31 ಎಸೆತಗಳಲ್ಲಿ ಶತಕ ಸಿಡಿಸಿದ್ದರು. ಇದು ಏಕದಿನ ಕ್ರಿಕೆಟ್​ ಇತಿಹಾಸದ ಅತ್ಯಂತ ವೇಗದ ಶತಕವಾಗಿದೆ.

4 / 12
2- ಕೊರಿ ಅ್ಯಂಡರ್ಸನ್ (ನ್ಯೂಜಿಲೆಂಡ್): 2014 ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿ ನ್ಯೂಜಿಲೆಂಡ್​ನ ಎಡಗೈ ದಾಂಡಿಗ ಕೊರಿ ಅ್ಯಂಡರ್ಸನ್ ಕೇವಲ 36 ಎಸೆತಗಳಲ್ಲಿ ಶತಕ ಬಾರಿಸಿದ್ದರು. ಇದು ಏಕದಿನ ಕ್ರಿಕೆಟ್​ನ 2ನೇ ಅತೀ ವೇಗದ ಶತಕವಾಗಿದೆ.

5 / 12
3- ಶಾಹಿದ್ ಅಫ್ರಿದಿ (ಪಾಕಿಸ್ತಾನ್): 1996 ರಲ್ಲಿ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಪಾಕಿಸ್ತಾನದ ಹೊಡಿಬಡಿ ದಾಂಡಿಗ ಶಾಹಿದ್ ಅಫ್ರಿದಿ ಕೇವಲ 37 ಎಸೆತಗಳಲ್ಲಿ ಶತಕ ಸಿಡಿಸಿದ್ದರು.

6 / 12
4- ಬ್ರಿಯಾನ್ ಲಾರಾ (ವೆಸ್ಟ್ ಇಂಡೀಸ್): 1999 ರಲ್ಲಿ ಬಾಂಗ್ಲಾದೇಶ್ ವಿರುದ್ಧದ ಪಂದ್ಯದಲ್ಲಿ ವಿಂಡೀಸ್​ನ ಸ್ಪೋಟಕ ಬ್ಯಾಟರ್ ಬ್ರಿಯಾನ್ ಲಾರಾ ಕೇವಲ 45 ಎಸೆತಗಳಲ್ಲಿ ಶತಕ ಬಾರಿಸಿದ್ದರು.

7 / 12
5- ಜೋಸ್ ಬಟ್ಲರ್ (ಇಂಗ್ಲೆಂಡ್): 2015 ರಲ್ಲಿ ಪಾಕಿಸ್ತಾನ್ ವಿರುದ್ಧದ ಪಂದ್ಯದಲ್ಲಿ ಇಂಗ್ಲೆಂಡ್​ನ ವಿಕೆಟ್ ಕೀಪರ್ ಬ್ಯಾಟ್ಸ್​ಮನ್ ಜೋಸ್ ಬಟ್ಲರ್ ಕೇವಲ 46 ಎಸೆತಗಳಲ್ಲಿ ಶತಕ ಪೂರೈಸಿದ್ದರು.

8 / 12
6- ಸನತ್ ಜಯಸೂರ್ಯ (ಶ್ರೀಲಂಕಾ): 1996 ರಲ್ಲಿ ಪಾಕಿಸ್ತಾನ್ ವಿರುದ್ಧದ ಪಂದ್ಯದಲ್ಲಿ ಶ್ರೀಲಂಕಾದ ಸನತ್ ಜಯಸೂರ್ಯ 48 ಎಸೆತಗಳಲ್ಲಿ ಶತಕ ಬಾರಿಸಿದ್ದರು.

9 / 12
7- ಕೆವಿನ್ ಓಬ್ರಿನ್ (ಐರ್ಲೆಂಡ್): 2011 ರಲ್ಲಿ ಇಂಗ್ಲೆಂಡ್ ವಿರುದ್ಧ ಐರ್ಲೆಂಡ್ ಆಟಗಾರ ಕೆವಿನ್ ಓಬ್ರಿನ್ ಕೇವಲ 50 ಎಸೆತಗಳಲ್ಲಿ ಶತಕ ಸಿಡಿಸಿದ್ದರು.

10 / 12
8- ಗ್ಲೆನ್ ಮ್ಯಾಕ್ಸ್​ವೆಲ್ (ಆಸ್ಟ್ರೇಲಿಯಾ): 2015 ರಲ್ಲಿ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಆಸ್ಟ್ರೇಲಿಯಾ ಆಲ್​ರೌಂಡರ್ ಗ್ಲೆನ್ ಮ್ಯಾಕ್ಸ್​ವೆಲ್ ಕೇವಲ 51 ಎಸೆತಗಳಲ್ಲಿ ಶತಕ ಪೂರೈಸಿದ್ದರು.

11 / 12
9- ವಿರಾಟ್ ಕೊಹ್ಲಿ (ಭಾರತ): 2013 ರಲ್ಲಿ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಕಿಂಗ್ ಕೊಹ್ಲಿ ಕೇವಲ 51 ಎಸೆತಗಳಲ್ಲಿ ಶತಕ ಸಿಡಿಸಿದ್ದರು. ಈ ಮೂಲಕ ಏಕದಿನ ಕ್ರಿಕೆಟ್​ನಲ್ಲಿ ಟೀಮ್ ಇಂಡಿಯಾ ಪರ ವೇಗದ ಶತಕ ಸಿಡಿಸಿದ ದಾಖಲೆಯನ್ನು ವಿರಾಟ್ ಕೊಹ್ಲಿ ಬರೆದಿದ್ದಾರೆ.

12 / 12
10- ಸಿಕಂದರ್ ರಾಝ (ಝಿಂಬಾಬ್ವೆ): 2023 ರಲ್ಲಿ ನೆದರ್​ಲ್ಯಾಂಡ್ಸ್ ವಿರುದ್ಧದ ವಿರುದ್ಧ ಪಂದ್ಯದಲ್ಲಿ ಜಿಂಬಾಬ್ವೆಯ ಸಿಕಂದರ್ ರಾಝ ಕೇವಲ 54 ಎಸೆತಗಳಲ್ಲಿ ಸೆಂಚುರಿ ಸಿಡಿಸಿ ದಾಖಲೆ ಬರೆದಿದ್ದಾರೆ.