- Kannada News Photo gallery Cricket photos MS Dhoni will not play till February Says Kasi Viswanathan
MS Dhoni: ಐಪಿಎಲ್ 2024 ರಲ್ಲಿ ಧೋನಿ ಆಡುತ್ತಾರಾ? ಮೌನ ಮುರಿದ CSK ಸಿಇಒ
IPL 2024: ರುತುರಾಜ್ ಗಾಯಕ್ವಾಡ್ ಅವರ ವಿವಾಹದ ಬಳಿಕ ನಾನು ಮಹೇಂದ್ರ ಸಿಂಗ್ ಧೋನಿಯನ್ನು ಭೇಟಿಯಾಗಿದ್ದೆ. ಈಗ ಅವರಿಗೆ ವೈದ್ಯರು ಮೂರು ವಾರಗಳ ಕಾಲ ವಿಶ್ರಾಂತಿ ಸೂಚಿಸಿದ್ದಾರೆ.
Updated on:Jun 21, 2023 | 11:53 PM

ಐಪಿಎಲ್ ಸೀಸನ್ 16 ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿದ್ದ ಮಹೇಂದ್ರ ಸಿಂಗ್ ಧೋನಿ ಮುಂದಿನ ಸೀಸನ್ ಆಡಲ್ವಾ? ಇಂತಹದೊಂದು ಪ್ರಶ್ನೆ ಹುಟ್ಟಲು ಮುಖ್ಯ ಕಾರಣ ಇತ್ತೀಚೆಗೆ ಸಿಎಸ್ಕೆ ಟ್ವಿಟರ್ ಖಾತೆಯಲ್ಲಿ ಕಾಣಿಸಿಕೊಂಡ ಎಮೋಷನಲ್ ವಿಡಿಯೋ.

ಏಕೆಂದರೆ ಐಪಿಎಲ್ ವೇಳೆಯೇ ಧೋನಿ ಮೊಣಕಾಲಿನ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದರು. ಅಲ್ಲದೆ ಐಪಿಎಲ್ ಬಳಿಕ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಹೀಗಾಗಿ ಸಿಎಸ್ಕೆ ನಾಯಕ ಮುಂದಿನ ಬಾರಿ ಕಣಕ್ಕಿಳಿಯುವುದಿಲ್ಲ ಎಂಬ ಸುದ್ದಿಗಳು ಹರಿದಾಡಿದ್ದವು. ಇದೀಗ ಈ ಎಲ್ಲಾ ಸುದ್ದಿಗಳಿಗೆ ಸಿಎಸ್ಕೆ ಸಿಇಒ ಕಾಶಿ ವಿಶ್ವನಾಥನ್ ಸ್ಪಷ್ಟನೆ ನೀಡಿದ್ದಾರೆ.

ಈ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿದ ಕಾಶಿ ವಿಶ್ವನಾಥನ್, ರುತುರಾಜ್ ಗಾಯಕ್ವಾಡ್ ಅವರ ವಿವಾಹದ ಬಳಿಕ ನಾನು ಮಹೇಂದ್ರ ಸಿಂಗ್ ಧೋನಿಯನ್ನು ಭೇಟಿಯಾಗಿದ್ದೆ. ಈಗ ಅವರಿಗೆ ವೈದ್ಯರು ಮೂರು ವಾರಗಳ ಕಾಲ ವಿಶ್ರಾಂತಿ ಸೂಚಿಸಿದ್ದಾರೆ. ಇದಾದ ಬಳಿಕವಷ್ಟೇ ರಿಹ್ಯಾಬ್ ಪ್ರಾರಂಭಿಸಲಿದ್ದಾರೆ ಎಂದರು.ಈ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿದ ಕಾಶಿ ವಿಶ್ವನಾಥನ್, ರುತುರಾಜ್ ಗಾಯಕ್ವಾಡ್ ಅವರ ವಿವಾಹದ ಬಳಿಕ ನಾನು ಮಹೇಂದ್ರ ಸಿಂಗ್ ಧೋನಿಯನ್ನು ಭೇಟಿಯಾಗಿದ್ದೆ. ಈಗ ಅವರಿಗೆ ವೈದ್ಯರು ಮೂರು ವಾರಗಳ ಕಾಲ ವಿಶ್ರಾಂತಿ ಸೂಚಿಸಿದ್ದಾರೆ. ಇದಾದ ಬಳಿಕವಷ್ಟೇ ರಿಹ್ಯಾಬ್ ಪ್ರಾರಂಭಿಸಲಿದ್ದಾರೆ ಎಂದರು.

ಇದೇ ವೇಳೆ ಧೋನಿ ಮುಂದಿನ ಸೀಸನ್ನಲ್ಲಿ ಆಡಲಿದ್ದಾರಾ ಎಂಬ ಪ್ರಶ್ನೆ ಕೇಳಲಾಗಿದೆ. ಇದಕ್ಕೆ ಉತ್ತರಿಸಿದ ಕಾಶಿ ವಿಶ್ವನಾಥನ್, ಅದನ್ನು ಈಗಲೇ ಹೇಳಲಾಗುವುದಿಲ್ಲ. ಕಾಲಿಗೆ ಶಸ್ತ್ರಚಿಕಿತ್ಸೆಯಾಗಿರುವ ಕಾರಣ ಅವರು ಸದ್ಯಕ್ಕೆ ಮೈದಾನಕ್ಕಿಳಿಯುವುದಿಲ್ಲ ಎಂದು ತಿಳಿಸಿದ್ದಾರೆ.

ಈ ಬಗ್ಗೆ ನಾನು ಧೋನಿ ಜೊತೆ ಮಾತನಾಡಿದಾಗ ಅವರು ಜನವರಿ-ಫೆಬ್ರವರಿ ತನಕ ಆಡುವುದಿಲ್ಲ ಎಂದು ಹೇಳಿದ್ದಾರೆ. ಅಲ್ಲದೆ ಧೋನಿಗೆ ಯಾವ ಸಮಯದಲ್ಲಿ ಏನು ಮಾಡಬೇಕೆಂದು ತಿಳಿದಿದೆ. ಹೀಗಾಗಿ ಅವರೇ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದು ಕಾಶಿ ವಿಶ್ವನಾಥನ್ ತಿಳಿಸಿದರು.

ಹೀಗಾಗಿ ಫೆಬ್ರವರಿ 2024 ರ ಬಳಿಕವಷ್ಟೇ ಧೋನಿ ಐಪಿಎಲ್ ಆಡುತ್ತಾರಾ ಅಥವಾ ತಂಡದ ಹೊಸ ಜವಾಬ್ದಾರಿಯೊಂದಿಗೆ ಸಿಎಸ್ಕೆ ಬಳಗದಲ್ಲಿ ಕಾಣಿಸಿಕೊಳ್ಳಲಿದ್ದಾರಾ ಎಂಬುದು ನಿರ್ಧಾರವಾಗಲಿದೆ.
Published On - 11:51 pm, Wed, 21 June 23
