BBL 2021-22: 22 ಬೌಂಡರಿ, 4 ಸಿಕ್ಸರ್.. 41 ಎಸೆತಗಳಲ್ಲಿ ಶತಕ; ಟಿ20ಯಲ್ಲಿ 154 ರನ್ ಚಚ್ಚಿದ ಗ್ಲೆನ್ ಮ್ಯಾಕ್ಸ್‌ವೆಲ್
TV9 Web | Updated By: ಪೃಥ್ವಿಶಂಕರ
Updated on:
Jan 19, 2022 | 5:21 PM
BBL 2021-22: ಗ್ಲೆನ್ ಮ್ಯಾಕ್ಸ್‌ವೆಲ್ ಬಿಗ್ ಬ್ಯಾಷ್ ಲೀಗ್‌ನ ವೇಗದ ಶತಕವನ್ನು ಗಳಿಸದೇ ಇರಬಹುದು ಆದರೆ ಅವರು 150 ರನ್ ಗಳಿಸುವಲ್ಲಿ ಯಶಸ್ವಿಯಾದರು. ಮ್ಯಾಕ್ಸ್‌ವೆಲ್ 62 ಎಸೆತಗಳಲ್ಲಿ 150 ರನ್ ಪೂರೈಸಿದರು.
1 / 5
ಬಿಗ್ ಬ್ಯಾಷ್ ಲೀಗ್ 2021-22 ರಲ್ಲಿ ತನ್ನ ಕೊನೆಯ ಪಂದ್ಯದಲ್ಲಿ, ಮೆಲ್ಬೋರ್ನ್ ಸ್ಟಾರ್ಸ್ ನಾಯಕ ಗ್ಲೆನ್ ಮ್ಯಾಕ್ಸ್‌ವೆಲ್ ಬೌಲರ್‌ಗಳ ಮೇಲೆ ಸವಾರಿ ಮಾಡಿದ್ದಾರೆ. ಈ ಸ್ಫೋಟಕ ಬಲಗೈ ಬ್ಯಾಟ್ಸ್‌ಮನ್ ಹೋಬರ್ಟ್ ಹರಿಕೇನ್ಸ್ ವಿರುದ್ಧ ಅದ್ಭುತ ಶತಕ ಗಳಿಸಿದರು. ಅಷ್ಟೇ ಅಲ್ಲ, ಗ್ಲೆನ್ ಮ್ಯಾಕ್ಸ್‌ವೆಲ್ ಬಿಗ್ ಬ್ಯಾಷ್ ಇತಿಹಾಸದಲ್ಲಿ 150 ರನ್ ಗಳಿಸಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
2 / 5
ಗ್ಲೆನ್ ಮ್ಯಾಕ್ಸ್‌ವೆಲ್ ಹೋಬರ್ಟ್ ಹರಿಕೇನ್ಸ್ ವಿರುದ್ಧ ಆರಂಭಿಕರಾಗಿ ಕಣಕ್ಕಿಳಿದು, ಬಂದ ತಕ್ಷಣ ಬೌಲರ್‌ಗಳ ಹುಟ್ಟಡಗಿಸಿದರು. ಕೇವಲ 20 ಎಸೆತಗಳಲ್ಲಿ ಅರ್ಧಶತಕ ಗಳಿಸಿದ ಮ್ಯಾಕ್ಸ್‌ವೆಲ್ 41 ಎಸೆತಗಳಲ್ಲಿ ಶತಕ ಪೂರೈಸಿದರು.
3 / 5
ಗ್ಲೆನ್ ಮ್ಯಾಕ್ಸ್‌ವೆಲ್ ಬಿಗ್ ಬ್ಯಾಷ್ ಲೀಗ್‌ನಲ್ಲಿ ಎರಡನೇ ಬಾರಿಗೆ ಶತಕ ಗಳಿಸಿದರು ಮತ್ತು ಈ ಪಂದ್ಯಾವಳಿಯ ಇತಿಹಾಸದಲ್ಲಿ ಎರಡನೇ ವೇಗದ ಶತಕ ಗಳಿಸಿದ ಆಟಗಾರರಾದರು. ಕ್ರೇಗ್ ಸಿಮನ್ಸ್ 39 ಎಸೆತಗಳಲ್ಲಿ ಶತಕ ಮತ್ತು ಗ್ಲೆನ್ ಮ್ಯಾಕ್ಸ್‌ವೆಲ್ 2 ಎಸೆತಗಳಲ್ಲಿ ಶತಕ ಗಳಿಸಿದರು. ಅದೇ ಸಮಯದಲ್ಲಿ, ಲ್ಯೂಕ್ ರೈಟ್ 44 ಎಸೆತಗಳಲ್ಲಿ ಶತಕ ಗಳಿಸಿದರು.
4 / 5
ಗ್ಲೆನ್ ಮ್ಯಾಕ್ಸ್‌ವೆಲ್ ಬಿಗ್ ಬ್ಯಾಷ್ ಲೀಗ್‌ನ ವೇಗದ ಶತಕವನ್ನು ಗಳಿಸದೇ ಇರಬಹುದು ಆದರೆ ಅವರು 150 ರನ್ ಗಳಿಸುವಲ್ಲಿ ಯಶಸ್ವಿಯಾದರು. ಮ್ಯಾಕ್ಸ್‌ವೆಲ್ 62 ಎಸೆತಗಳಲ್ಲಿ 150 ರನ್ ಪೂರೈಸಿದರು. ಅವರ ಇನ್ನಿಂಗ್ಸ್‌ನಲ್ಲಿ, ಮ್ಯಾಕ್ಸ್‌ವೆಲ್ ಕೇವಲ ಸಿಕ್ಸರ್ ಮತ್ತು ಬೌಂಡರಿಗಳಿಂದ 102 ರನ್ ಗಳಿಸಿದರು. ಮ್ಯಾಕ್ಸ್‌ವೆಲ್ 22 ಬೌಂಡರಿ ಮತ್ತು 4 ಸಿಕ್ಸರ್‌ಗಳನ್ನು ಬಾರಿಸಿದರು.
5 / 5
ಗ್ಲೆನ್ ಮ್ಯಾಕ್ಸ್‌ವೆಲ್ ಓಪನರ್ ಆಗಿ ಕ್ರೀಸ್‌ನಲ್ಲಿ ಹೆಜ್ಜೆ ಹಾಕಿ, ಪೆವಿಲಿಯನ್‌ಗೆ ಅಜೇಯರಾಗಿ ಮರಳಿದರು. ಗ್ಲೆನ್ ಮ್ಯಾಕ್ಸ್‌ವೆಲ್ ಅವರ ಈ ಇನ್ನಿಂಗ್ಸ್ ಆಧಾರದ ಮೇಲೆ ಮೆಲ್ಬೋರ್ನ್ ಸ್ಟಾರ್ಸ್ 20 ಓವರ್‌ಗಳಲ್ಲಿ 273 ರನ್ ಗಳಿಸಿತು, ಇದು ಬಿಗ್ ಬ್ಯಾಷ್ ಲೀಗ್ ಇತಿಹಾಸದಲ್ಲಿ ಗರಿಷ್ಠ ಸ್ಕೋರ್ ಆಗಿದೆ.