Glenn Maxwell: ‘ಗ್ಲೆನ್ ರಾಮನ್’​ ಇನ್ನು ಐಪಿಎಲ್​ನಲ್ಲಿ ವಿದೇಶಿ ಆಟಗಾರನಲ್ಲ: ​ಅಭಿಮಾನಿಗಳಿಂದ ಫುಲ್ ಟ್ರೋಲ್

| Updated By: ಝಾಹಿರ್ ಯೂಸುಫ್

Updated on: Mar 23, 2022 | 4:36 PM

Glenn Maxwell: ಮ್ಯಾಕ್ಸ್‌ವೆಲ್ ತಮ್ಮ ವೃತ್ತಿಜೀವನದಲ್ಲಿ ಇದುವರೆಗೆ 7 ಟೆಸ್ಟ್, 116 ODI ಮತ್ತು 84 T20 ಅಂತರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ. ಟೆಸ್ಟ್‌ನಲ್ಲಿ 1 ಶತಕದ ನೆರವಿನಿಂದ 339 ರನ್ ಗಳಿಸಿದ್ದರೆ, ಏಕದಿನದಲ್ಲಿ 2 ಶತಕ ಮತ್ತು 22 ಅರ್ಧಶತಕಗಳ ಸಹಾಯದಿಂದ ಒಟ್ಟು 3230 ರನ್ ಗಳಿಸಿದ್ದಾರೆ. ಅಂತಾರಾಷ್ಟ್ರೀಯ ಟಿ20 ಮಾದರಿಯಲ್ಲಿ 3 ಶತಕ ಹಾಗೂ 9 ಅರ್ಧ ಶತಕಗಳನ್ನು ಬಾರಿಸಿದ್ದಾರೆ.

1 / 5
ಐಪಿಎಲ್ ಸೀಸನ್​ 15 ಗಾಗಿ ಆರ್​ಸಿಬಿ ಆಟಗಾರರು ಭರ್ಜರಿ ಅಭ್ಯಾಸದಲ್ಲಿ ನಿರತರಾಗಿದ್ದರೆ, ಅತ್ತ ತಂಡದ ಸ್ಟಾರ್ ಆಟಗಾರ ಗ್ಲೆನ್ ಮ್ಯಾಕ್ಸ್​ವೆಲ್ ಹಸೆಮಣೆ ಏರಿದ್ದಾರೆ. ಕೆಲ ದಿನಗಳ ಹಿಂದೆ ಮ್ಯಾಕ್ಸ್​ವೆಲ್ ತಮ್ಮ ಬಹುಕಾಲದ ಗೆಳತಿ ಭಾರತೀಯ ಮೂಲಕ ವಿನಿ ರಾಮನ್ ಅವರನ್ನು ವರಿಸಿಕೊಂಡಿದ್ದಾರೆ. ವಿವಾಹ ಕಾರ್ಯಕ್ರಮ ನಿಮಿತ್ತ ಮ್ಯಾಕ್ಸ್​ವೆಲ್ ಆರ್​ಸಿಬಿ ತಂಡದ ಆರಂಭಿಕ ಪಂದ್ಯಗಳಿಂದ ಹೊರಗುಳಿಯಲಿದ್ದಾರೆ.

2 / 5
ಇತ್ತ ಮ್ಯಾಕ್ಸ್​ವೆಲ್ ಭಾರತೀಯ ಮೂಲದ ಯುವತಿಯನ್ನು ವಿವಾಹವಾಗುತ್ತಿದ್ದಂತೆ ಅವರು ಹಾಫ್ ಇಂಡಿಯನ್ (ಅರ್ಧ ಭಾರತೀಯ) ಆಗಿದ್ದಾರೆ ಎಂದು ಅಭಿಮಾನಿಗಳು ಖುಷಿ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಇನ್ಮುಂದೆ ಅವರು ಐಪಿಎಲ್​ನಲ್ಲಿ ವಿದೇಶಿ ಆಟಗಾರನಾಗಿ ಕಾಣಿಸಿಕೊಳ್ಳಬಾರದು. ಭಾರತೀಯ ಮೂಲದ ಕ್ರಿಕೆಟಿಗನಾಗಿ ಅವರನ್ನು ಆಯ್ಕೆ ಮಾಡಬೇಕೆಂದು ಕೆಲವರು ಟ್ವಿಟಿಸಿದ್ದಾರೆ.

