- TV9 Kannada Photo gallery Cricket photos Gurnoor Brar Faces ICC Action After Edgbaston ODI Controversy
IND vs ENG: ಟೀಂ ಇಂಡಿಯಾದ ಯುವ ವೇಗಿಗೆ ದಂಡದ ಬರೆ ಎಳೆದ ಐಸಿಸಿ
Gurnoor Brar ICC Penalty: ಇಂಗ್ಲೆಂಡ್ ವಿರುದ್ಧದ ಎಡ್ಜ್‌ಬಾಸ್ಟನ್ ಏಕದಿನ ಪಂದ್ಯದಲ್ಲಿ ಗುರ್ನೂರ್ ಬ್ರಾರ್ 2 ನಿರ್ಣಾಯಕ ವಿಕೆಟ್‌ಗಳನ್ನು ಕಬಳಿಸಿ ಭಾರತದ ಗೆಲುವಿಗೆ ಕಾರಣರಾದರು. ಆದರೆ, ಡಕೆಟ್ ಕಡೆಗೆ ಚೆಂಡು ಎಸೆದ ಕಾರಣ ಐಸಿಸಿ ನಿಯಮ ಉಲ್ಲಂಘಿಸಿ ದಂಡನೆಗೆ ಗುರಿಯಾದರು. ಅವರಿಗೆ ಎಚ್ಚರಿಕೆ ಹಾಗೂ ಒಂದು ಡಿಮೆರಿಟ್ ಪಾಯಿಂಟ್ ನೀಡಲಾಗಿದ್ದು, ಬ್ರಾರ್ ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ. ಇದು ಅವರ ಭವಿಷ್ಯದ ಆಟದ ಮೇಲೆ ಪರಿಣಾಮ ಬೀರಬಹುದು.
Updated on: Jul 16, 2026 | 6:16 PM

ಎಡ್ಜ್‌ಬಾಸ್ಟನ್‌ನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯವನ್ನು ಟೀಂ ಇಂಡಿಯಾ 6 ವಿಕೆಟ್ಗಳಿಂದ ಗೆದ್ದುಕೊಳ್ಳುವಲ್ಲಿ ತಂಡದ ಯುವ ವೇಗಿ ಗುರ್ನೂರ್ ಬ್ರಾರ್ ಅವರ ಪ್ರದರ್ಶನವೂ ಪ್ರಮುಖ ಪಾತ್ರವಹಿಸಿತ್ತು. ಈ ಪಂದ್ಯದಲ್ಲಿ ಅದ್ಭುತವಾಗಿ ಬೌಲಿಂಗ್ ಮಾಡಿದ್ದ ಬ್ರಾರ್, 2 ಪ್ರಮುಖ ವಿಕೆಟ್‌ಗಳನ್ನು ಕಬಳಿಸಿದ್ದರು. ಇಂಗ್ಲೆಂಡ್‌ನ ಆರಂಭಿಕರಿಬ್ಬರನ್ನು ಬ್ರಾರ್ ಒಂದೇ ಓವರ್ನಲ್ಲಿ ಔಟ್ ಮಾಡಿದ್ದರು (PC-BCCI).

ಆರಂಭಿಕರಿಬ್ಬರ ವಿಕೆಟ್ ಪತನದ ಬಳಿಕ ಇಂಗ್ಲೆಂಡ್ ತಂಡದ ಬ್ಯಾಟಿಂಗ್ ಸಂಪೂರ್ಣ ಕುಸಿಯಿತು. ಹೀಗಾಗಿ ಇಂಗ್ಲೆಂಡ್ ತಂಡಕ್ಕೆ ಪೂರ್ಣ 50 ಓವರ್ಗಳನ್ನು ಆಡಲು ಸಾಧ್ಯವಾಗಲಿಲ್ಲ. ಅಂದರೆ ಬ್ರಾರ್ ತೆಗೆದ ಮೊದಲ ಎರಡು ವಿಕೆಟ್ಗಳು ಇಂಗ್ಲೆಂಡ್ ಸೋಲಿಗೆ ಪ್ರಮುಖ ಕಾರಣವಾಗಿದ್ದವು. ಆದರೆ ಅದೇ ಪಂದ್ಯದಲ್ಲಿ ಬ್ರಾರ್ ಮಾಡಿದ ಅದೊಂದು ತಪ್ಪು ಅವರನ್ನು ಐಸಿಸಿಯಿಂದ ದಂಡನೆಗೆ ಗುರಿಯಾಗುವಂತೆ ಮಾಡಿದೆ(PC-PTI).

