- Kannada News Photo gallery Cricket photos IPL 2023: CSK sign Akash Singh as injured Mukesh Choudhary's replacement
IPL 2023: ಮೊದಲ ಪಂದ್ಯಕ್ಕೂ ಮುನ್ನ CSK ತಂಡಕ್ಕೆ ಹೊಸ ಆಟಗಾರ ಎಂಟ್ರಿ
IPL 2023 Kannada: ಚೆನ್ನೈ ಸೂಪರ್ ಕಿಂಗ್ಸ್ ತಂಡ: ಎಂಎಸ್ ಧೋನಿ (ನಾಯಕ), ಭಗತ್ ವರ್ಮಾ, ಅಜಯ್ ಮಂಡಲ್, ನಿಶಾಂತ್ ಸಿಂಧು, ಶೇಕ್ ರಶೀದ್, ಬೆನ್ ಸ್ಟೋಕ್ಸ್ , ಅಜಿಂಕ್ಯ ರಹಾನೆ, ಡೆವೊನ್ ಕಾನ್ವೆ, ರುತುರಾಜ್ ಗಾಯಕ್ವಾಡ್, ಅಂಬಟಿ ರಾಯುಡು, ಸುಭ್ರಾಂಶು ಸೇನಾಪತಿ, ಮೊಯಿನ್ ಅಲಿ, ಶಿವಂ ದುಬೆ, ರಾಜವರ್ಧನ್ ಹಂಗರ್ಗೇಕರ್.
Updated on: Mar 31, 2023 | 2:31 PM

Gujarat Titans vs Chennai Super Kings: ರಂಗೀನ್ ಕ್ರಿಕೆಟ್ ಟೂರ್ನಿ ಇಂಡಿಯನ್ ಪ್ರೀಮಿಯರ್ ಲೀಗ್ನ (IPL 2023) 16ನೇ ಆವೃತ್ತಿಗೆ ಇಂದು ಚಾಲನೆ ದೊರೆಯಲಿದೆ. ಅಹಮದಾಬಾದ್ನಲ್ಲಿ ನಡೆಯಲಿರುವ ಮೊದಲ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗಲಿದೆ. ಆದರೆ ಈ ಪಂದ್ಯಕ್ಕೂ ಮುನ್ನ ಸಿಎಸ್ಕೆ ತಂಡಕ್ಕೆ ಹೊಸ ಆಟಗಾರ ಎಂಟ್ರಿ ಕೊಟ್ಟಿರುವುದು ವಿಶೇಷ.

ಹೌದು, ಸಿಎಸ್ಕೆ ತಂಡದ ಪ್ರಮುಖ ಬೌಲರ್ ಮುಖೇಶ್ ಚೌಧರಿ ಐಪಿಎಲ್ನಿಂದ ಹೊರಗುಳಿದಿದ್ದಾರೆ. ಬೆನ್ನು ನೋವಿನ ಸಮಸ್ಯೆಯಿಂದ ಬಳಲುತ್ತಿರುವ ಚೌಧರಿ ಐಪಿಎಲ್ ಆಡಲು ಸಂಪೂರ್ಣ್ ಫಿಟ್ನೆಸ್ ಹೊಂದಿಲ್ಲ. ಹೀಗಾಗಿ ಸಿಎಸ್ಕೆ ತಂಡದಿಂದ ಹೊರಗುಳಿಯಲು ಯುವ ವೇಗಿ ನಿರ್ಧರಿಸಿದ್ದಾರೆ.

ಇತ್ತ ಮುಖೇಶ್ ಚೌಧರಿ ಹೊರನಡೆಯುತ್ತಿದ್ದಂತೆ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿಯು ಮತ್ತೋರ್ವ ಯುವ ವೇಗಿ ಆಕಾಶ್ ಸಿಂಗ್ ರನ್ನು ತಂಡಕ್ಕೆ ಆಯ್ಕೆ ಮಾಡಿದೆ. ಈ ಹಿಂದೆ ರಾಜಸ್ಥಾನ್ ರಾಯಲ್ಸ್ ಪರ ಆಡಿದ್ದ 20 ರ ಹರೆಯದ ಆಕಾಶ್ ಸಿಂಗ್ ಈ ಬಾರಿ ಹರಜಾಗಿರಲಿಲ್ಲ.

