ಪಾಕಿಸ್ತಾನ್ ಸೂಪರ್ ಲೀಗ್​ಗೆ ಮ್ಯಾಕ್ಸ್​ವೆಲ್ ಎಂಟ್ರಿ… ಎಷ್ಟು ಕೋಟಿಗೆ ಗೊತ್ತಾ?

Updated on: Jan 28, 2026 | 2:08 PM

Glenn Maxwell in PSL 2026: ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ಸತತ 13 ಸೀಸನ್​ ಆಡಿದ್ದ ಗ್ಲೆನ್ ಮ್ಯಾಕ್ಸ್​ವೆಲ್ ಈ ಬಾರಿಯ ಐಪಿಎಲ್​ನಿಂದ ಹೊರಗುಳಿದಿದ್ದಾರೆ. ಈ ಹೊರಗುಳಿಯುವಿಕೆಯ ಬೆನ್ನಲ್ಲೇ ಇದೀಗ ಪಾಕಿಸ್ತಾನ್ ಸೂಪರ್ ಲೀಗ್​ನಲ್ಲಿ ಒಪ್ಪಂದ ಮಾಡಿಕೊಂಡಿದ್ದಾರೆ. ಈ ಮೂಲಕ ಚೊಚ್ಚಲ ಬಾರಿ ಪಿಎಸ್​ಎಲ್​ ಆಡಲು ಸಜ್ಜಾಗಿದ್ದಾರೆ.

1 / 5
ಇಂಡಿಯನ್ ಪ್ರೀಮಿಯರ್ ಲೀಗ್​ಗೆ (IPL 2026) ಗುಡ್ ಬೈ ಹೇಳಿರುವ ಆಸ್ಟ್ರೇಲಿಯಾದ ಸ್ಫೋಟಕ ದಾಂಡಿಗ ಗ್ಲೆನ್ ಮ್ಯಾಕ್ಸ್​ವೆಲ್ (Glenn Maxwell) ಪಾಕಿಸ್ತಾನ್ ಸೂಪರ್ ಲೀಗ್​ನಲ್ಲಿ (PSL 2026) ಕಣಕ್ಕಿಳಿಯಲಿದ್ದಾರೆ. ಪಿಎಸ್​ಎಲ್​ನ 11ನೇ ಆವೃತ್ತಿಯ ಹರಾಜಿಗೂ ಮುನ್ನ  ಪೇಶಾವರ್ ಝಲ್ಮಿ ಫ್ರಾಂಚೈಸಿಯು ಡೈರೆಕ್ಟನ್ ಸೈನಿಂಗ್ ಆಯ್ಕೆ ಮೂಲಕ ಗ್ಲೆನ್ ಮ್ಯಾಕ್ಸ್​ವೆಲ್ ಅವರನ್ನು ತಂಡಕ್ಕೆ ಸೇರಿಸಿಕೊಂಡಿದೆ.

2 / 5
ಅದರಂತೆ ಪಾಕಿಸ್ತಾನ್ ಸೂಪರ್ ಲೀಗ್​ನ 11ನೇ ಆವೃತ್ತಿಯಲ್ಲಿ ಗ್ಲೆನ್ ಮ್ಯಾಕ್ಸ್​ವೆಲ್ ಪೇಶಾವರ್ ಝಲ್ಮಿ ತಂಡದ ಪರ ಕಣಕ್ಕಿಳಿಯಲಿದ್ದಾರೆ. ಅಂದರೆ ಬಾಬರ್ ಆಝಂ ಮುನ್ನಡೆಸಲಿರುವ ಪೇಶಾವರ್ ಝಲ್ಮಿ ಪರ ಮ್ಯಾಕ್ಸ್​ವೆಲ್ ಬ್ಯಾಟ್ ಬೀಸುವುದನ್ನು ಎದುರು ನೋಡಬಹುದು.

3 / 5
ಇನ್ನು ಇದೇ ಮೊದಲ ಬಾರಿಗೆ ಪಾಕಿಸ್ತಾನ್ ಸೂಪರ್ ಲೀಗ್​ನಲ್ಲಿ ಕಣಕ್ಕಿಳಿಯಲಿರುವ ಗ್ಲೆನ್ ಮ್ಯಾಕ್ಸ್​ವೆಲ್​ಗೆ ಪೇಶಾವರ್ ಝಲ್ಮಿ ಫ್ರಾಂಚೈಸಿಯಿಂದ ಸಿಗಲಿರುವ ಮೊತ್ತ  4.5 ಕೋಟಿ ಪಾಕಿಸ್ತಾನ್ ರೂಪಾಯಿ. ಅಂದರೆ ಭಾರತೀಯ ಮೌಲ್ಯ 1.47 ಕೋಟಿ ರೂ. ಮಾತ್ರ ಸಂಭಾವನೆ ಪಡೆಯಲಿದ್ದಾರೆ. 

4 / 5
ಇದಕ್ಕೂ ಮುನ್ನ ಗ್ಲೆನ್ ಮ್ಯಾಕ್ಸ್​ವೆಲ್ ಐಪಿಎಲ್​ನಲ್ಲಿ ಪಡೆದಿದ್ದ ಮೊತ್ತ 4.20 ಕೋಟಿ ರೂ. ಐಪಿಎಲ್ 2025 ರಲ್ಲಿ ಪಂಜಾಬ್ ಕಿಂಗ್ಸ್ ಪರ ಕಣಕ್ಕಿಳಿದಿದ್ದ ಮ್ಯಾಕ್ಸ್​ವೆಲ್ ಗಾಯದ ಕಾರಣ ಅರ್ಧದಲ್ಲೇ ಟೂರ್ನಿ ತೊರೆದಿದ್ದರು. ಅಲ್ಲದೆ ಈ ಬಾರಿ ವೈಯುಕ್ತಿಕ ಕಾರಣಗಳಿಂದಾಗಿ ಐಪಿಎಲ್​ಗೆ ಹೆಸರು ನೊಂದಾಯಿಸಿಕೊಳ್ಳುತ್ತಿಲ್ಲ ಎಂದು ತಿಳಿಸಿದ್ದರು.

5 / 5
ಇದೀಗ ಪಾಕಿಸ್ತಾನ್ ಸೂಪರ್ ಲೀಗ್​ ಫ್ರಾಂಚೈಸಿ ಜೊತೆ ಒಪ್ಪಂದ ಮಾಡಿಕೊಳ್ಳುವ ಮೂಲಕ ಗ್ಲೆನ್ ಮ್ಯಾಕ್ಸ್​ವೆಲ್ ಅಚ್ಚರಿ ಮೂಡಿಸಿದ್ದಾರೆ. ಅದರಂತೆ ಈ ಬಾರಿಯ ಪಿಎಸ್​ಎಲ್​ನಲ್ಲಿ ಮ್ಯಾಕ್ಸ್​ವೆಲ್ ಪೇಶಾವರ್ ಝಲ್ಮಿ ಪರ ಕಣಕ್ಕಿಳಿಯುವುದನ್ನು ಎದುರು ನೋಡಬಹುದು.