3 / 5
ತಮಾಷೆಯೆಂದರೆ ಕೆಲ ಗ್ಲೆನ್ ಮ್ಯಾಕ್ಸ್​ವೆಲ್ ಅವರ ಹೆಸರನ್ನೂ ಕೂಡ ಬದಲಿಸಿದ್ದಾರೆ. ವಿನಿ ರಾಮನ್ ಅವರನ್ನು ಮದುವೆಯಾಗಿರುವ ಕಾರಣ, ಇನ್ಮುಂದೆ ಮ್ಯಾಕ್ಸ್​ವೆಲ್ ಐಪಿಎಲ್​ನಲ್ಲಿ ಗ್ಲೆನ್ ರಾಮನ್ ಹೆಸರಿನಲ್ಲಿ ಭಾರತೀಯ ಆಟಗಾರನಾಗಿ ಕಾಣಿಸಿಕೊಳ್ಳಬೇಕೆಂದು ಕಿಚಾಯಿಸಿದ್ದಾರೆ. ಅಷ್ಟೇ ಅಲ್ಲದೆ ಮ್ಯಾಕ್ಸಿ ಭಾರತ ತಂಡದಲ್ಲಿ ಕಾಣಿಸಿಕೊಳ್ಳಲಿ ಎಂದು ಮತ್ತೋರ್ವ ಅಭಿಮಾನಿ ದೂರದಾಸೆ ವ್ಯಕ್ತಪಡಿಸಿದ್ದಾರೆ.

4 / 5
ಇನ್ನೋರ್ವ ಅಭಿಮಾನಿಯು ಮುರುಗನ್ ಮ್ಯಾಕ್ಸ್​ವೆಲ್ ಎಂಬ ಹೆಸರು ನೀಡಿದ್ದು, ಈ ಮೂಲಕ ತಮಿಳು ಯುವತಿಯನ್ನು ಮದುವೆಯಾಗಿರುವ ಮ್ಯಾಕ್ಸ್​ವೆಲ್​ ಹೆಸರಿಗೆ ತಮಿಳ್ ಟಚ್ ನೀಡಿದ್ದಾರೆ. ಒಟ್ಟಿನಲ್ಲಿ ಗ್ಲೆನ್ ಮ್ಯಾಕ್ಸ್​ವೆಲ್ ಅವರನ್ನು ಅಭಿಮಾನಿಗಳು ಕಿಚಾಯಿಸಿರುವ ಫೋಟೋ ಹಾಗೂ ಟ್ರೋಲ್​ಗಳು ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

5 / 5
ಕಳೆದ ಸೀಸನ್​ನಲ್ಲಿ ಆರ್​ಸಿಬಿ ಪರ ಭರ್ಜರಿ ಪ್ರದರ್ಶನ ನೀಡಿದ್ದ ಗ್ಲೆನ್ ಮ್ಯಾಕ್ಸ್​ವೆಲ್ ಈ ಬಾರಿಯ ಆರಂಭಿಕ ಪಂದ್ಯಗಳಿಗೆ ಅಲಭ್ಯರಾಗುವುದು ಬಹುತೇಕ ಖಚಿತವಾಗಿದೆ. ಹೀಗಾಗಿ ಪಂಜಾಬ್ ಕಿಂಗ್ಸ್ ವಿರುದ್ದದ ಪಂದ್ಯದಲ್ಲಿ ಗ್ಲೆನ್ ಮ್ಯಾಕ್ಸ್​ವೆಲ್ ಕಾಣಿಸಿಕೊಳ್ಳುವುದಿಲ್ಲ.