ಇದೀಗ ಮುಖೇಶ್ ಚೌಧರಿ ಹೊರಗುಳಿಯುತ್ತಿದ್ದಂತೆ ಯುವ ಎಡಗೈ ವೇಗಿಯಾಗಿ ಆಕಾಶ್ ಸಿಂಗ್ಗೆ ಅದೃಷ್ಟ ಖುಲಾಯಿಸಿದೆ. ಅದರಂತೆ ಈ ಬಾರಿಯ ಟೂರ್ನಿಯಲ್ಲಿ ಆಕಾಶ್ ಸಿಂಗ್ ಸಿಎಸ್ಕೆ ತಂಡದ ಜೆರ್ಸಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಇದಕ್ಕೂ ಮುನ್ನ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಆಯ್ಕೆಯಾಗಿದ್ದ ನ್ಯೂಜಿಲೆಂಡ್ ವೇಗಿ ಕೈಲ್ ಜೇಮಿಸನ್ ಗಾಯದ ಕಾರಣ ಹೊರಗುಳಿದಿದ್ದರು. ಅಲ್ಲದೆ ಅವರ ಬದಲಿಗೆ ಸೌತ್ ಆಫ್ರಿಕಾ ವೇಗಿ ಸಿಸಂದ ಮಗಲಾ ಅವರನ್ನು ಆಯ್ಕೆ ಮಾಡಲಾಗಿತ್ತು. ಇದೀಗ ಮತ್ತೋರ್ವ ಹೊಸ ವೇಗಿಯಾಗಿ ಆಕಾಶ್ ಸಿಂಗ್ ಸಿಎಸ್ಕೆ ತಂಡಕ್ಕೆ ಎಂಟ್ರಿ ಕೊಟ್ಟಿದ್ದಾರೆ.

ಚೆನ್ನೈ ಸೂಪರ್ ಕಿಂಗ್ಸ್ ತಂಡ: ಎಂಎಸ್ ಧೋನಿ (ನಾಯಕ), ಭಗತ್ ವರ್ಮಾ, ಅಜಯ್ ಮಂಡಲ್, ನಿಶಾಂತ್ ಸಿಂಧು, ಶೇಕ್ ರಶೀದ್, ಬೆನ್ ಸ್ಟೋಕ್ಸ್ , ಅಜಿಂಕ್ಯ ರಹಾನೆ, ಡೆವೊನ್ ಕಾನ್ವೆ, ರುತುರಾಜ್ ಗಾಯಕ್ವಾಡ್, ಅಂಬಟಿ ರಾಯುಡು, ಸುಭ್ರಾಂಶು ಸೇನಾಪತಿ, ಮೊಯಿನ್ ಅಲಿ, ಶಿವಂ ದುಬೆ, ರಾಜವರ್ಧನ್ ಹಂಗರ್ಗೇಕರ್, ಡ್ವೈನ್ ಪ್ರಿಟೋರಿಯಸ್, ಮಿಚೆಲ್ ಸ್ಯಾಂಟ್ನರ್, ರವೀಂದ್ರ ಜಡೇಜಾ, ತುಷಾರ್ ದೇಶಪಾಂಡೆ, ರವೀಂದ್ರ ಜಡೇಜಾ, ತುಷಾರ್ ದೇಶಪಾಂಡೆ, , ಸಿಮರ್ಜೀತ್ ಸಿಂಗ್, ದೀಪಕ್ ಚಾಹರ್, ಪ್ರಶಾಂತ್ ಸೋಲಂಕಿ, ಮಹೀಶ್ ತೀಕ್ಷಣ, ಸಿಸಂದ ಮಗಲಾ, ಆಕಾಶ್ ಸಿಂಗ್.



















