- Kannada News Photo gallery Cricket photos Gujarat Titans' Sai Sudharsan Earns More Money in TNPL Than IPL
TNPL ನಲ್ಲಿ IPL ಗಿಂತ ಹೆಚ್ಚು ಸಂಭಾವನೆ ಪಡೆಯುತ್ತಿರುವ ಸಾಯಿ ಸುದರ್ಶನ್..!
Sai Sudharsan: ಐಪಿಎಲ್ಗಿಂತ ಹೆಚ್ಚಿನ ಸಂಭಾವನೆಯನ್ನು ಸಾಯಿ ಸುದರ್ಶನ್ ತಮಿಳುನಾಡುವ ಪ್ರೀಮಿಯರ್ ಲೀಗ್ ಮೂಲಕ ಪಡೆಯುತ್ತಿದ್ದಾರೆ.
Updated on: Jun 14, 2023 | 8:59 PM

ಐಪಿಎಲ್ ಸೀಸನ್ 16 ಫೈನಲ್ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿ ಸುದ್ದಿಯಾಗಿದ್ದ ಸಾಯಿ ಸುದರ್ಶನ್ ಇದೀಗ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಈ ಬಾರಿ ತಮಿಳುನಾಡು ಪ್ರೀಮಿಯರ್ ಲೀಗ್ನಲ್ಲಿ ಎಂಬುದಷ್ಟೇ ವ್ಯತ್ಯಾಸ.

ತಮಿಳುನಾಡು ಪ್ರೀಮಿಯರ್ ಲೀಗ್ನ ಮೊದಲ ಪಂದ್ಯದಲ್ಲೇ ಸಾಯಿ ಸುದರ್ಶನ್ 45 ಎಸೆತಗಳಲ್ಲಿ 4 ಭರ್ಜರಿ ಸಿಕ್ಸ್ ಹಾಗೂ 8 ಫೋರ್ನೊಂದಿಗೆ 87 ರನ್ ಸಿಡಿಸಿದ್ದಾರೆ. ಈ ಮೂಲಕ ಲೈಕಾ ಕೋವೈ ಕಿಂಗ್ಸ್ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ.

ವಿಶೇಷ ಎಂದರೆ ಸಾಯಿ ಸುದರ್ಶನ್ ಐಪಿಎಲ್ನಲ್ಲಿ ಪಡೆಯುವ ಮೊತ್ತಕ್ಕಿಂತಲೂ ಅಧಿಕ ಸಂಭಾವನೆಯನ್ನು ಲೈಕಾ ಕೋವೈ ಕಿಂಗ್ಸ್ ನೀಡುತ್ತಿದೆ.

ಅಂದರೆ ಗುಜರಾತ್ ಟೈಟಾನ್ಸ್ ಫ್ರಾಂಚೈಸಿಯು ಐಪಿಎಲ್ 2022ರ ಹರಾಜಿನಲ್ಲಿ ಸಾಯಿ ಸುದರ್ಶನ್ ಅವರನ್ನು ಕೇವಲ 20 ಲಕ್ಷ ರೂ.ಗೆ ಖರೀದಿಸಿತ್ತು. ಅಲ್ಲದೆ ಈ ಬಾರಿಯ ಐಪಿಎಲ್ನಲ್ಲೂ ಇಪ್ಪತ್ತು ಲಕ್ಷ ರೂ. ಸಂಭಾವನೆ ನೀಡಿತ್ತು.

ಆದರೆ ತಮಿಳುನಾಡುವ ಪ್ರೀಮಿಯರ್ ಲೀಗ್ ಹರಾಜಿನಲ್ಲಿ ಲೈಕಾ ಕೋವೈ ಕಿಂಗ್ಸ್ ಫ್ರಾಂಚೈಸಿಯು ಸಾಯಿ ಸುದರ್ಶನ್ ಅವರನ್ನು ಬರೋಬ್ಬರಿ 21.60 ಲಕ್ಷ ರೂ.ಗೆ ಖರೀದಿಸಿದೆ.

ಅಂದರೆ ಐಪಿಎಲ್ಗಿಂತ ಹೆಚ್ಚಿನ ಸಂಭಾವನೆಯನ್ನು ಸಾಯಿ ಸುದರ್ಶನ್ ತಮಿಳುನಾಡುವ ಪ್ರೀಮಿಯರ್ ಲೀಗ್ ಮೂಲಕ ಪಡೆಯುತ್ತಿದ್ದಾರೆ. ಇದೀಗ ಐಪಿಎಲ್ ಫೈನಲ್ ಮೂಲಕ ಸೆನ್ಸೇಷನ್ ಸೃಷ್ಟಿಸಿರುವ ಸಾಯಿ ಮುಂದಿನ ಸೀಸನ್ IPL ಹರಾಜಿನಲ್ಲಿ ಕಾಣಿಸಿಕೊಳ್ಳಲಿದ್ದಾರಾ ಕಾದು ನೋಡಬೇಕಿದೆ.




