- Kannada News Photo gallery Cricket photos Former Indian Cricketer and Coach Anil Kumble Know About Family Tree
Anil Kumble Family Tree: ಅನಿಲ್ ಕುಂಬ್ಳೆ ಫ್ಯಾಮಿಲಿ ಟ್ರೀ: ಅನಿಲ್ ಕುಂಬ್ಳೆ ಕುಟುಂಬದಲ್ಲಿ ಯಾರು ಯಾರು ಇದ್ದಾರೆ ಗೊತ್ತೇ?
Anil Kumble family tree: ಇಂದು ಭಾರತದ ಮಾಜಿ ಕ್ರಿಕೆಟಿಗ, ಕೋಚ್ ಹಾಗೂ ಕಾಮೆಂಟೇಟರ್ ಅನಿಲ್ ಕುಂಬ್ಳೆ ಅವರ 53ನೇ ಹುಟ್ಟುಹಬ್ಬ. 17 ಅಕ್ಟೋಬರ್ 1970 ರಂದು ಕರ್ನಾಟಕದ ಬೆಂಗಳೂರಿನಲ್ಲಿ ಜನಿಸಿದ ಇವರ ತಂದೆಯ ಹೆಸರು ಶ್ರೀ ಕೃಷ್ಣ ಸ್ವಾಮಿ ಮತ್ತು ತಾಯಿಯ ಹೆಸರು ಶ್ರೀಮತಿ ಸರೋಜ. ಇವರ ಹೆಂಡತಿಯ ಹೆಸರು ಚೇತನ ರಾಮತೀರ್ಥ. ಕುಂಬ್ಳೆ ಅವರಿಗೆ ಒಬ್ಬ ಮಗ ಮಾಯಾ ಮತ್ತು ಇಬ್ಬರು ಹೆಣ್ಣುಮಕ್ಕಳ ಹೆಸರು ಅರುಣಿ ಮತ್ತು ಸ್ವಸ್ತಿ.
Updated on: Oct 17, 2023 | 12:14 PM

ಅನಿಲ್ ಕುಂಬ್ಳೆ ಅವರಿಗೆ ಇಂದು (ಅ. 17) 53ನೇ ಹುಟ್ಟುಹಬ್ಬದ ಸಂಭ್ರಮ. 17 ಅಕ್ಟೋಬರ್ 1970 ರಂದು ಕರ್ನಾಟಕದ ಬೆಂಗಳೂರಿನಲ್ಲಿ ಜನಿಸಿದರು. ಇವರ ತಂದೆಯ ಹೆಸರು ಶ್ರೀ ಕೃಷ್ಣ ಸ್ವಾಮಿ ಮತ್ತು ತಾಯಿ ಶ್ರೀಮತಿ ಸರೋಜ. ಕುಂಬ್ಳೆ ಅವರ ಫ್ಯಾನ್ಸ್ ಬಳಗ ದೊಡ್ಡದಿದೆ. ಇವರ ಅಭಿಮಾನಿಗಳ ಪಟ್ಟಿಯಲ್ಲಿ ಹುಡುಗಿಯರು ಕೂಡ ಇದ್ದರು.

ಭಾರತೀಯ ಕ್ರಿಕೆಟ್‌ನಲ್ಲಿ 'ಜಂಬೋ' ಎಂದೇ ಖ್ಯಾತರಾಗಿರುವ ಅನಿಲ್ ಕುಂಬ್ಳೆ ಅತ್ಯಂತ ಸರಳ ಜೀವನ ನಡೆಸುತ್ತಿದ್ದಾರೆ. ಅವರ 18 ವರ್ಷಗಳ ಕ್ರಿಕೆಟ್ ಜೀವನದಲ್ಲಿ ಒಮ್ಮೆಯೂ ವಿವಾದದಲ್ಲಿ ಸಿಲುಕಿಕೊಳ್ಳಲಿಲ್ಲ. ಕ್ರಿಕೆಟ್ ಮೈದಾನದಲ್ಲಿ ಕುಂಬ್ಳೆ ನಾಯಕ ಹಾಗೂ ಆಟಗಾರನಾಗಿ ತಮ್ಮ ಜವಾಬ್ದಾರಿಯನ್ನು ನಿಭಾಯಿಸಿದ್ದಾರೆ. ಸ್ಪಿನ್ ಬೌಲರ್ ಆಗಿ ವೃತ್ತಿ ಜೀವನ ಆರಂಭಿಸಿದ ಕುಂಬ್ಳೆ, ಟೀಮ್ ಇಂಡಿಯಾ ನಾಯಕನೂ ಆಗಿದ್ದರು. ನಿವೃತ್ತಿಯ ನಂತರ ಅವರು ಭಾರತ ತಂಡದ ಕೋಚ್ ಜವಾಬ್ದಾರಿಯನ್ನೂ ಹೊತ್ತಿದ್ದರು.

