Updated on:Mar 31, 2023 | 3:50 PM
ಐಪಿಎಲ್ 16ನೇ ಆವೃತ್ತಿ ಇಂದಿನಿಂದ ಆರಂಭವಾಗುತ್ತಿದೆ. ಎಲ್ಲಾ ಆವೃತ್ತಿಗಳಂತೆ ಈ ಆವೃತ್ತಿಯಲ್ಲೂ ಪ್ರತಿ ತಂಡದಲ್ಲಿಯೂ ಹಲವು ಯುವ ಹಾಗೂ ಹಲವು ಹಿರಿಯ ಆಟಗಾರರ ದಂಡೆ ಇದೆ. ಹಾಗಿದ್ದರೆ ಪ್ರತಿ ತಂಡದಲ್ಲಿರುವ ಅತ್ಯಂತ ಕಿರಿಯ ಆಟಗಾರ ಹಾಗೂ ಅತ್ಯಂತ ಹಿರಿಯ ಆಟಗಾರ ಯಾರು ಎಂಬುದ ವಿವರ ಇಲ್ಲಿದೆ.
ಸನ್ ರೈಸರ್ಸ್ ಹೈದರಾಬಾದ್: ಕಿರಿಯ ಆಟಗಾರ- ನಿತೀಶ್ ಕುಮಾರ್ ರೆಡ್ಡಿ (19 ವರ್ಷ), ಹಿರಿಯ ಆಟಗಾರ- ಆದಿಲ್ ರಶೀದ್ (35 ವರ್ಷ)
ರಾಯಲ್ ಚಾಲೆಂಜರ್ಸ್ ಬೆಂಗಳೂರು: ಕಿರಿಯ ಆಟಗಾರ- ಮಹಿಪಾಲ್ ಲೊಮಾರೋರ್ (23 ವರ್ಷ), ಹಿರಿಯ ಆಟಗಾರ- ಫಾಫ್ ಡುಪ್ಲೆಸಿಸ್ (38 ವರ್ಷ)
ರಾಜಸ್ಥಾನ್ ರಾಯಲ್ಸ್: ಕಿರಿಯ ಆಟಗಾರ- ಕುನಾಲ್ ಸಿಂಗ್ ರಾಥೋಡ್ (20 ವರ್ಷ), ಹಿರಿಯ ಆಟಗಾರ- ಆರ್. ಅಶ್ವಿನ್ (36 ವರ್ಷ)
ಪಂಜಾಬ್ ಕಿಂಗ್ಸ್: ಕಿರಿಯ ಆಟಗಾರ- ರಾಜ್ ಬಾವಾ (20 ವರ್ಷ), ಹಿರಿಯ ಆಟಗಾರ- ಶಿಖರ್ ಧವನ್ (37 ವರ್ಷ)
ಮುಂಬೈ ಇಂಡಿಯನ್ಸ್: ಕಿರಿಯ ಆಟಗಾರ- ತಿಲಕ್ ವರ್ಮಾ (20 ವರ್ಷ), ಹಿರಿಯ ಆಟಗಾರ- ರೋಹಿತ್ ಶರ್ಮಾ (35 ವರ್ಷ)
ಲಕ್ನೋ ಸೂಪರ್ ಜೈಂಟ್ಸ್: ಕಿರಿಯ ಆಟಗಾರ- ಮಯಾಂಕ್ ಯಾದವ್ (20 ವರ್ಷ), ಹಿರಿಯ ಆಟಗಾರ- ಅಮಿತ್ ಮಿಶ್ರಾ (40 ವರ್ಷ)
ಕೋಲ್ಕತ್ತಾ ನೈಟ್ ರೈಡರ್ಸ್: ಕಿರಿಯ ಆಟಗಾರ- ಸುಯೇಶ್ ಶರ್ಮಾ (19 ವರ್ಷ), ಹಿರಿಯ ಆಟಗಾರ- ಡೇವಿಡ್ ವೀಸೆ (37 ವರ್ಷ)
ಗುಜರಾತ್ ಟೈಟಾನ್ಸ್: ಕಿರಿಯ ಆಟಗಾರ- ನೂರ್ ಅಹ್ಮದ್ (18 ವರ್ಷ), ಹಿರಿಯ ಆಟಗಾರ- ವೃದ್ಧಿಮಾನ್ ಸಾಹ (38 ವರ್ಷ)
ಡೆಲ್ಲಿ ಕ್ಯಾಪಿಟಲ್ಸ್: ಕಿರಿಯ ಆಟಗಾರ- ಯಶ್ ಧುಲ್ (20 ವರ್ಷ), ಹಿರಿಯ ಆಟಗಾರ- ಡೇವಿಡ್ ವಾರ್ನರ್ (36 ವರ್ಷ)
ಚೆನ್ನೈ ಸೂಪರ್ ಕಿಂಗ್ಸ್: ಕಿರಿಯ ಆಟಗಾರ - ಶೇಖ್ ರಶೀದ್ (18 ವರ್ಷ), ಹಿರಿಯ ಆಟಗಾರ - ಎಂಎಸ್ ಧೋನಿ (41 ವರ್ಷ)
Published On - 3:48 pm, Fri, 31 March 23