IND vs SA: ಟೆಸ್ಟ್ ಸರಣಿಗೂ ಮುನ್ನ ನಿವೃತ್ತಿ ಘೋಷಿಸಿದ ಆಫ್ರಿಕಾ ತಂಡದ ಮಾಜಿ ನಾಯಕ!
IND vs SA: ಟೆಸ್ಟ್ ಸರಣಿ ಆರಂಭಕ್ಕೂ ಮುನ್ನ ದಕ್ಷಿಣ ಆಫ್ರಿಕಾ ತಂಡದ ಸ್ಟಾರ್ ಬ್ಯಾಟ್ಸ್‌ಮನ್ ಹಾಗೂ ಮಾಜಿ ನಾಯಕ ಡೀನ್ ಎಲ್ಗರ್ ದೊಡ್ಡ ಘೋಷಣೆ ಮಾಡಿದ್ದಾರೆ. ಅದರಂತೆ ಈ ಟೆಸ್ಟ್ ಸರಣಿ ತನ್ನ ಕೊನೆಯ ಸರಣಿಯಾಗಲಿದ್ದು, ಇದಾದ ಬಳಿಕ ವೃತ್ತಿಜೀವನದಿಂದ ನಿವೃತ್ತರಾಗುವುದಾಗಿ ಹೇಳಿಕೊಂಡಿದ್ದಾರೆ.
1 / 7
ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ 3 ಏಕದಿನ ಸರಣಿಯ ನಂತರ ಇದೀಗ ಉಭಯ ತಂಡಗಳ ನಡುವೆ 2 ಪಂದ್ಯಗಳ ಟೆಸ್ಟ್ ಸರಣಿ ನಡೆಯಲಿದ್ದು, ಮೊದಲ ಟೆಸ್ಟ್ ಪಂದ್ಯ ಡಿಸೆಂಬರ್ 26 ರಿಂದ ಡಿಸೆಂಬರ್ 30 ರ ನಡುವೆ ನಡೆಯಲಿದೆ.
2 / 7
ಆದರೆ ಈ ಟೆಸ್ಟ್ ಸರಣಿ ಆರಂಭಕ್ಕೂ ಮುನ್ನ ದಕ್ಷಿಣ ಆಫ್ರಿಕಾ ತಂಡದ ಸ್ಟಾರ್ ಬ್ಯಾಟ್ಸ್‌ಮನ್ ಹಾಗೂ ಮಾಜಿ ನಾಯಕ ಡೀನ್ ಎಲ್ಗರ್ ದೊಡ್ಡ ಘೋಷಣೆ ಮಾಡಿದ್ದಾರೆ. ಅದರಂತೆ ಈ ಟೆಸ್ಟ್ ಸರಣಿ ತನ್ನ ಕೊನೆಯ ಸರಣಿಯಾಗಲಿದ್ದು, ಇದಾದ ಬಳಿಕ ವೃತ್ತಿಜೀವನದಿಂದ ನಿವೃತ್ತರಾಗುವುದಾಗಿ ಹೇಳಿಕೊಂಡಿದ್ದಾರೆ
3 / 7
ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ 2025 ರ ದೃಷ್ಟಿಕೋನದಿಂದ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಟೆಸ್ಟ್ ಸರಣಿಯು ಬಹಳ ಮುಖ್ಯವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಭಾರತಕ್ಕೆ ಈ ಸರಣಿಯನ್ನು ಗೆಲ್ಲುವುದು ಬಹಳ ಮುಖ್ಯ. ಈ ನಡುವೆ ಈ ಸರಣಿಗೂ ಮುನ್ನ ದಕ್ಷಿಣ ಆಫ್ರಿಕಾದ ದಿಗ್ಗಜ ಬ್ಯಾಟ್ಸ್‌ಮನ್ ನಿವೃತ್ತಿ ಘೋಷಿಸಿದ್ದು, ಲಕ್ಷಾಂತರ ಅಭಿಮಾನಿಗಳು ಅಚ್ಚರಿ ಮೂಡಿಸಿದ್ದಾರೆ.