ಅನಿಲ್ ಕುಂಬ್ಳೆ ಅವರ ಮಡದಿಯ ಹೆಸರು ಚೇತನಾ ರಾಮತೀರ್ಥ. ಚೇತನಾ ಅವರಿಗೆ ಇದು ಎರಡನೇ ಮದುವೆ. ಅನಿಲ್ ಕುಂಬ್ಳೆ ತಮ್ಮ ಪತ್ನಿ ಚೇತನಾ ಅವರನ್ನು ಅವರು ಕೆಲಸ ಮಾಡುತ್ತಿದ್ದ ಟ್ರಾವೆಲ್ ಏಜೆನ್ಸಿಯಲ್ಲಿ ಭೇಟಿಯಾದರು. ಆ ಸಮಯದಲ್ಲಿ ಚೇತನಾ ಮದುವೆಯಾಗಿದ್ದರು. ಆದರೆ ಸಂತೋಷವಾಗಿರಲಿಲ್ಲ.

1986 ರಲ್ಲಿ ಚೇತನಾ ಅವರು ಮೈಸೂರಿನಲ್ಲಿ ಸ್ಟೋರ್ ಬ್ರೋಕರ್ ಅವರನ್ನು ವಿವಾಹವಾಗಿದ್ದರು. ಆದಾಗ್ಯೂ, ಇವರಿಬ್ಬರ ನಡುವೆ ಸರಿಯಾದ ಹೊಂದಾಣಿಕೆ ಇರಲಿಲ್ಲ. ಹೀಗಾಗಿ ಗಂಡನಿಂದ ದೂರವಾಗಿ ಟ್ರಾವೆಲ್ ಏಜೆನ್ಸಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಈ ಮದುವೆಯಿಂದ ಚೇತನಾ ಅವರಿಗೆ ಮಗಳೂ ಇದ್ದರು. ಬಳಿಕ 1998ರಲ್ಲಿ ಕುಂಬ್ಳೆ ಬೆಂಬಲದೊಂದಿಗೆ ಚೇತನಾ ತನ್ನ ಪತಿಯಿಂದ ಬೇರ್ಪಟ್ಟರು.

ಚೇತನಾ-ಕುಂಬ್ಳೆ 1999 ರಲ್ಲಿ ವಿವಾಹವಾದರು. ಆದರೆ, ಚೇತನಾ ತನ್ನ ಮಗಳನ್ನು ತನ್ನೊಂದಿಗೆ ಇರಲು ಬಯಸಿದ್ದರು. ಇದಕ್ಕೆ ಕುಂಬ್ಳೆ ಕೂಡ ಒಪ್ಪಿಗೆ ಸೂಚಿಸಿದ್ದರು. ಆದರೆ ಮೊದಲ ಪತಿ ಇದಕ್ಕೆ ಒಪ್ಪೊರಲಿಲ್ಲ. ಬಳಿಕ ಕಾನೂನು ಹೋರಾಟ ನಡೆಸಿ ಕುಂಬ್ಳೆ-ಚೇತನಾ ಅವರಿಗೆ ನ್ಯಾಯ ಸಿಕ್ಕಿತು.

ಕುಂಬ್ಳೆ-ಚೇತನಾ ಅವರು ಈಗ ಅರುಣಿ, ಮಾಯಾ ಮತ್ತು ಸ್ವಸ್ತಿ ಎಂಬ ಮೂವರು ಮಕ್ಕಳ ಜೊತೆ ಖುಷಿಯಾಗಿದ್ದಾರೆ. ಅನಿಲ್ ಕುಂಬ್ಳೆ ಮೂವರೂ ಮಕ್ಕಳನ್ನು ತುಂಬಾ ಪ್ರೀತಿಸುತ್ತಾರೆ. ಟೀಮ್ ಇಂಡಿಯಾದ ಮಾಜಿ ಕೋಚ್ ತಮ್ಮ ಕುಟುಂಬದೊಂದಿಗೆ ಫೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುತ್ತಲೇ ಇರುತ್ತಾರೆ.




