- Kannada News Photo gallery Cricket photos GT vs CSK IPL 2023 Ahmedabad Weather Check here weather forecast, rain prediction for IPL 2023 match
GT vs CSK Weather Report: ಅಹ್ಮದಾಬಾದ್ನಲ್ಲಿ ಭಾರೀ ಮಳೆ: ಗುಜರಾತ್-ಚೆನ್ನೈ ಪಂದ್ಯ ನಡೆಯುತ್ತಾ?: ಇಲ್ಲಿದೆ ಹವಾಮಾನ ವರದಿ
IPL 2023, GT vs CSK: ನರೇಂದ್ರ ಮೋದಿ ಕ್ರೀಡಾಂಗಣ ಗುಜರಾತ್ ಟೈಟಾನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ನಡುವಣ ಮೊದಲ ಪಂದ್ಯಕ್ಕೆ ಸಜ್ಜಾಗಿ ನಿಂತಿದೆ. ಆದರೆ, ಅಹ್ಮದಾಬಾದ್ನಲ್ಲಿ ಗುರುವಾರ ಸಂಜೆ ಭಾರೀ ಮಳೆ ಆಗಿದ್ದು ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿದೆ.
Updated on:Mar 31, 2023 | 10:05 AM

ಇಂಡಿಯನ್ ಪ್ರೀಮಿಯರ್ ಲೀಗ್ ಫೀವರ್ ಈಗಾಗಲೇ ಶುರುವಾಗಿದೆ. 16ನೇ ಆವೃತ್ತಿಯ ಐಪಿಎಲ್ಗೆ ಇಂದು ಚಾಲನೆ ಸಿಗಲಿದ್ದು ಅಹ್ಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡ ಮುಖಾಮುಖಿ ಆಗಲಿದೆ.

ನರೇಂದ್ರ ಮೋದಿ ಕ್ರೀಡಾಂಗಣ ಮೊದಲ ಪಂದ್ಯಕ್ಕೆ ಸಂಪೂರ್ಣ ಸಜ್ಜಾಗಿ ನಿಂತಿದೆ. ಆದರೆ, ಅಹ್ಮದಾಬಾದ್ನಲ್ಲಿ ಗುರುವಾರ ಸಂಜೆ ಭಾರೀ ಮಳೆ ಆಗಿದ್ದು ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿದೆ.

ಗುಜರಾತ್-ಚೆನ್ನೈ ಆಟಗಾರರು ಮೈದಾನದಲ್ಲಿ ಅಭ್ಯಾಸ ನಡೆಸುತ್ತಿರುವಾಗ ದಿಢೀರ್ ಮಳೆ ಸುರಿದಿದೆ. ನಂತರ ಆಟಗಾರರು ಮಳೆಗೆ ಒದ್ದೆಯಾಗಿಕೊಂಡು ಡ್ರೆಸ್ಸಿಂಗ್ ರೂಮ್ಗೆ ತೆರಳುವುದು ಕಂಡುಬಂತು.

ಇಂದು ಪಂದ್ಯದ ದಿನ ಮಳೆ ಆಗಲಿದೆಯೇ ಎಂಬ ಅನುಮಾನ ಅಭಿಮಾನಿಗಳಲ್ಲಿ ಮೂಡಿದೆ. ಆದರೆ, ಅಕ್ವಾ ವೆದರ್ ಹೇಳುವ ಪ್ರಕಾರ, ಇಂದು ಜಿಟಿ-ಸಿಎಸ್ಕೆ ನಡುವಣ ಪಂದ್ಯ ನಡೆಯುವಾಗ ಮಳೆಯ ಸಾಧ್ಯತೆ ಇಲ್ಲ ಎಂದು ಹೇಳಿದೆ.

ಗುರುವಾರದ ರೀತಿ ಶುಕ್ರವಾರ ಸಂಜೆ ಮಳೆ ಆಗುವ ಸಾಧ್ಯತೆ ಇಲ್ಲ. ಅಹ್ಮದಾಬಾದ್ನಲ್ಲಿ ಇಂದು 33 ಡಿಗ್ರಿ ತಾಪಮಾನ ಇರಲಿದೆ. ಸಂಜೆ ಹಾಗೂ ರಾತ್ರಿ ವೇಳೆಗೆ ಇದು 23 ಡಿಗ್ರಿಗೆ ಇಳಿಯಲಿದೆ. ಹೀಗಾಗಿ ಮಳೆ ಬರುವ ಯಾವುದೇ ಸಾಧ್ಯತೆ ಇಲ್ಲ ಎಂದು ಅಕ್ವಾ ವೆದರ್ ಹೇಳಿದೆ.

ಐಪಿಎಲ್ 2023 ಉದ್ಘಾಟನಾ ಸಮಾರಂಭಕ್ಕೆ ನರೇಂದ್ರ ಮೋದಿ ಕ್ರೀಡಾಂಗಣ ಸಜ್ಜಾಗಿ ನಿಂತಿದ್ದು ಬಣ್ಣ ಬಣ್ಣಗಳ ಎಲ್ಇಡಿ ಲೈಟ್ನಿಂದ ಮೈದಾನ ಕಂಗೊಳಿಸುತ್ತಿದೆ. ವಿಶೇಷ ಲೇಸರ್ ಶೋ ನಡೆಯಲಿದ್ದು ಖ್ಯಾತ ಗಾಯಕ ಅರಿಜಿತ್ ಸಿಂಗ್, ನಟಿ ತಮನ್ನಾ ಭಾಟಿಯಾ, ರಶ್ಮಿಕಾ ಮಂದಣ್ಣ ಪ್ರದರ್ಶನ ನೀಡಲಿದ್ದಾರೆ.

ಐಪಿಎಲ್ ಉದ್ಘಾಟನಾ ಸಮಾರಂಭವು ಸಂಜೆ 6 ಗಂಟೆಗೆ ಪ್ರಾರಂಭವಾಗುವ ನಿರೀಕ್ಷೆಯಿದೆ ಮತ್ತು ಸುಮಾರು 45 ನಿಮಿಷಗಳ ಕಾಲ ನಡೆಯಲಿದೆ ಎಂಬ ಮಾಹಿತಿ ಇದೆ. ವಿಶೇಷ ಎಂದರೆ ನಾಲ್ಕು ವರ್ಷಗಳ ನಂತರ ಐಪಿಎಲ್ ಭಾರತದಲ್ಲಿ ಆಯೋಜನೆಯಾಗುತ್ತಿದೆ.
Published On - 10:05 am, Fri, 31 March 23
























