ಶಿಖರ್ ಧವನ್ ಟು ಜಾವಗಲ್ ಶ್ರೀನಾಥ್: ವಿಚ್ಛೇದನ ಪಡೆದ ಟೀಮ್ ಇಂಡಿಯಾ ಕ್ರಿಕೆಟಿಗರ ಪಟ್ಟಿ ಇಲ್ಲಿದೆ ನೋಡಿ

Edited By:

Updated on: Sep 08, 2021 | 2:49 PM

divorced cricketers: ಶಿಖರ್ ಧವನ್​ಗೂ ಮುನ್ನ ಟೀಮ್ ಇಂಡಿಯಾವನ್ನು ಪ್ರತಿನಿಧಿಸಿದ್ದ ಹಲವು ಆಟಗಾರರು ವಿಚ್ಛೇದನ ಪಡೆದು 2ನೇ ವಿವಾಹವಾಗಿದ್ದರು. ಹೀಗೆ ಮೊದಲ ಪತ್ನಿಗೆ ಡೈವೋರ್ಸ್ ನೀಡಿದ ಪ್ರಮುಖ ಆಟಗಾರರ ಪಟ್ಟಿ ಹೀಗಿದೆ.

1 / 7
 ಟೀಮ್ ಇಂಡಿಯಾದ ಆರಂಭಿಕ ಆಟಗಾರ ಶಿಖರ್ ಧವನ್​ ಹಾಗೂ ಪತ್ನಿ ಆಯೇಷಾ ಮುಖರ್ಜಿ ತಮ್ಮ ದಾಂಪತ್ಯ ಜೀವನಕ್ಕೆ ವಿದಾಯ ಹೇಳಿದ್ದಾರೆ. 9 ವರ್ಷಗಳ ದೀರ್ಘ ದಾಂಪತ್ಯ ಜೀವನ್ನು ಕೊನೆಗೊಳಿಸಿರುವುದಾಗಿ ಸೋಷಿಯಲ್ ಮೀಡಿಯಾ ಮೂಲಕ ಆಯೇಷಾ ಬಹಿರಂಗಪಡಿಸಿದ್ದಾರೆ. ಇದರೊಂದಿಗೆ ಮತ್ತೊಮ್ಮೆ ಟೀಮ್ ಇಂಡಿಯಾ ಕ್ರಿಕೆಟಿಗರ ಡೈವೋರ್ಸ್ ವಿಷಯಗಳು ಮುನ್ನೆಲೆಗೆ ಬಂದಿದೆ.

ಟೀಮ್ ಇಂಡಿಯಾದ ಆರಂಭಿಕ ಆಟಗಾರ ಶಿಖರ್ ಧವನ್​ ಹಾಗೂ ಪತ್ನಿ ಆಯೇಷಾ ಮುಖರ್ಜಿ ತಮ್ಮ ದಾಂಪತ್ಯ ಜೀವನಕ್ಕೆ ವಿದಾಯ ಹೇಳಿದ್ದಾರೆ. 9 ವರ್ಷಗಳ ದೀರ್ಘ ದಾಂಪತ್ಯ ಜೀವನ್ನು ಕೊನೆಗೊಳಿಸಿರುವುದಾಗಿ ಸೋಷಿಯಲ್ ಮೀಡಿಯಾ ಮೂಲಕ ಆಯೇಷಾ ಬಹಿರಂಗಪಡಿಸಿದ್ದಾರೆ. ಇದರೊಂದಿಗೆ ಮತ್ತೊಮ್ಮೆ ಟೀಮ್ ಇಂಡಿಯಾ ಕ್ರಿಕೆಟಿಗರ ಡೈವೋರ್ಸ್ ವಿಷಯಗಳು ಮುನ್ನೆಲೆಗೆ ಬಂದಿದೆ.

2 / 7

ಶಿಖರ್ ಧವನ್​ಗೂ ಮುನ್ನ ಟೀಮ್ ಇಂಡಿಯಾವನ್ನು ಪ್ರತಿನಿಧಿಸಿದ್ದ ಹಲವು ಆಟಗಾರರು ವಿಚ್ಛೇದನ ಪಡೆದು 2ನೇ ವಿವಾಹವಾಗಿದ್ದರು. ಹೀಗೆ ಮೊದಲ ಪತ್ನಿಗೆ ಡೈವೋರ್ಸ್ ನೀಡಿದ ಪ್ರಮುಖ ಆಟಗಾರರ ಪಟ್ಟಿ ಹೀಗಿದೆ.