4 / 7
ಭಾರತ ವಿರುದ್ಧದ ಟೆಸ್ಟ್ ಸರಣಿ ತನ್ನ ಕೊನೆಯ ಸರಣಿ ಎಂದು ದಕ್ಷಿಣ ಆಫ್ರಿಕಾದ ಸ್ಟಾರ್ ಬ್ಯಾಟ್ಸ್‌ಮನ್ ಡೀನ್ ಎಲ್ಗರ್ ಹೇಳಿದ್ದಾರೆ. ಈ ಸರಣಿಯ ನಂತರ ಅವರು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿಯಾಗಲಿದ್ದಾರೆ. ಎಲ್ಗರ್ ಅವರ ಈ ನಿರ್ಧಾರ ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ.
5 / 7
ಈ ಬಗ್ಗೆ ಮಾಹಿತಿ ನೀಡಿರುವ ಎಲ್ಗರ್, ಕ್ರಿಕೆಟ್ ಆಡುವುದು ಯಾವಾಗಲೂ ನನ್ನ ಕನಸು. ನನಗೆ ಇನ್ನೂ ದೊಡ್ಡ ವಿಷಯವೆಂದರೆ ನನ್ನ ದೇಶವನ್ನು ಪ್ರತಿನಿಧಿಸಲು ನನಗೆ ಅವಕಾಶ ಸಿಕ್ಕಿತು. 12 ವರ್ಷಗಳಿಂದ ನನ್ನ ದೇಶಕ್ಕಾಗಿ ಆಡುತ್ತಿರುವುದು ನನಗೆ ಒಂದು ಭಾಗ್ಯ. ಈ ಅವಕಾಶ ಸಿಕ್ಕಿರುವುದು ನನ್ನ ಅದೃಷ್ಟ. ಆದರೆ ಒಂದು ದಿನ ಪ್ರತಿಯೊಂದು ಒಳ್ಳೆಯ ವಿಷಯವೂ ಕೊನೆಗೊಳ್ಳಬೇಕು, ನನ್ನ ವೃತ್ತಿಜೀವನವೂ ಕೊನೆಗೊಳ್ಳಲಿದೆ.
6 / 7
ಭಾರತ ವಿರುದ್ಧದ ಸರಣಿ ನನ್ನ ಕೊನೆಯ ಸರಣಿಯಾಗಲಿದೆ. ಇದಾದ ನಂತರ ನಾನು ಕ್ರಿಕೆಟ್‌ಗೆ ವಿದಾಯ ಹೇಳಲಿದ್ದೇನೆ. ಈ ಆಟ ನನಗೆ ಬಹಳಷ್ಟು ನೀಡಿದೆ. ನಾನು ಕೇಪ್ ಟೌನ್‌ನಲ್ಲಿ ನನ್ನ ವೃತ್ತಿಜೀವನದ ಮೊದಲ ರನ್ ಗಳಿಸಿದ್ದೇನೆ ಮತ್ತು ನಾನು ಈ ಮೈದಾನದಲ್ಲಿ ಕೊನೆಯ ರನ್ ಗಳಿಸಲಿದ್ದೇನೆ, ಇದು ನನಗೆ ಬಹಳ ಸ್ಮರಣೀಯವಾಗಿರುತ್ತದೆ ಎಂದು ಅವರು ಹೇಳಿದ್ದಾರೆ.
7 / 7
ವಾಸ್ತವವಾಗಿ ನ್ಯೂಜಿಲೆಂಡ್ ವಿರುದ್ಧ ಡೀನ್ ಎಲ್ಗರ್ ತಮ್ಮ ಚೊಚ್ಚಲ ಪಂದ್ಯವನ್ನು ಇದೇ ಮೈದಾನದಲ್ಲಿ ಆಡಿದ್ದರು. ಆಫ್ರಿಕಾ ತಂಡದ ಮಾಜಿ ನಾಯಕ ಡೀನ್ ಎಲ್ಗರ್ ಇದುವರೆಗೆ ಒಟ್ಟು 84 ಟೆಸ್ಟ್ ಪಂದ್ಯಗಳನ್ನು ಆಡಿದ್ದು, ಇದರಲ್ಲಿ 5146 ರನ್ ಗಳಿಸಿದ್ದಾರೆ. ಅವರು ಬ್ಯಾಟ್‌ನಿಂದ 13 ಶತಕ ಮತ್ತು 23 ಅರ್ಧ ಶತಕಗಳು ಸಹ ಸಿಡಿದಿವೆ.