ಎಡ್ಜ್‌ಬಾಸ್ಟನ್ ಏಕದಿನ ಪಂದ್ಯದಲ್ಲಿ ಗುರ್ನೂರ್ ಬ್ರಾರ್ ಬೌಲಿಂಗ್ ಮಾಡುವ ವೇಳೆ ಕೋಪದಿಂದ ಇಂಗ್ಲೆಂಡ್‌ನ ಆರಂಭಿಕ ಆಟಗಾರ ಬೆನ್ ಡಕೆಟ್ ಕಡೆಗೆ ಚೆಂಡನ್ನು ಎಸೆದಿದ್ದರು. ಬ್ರಾರ್ ಎಸೆದ ಚೆಂಡು ಡಕೆಟ್ ಅವರಿಗೆ ತಗುಲುವ ಸಾಧ್ಯತೆಗಳಿದ್ದವು. ಆದರೆ ಡಕೆಟ್ ಸ್ವಲ್ಪದರಲ್ಲೇ ಅದರಿಂದ ತಪ್ಪಿಸಿಕೊಂಡಿದ್ದರು. ಇದೀಗ ಪಂದ್ಯದ ರೆಫರಿ, ಬ್ರಾರ್ ಐಸಿಸಿ ನಿಯಮಗಳಿಗೆ ವಿರುದ್ಧವಾಗಿ ನಡೆದುಕೊಂಡಿರುವುದನ್ನು ಗಮನಿಸಿ ಅವರಿಗೆ ದಂಡ ವಿಧಿಸಿದ್ದಾರೆ(PC-PTI).

ಈ ಘಟನೆಯ ನಂತರ ಗುರ್ನೂರ್ ಬ್ರಾರ್‌ಗೆ ಐಸಿಸಿ ಎಚ್ಚರಿಕೆ ನೀಡಿದ್ದು, ಒಂದು ಡಿಮೆರಿಟ್ ಪಾಯಿಂಟ್ ಕೂಡ ನೀಡಿದೆ. ಹಾಗೆಯೇ ಇದು 24 ತಿಂಗಳಲ್ಲಿ ಅವರ ಮೊದಲ ಅಪರಾಧವಾಗಿದ್ದು, ಗುರ್ನೂರ್ ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದು, ಐಸಿಸಿ ಮ್ಯಾಚ್ ರೆಫರಿ ರಿಚಿ ರಿಚರ್ಡ್ಸನ್ ವಿಧಿಸಿದ ಶಿಕ್ಷೆಯನ್ನು ಸಹ ಒಪ್ಪಿಕೊಂಡಿದ್ದಾರೆ. ಆದ್ದರಿಂದ, ಬ್ರಾರ್ ಮ್ಯಾಚ್ ರೆಫರಿಯ ಮುಂದೆ ವಿಚಾರಣಗೆ ಹಾಜರಾಗುವ ಅಗತ್ಯವಿಲ್ಲ ಎಂದು ಐಸಿಸಿ ತಿಳಿಸಿದೆ(PC-PTI).

ಇನ್ನು ಮೊದಲ ಏಕದಿನ ಪಂದ್ಯದಲ್ಲಿ ಗುರ್ನೂರ್ ಬ್ರಾರ್ ಅವರ ಪ್ರದರ್ಶನದ ಬಗ್ಗೆ ಹೇಳುವುದಾದರೆ.. ಈ ಪಂದ್ಯದ ಆರಂಭದಲ್ಲಿ ಬ್ರಾರ್‌ಗೆ ಉತ್ತಮ ಆರಂಭ ಸಿಗಲಿಲ್ಲ. ಸರಾಗವಾಗಿ ರನ್ ಬಿಟ್ಟುಕೊಟ್ಟರು. ಆದರೆ ಒಂದೇ ಓವರ್ನಲ್ಲಿ 2 ನಿರ್ಣಾಯಕ ವಿಕೆಟ್‌ಗಳನ್ನು ಕಬಳಿಸಿ ತಂಡಕ್ಕೆ ಮುನ್ನಡೆ ತಂದುಕೊಟ್ಟರು. ಆ ಪಂದ್ಯದಲ್ಲಿ ಬ್ರಾರ್ 61 ರನ್ ನೀಡಿ 2 ವಿಕೆಟ್‌ಗಳನ್ನು ಪಡೆದಿದ್ದರು(PC-PTI).