3 / 7

ಧವನ್ ಅಲ್ಲದೆ ಟೀಮ್ ಇಂಡಿಯಾ ಹಲವು ಆಟಗಾರರು ವಿಚ್ಛೇದಿತ ಮಹಿಳೆಯರನ್ನು ವಿವಾಹವಾಗಿದ್ದಾರೆ ಎಂಬುದು ಅನೇಕರಿಗೆ ಗೊತ್ತಿಲ್ಲ. ಹೀಗೆ ತಮ್ಮ ಕೆರಿಯರ್ ಉತ್ತುಂಗದಲ್ಲಿರುವಾಗ ಡೈವೋರ್ಸ್ ಪಡೆದ ಮಹಿಳೆಯರನ್ನು ವಿವಾಹವಾದ ಟೀಮ್ ಇಂಡಿಯಾದ ಸ್ಟಾರ್ ಕ್ರಿಕೆಟಿಗರ ಪಟ್ಟಿ ಹೀಗಿದೆ.

4 / 7

ಭಾರತದ ಮಾಜಿ ನಾಯಕ ಮೊಹಮ್ಮದ್ ಅಜರುದ್ದೀನ್ 1996 ರಲ್ಲಿ ನಟಿ ಸಂಗೀತಾ ಬಿಜಲಾನಿಯನ್ನು ಮದುವೆಯಾಗಲು ತನ್ನ ಮೊದಲ ಪತ್ನಿ ನೌರೀನ್ ಗೆ ವಿಚ್ಛೇದನ ನೀಡಿದ್ದರು. ಆ ಬಳಿಕ ಸಂಗೀತ ಬಿಜಲಾನಿಯವರಿಂದ ಕೂಡ ಅಜರ್ ವಿಚ್ಛೇದನ ಪಡೆದಿದ್ದರು.

5 / 7

ಭಾರತದ ಮಾಜಿ ಬ್ಯಾಟ್ಸ್ ಮನ್ ವಿನೋದ್ ಕಾಂಬ್ಳಿ 1998 ರಲ್ಲಿ ತನ್ನ ಬಾಲ್ಯದ ಗೆಳೆತಿ ನೊಯೆಲ್ಲಾ ಲೂಯಿಸ್ ಜೊತೆ ವಿವಾಹವಾಗಿದ್ದರು. ಆದರೆ ಕೆಲವು ವರ್ಷಗಳ ನಂತರ ಮಾಜಿ ಮಾಡೆಲ್ ಆಂಡ್ರಿಯಾ ಹೆವಿಟ್ ಅವರೊಂದಿಗೆ ಡೇಟಿಂಗ್ ಆರಂಭಿಸಿದ್ದ ಕಾಂಬ್ಳಿ, ಲೂಯಿಸ್​ಗೆ ಡೈವೋರ್ಸ್​ ನೀಡಿ ಆಂಡ್ರಿಯಾರನ್ನು ವಿವಾಹವಾದರು.

6 / 7

ಟೀಮ್ ಇಂಡಿಯಾ ಮಾಜಿ ವೇಗಿ ಜಾವಗಲ್ ಶ್ರೀನಾಥ್ ಕೂಡ ಮೊದಲ ಪತ್ನಿ ಜ್ಯೋತ್ಸ್ನಾ ಅವರಿಂದ ವಿಚ್ಛೇದನ ಪಡೆದು, 2008 ರಲ್ಲಿ ಮಾಧವಿ ಪತ್ರಾವಳಿ ಎಂಬ ಪತ್ರಕರ್ತೆಯನ್ನು ವಿವಾಹವಾಗಿದ್ದರು.

7 / 7

ಮಾಜಿ ಕ್ರಿಕೆಟಿಗ ಯೋಗರಾಜ್ ಸಿಂಗ್ ಸಹ ಎರಡು ವಿವಾಹವಾಗಿದ್ದರು. ಮೊದಲ ಪತ್ನಿ ಶಬ್ಮಾನ್ ಸಿಂಗ್ (ಟೀಮ್ ಇಂಡಿಯಾ ಯುವರಾಜ್ ಸಿಂಗ್ ಅವರ ತಾಯಿ) ​ ಅವರಿಂದ ವಿಚ್ಛೇದನ ಪಡೆದು ಯೋಗರಾಜ್ ಸಿಂಗ್ ಸತ್ವೀರ್ ಕೌರ್ ಅವರನ್ನು ವಿವಾಹವಾಗಿದ್ದರು.

Loading...
Unable to load recommendations.
Follow Us