Sachin Tendulkar: ಸಚಿನ್ ಯಾವ ತಂಡದ ವಿರುದ್ಧ ಎಷ್ಟು ಶತಕ ಬಾರಿಸಿದ್ದರು? ಇಲ್ಲಿದೆ ಮಾಹಿತಿ

| Updated By: ಝಾಹಿರ್ ಯೂಸುಫ್

Updated on: Apr 24, 2024 | 8:30 AM

Happy Birthday Sachin Tendulkar: ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ 51ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಏಪ್ರಿಲ್ 24, 1973 ರಲ್ಲಿ ಮುಂಬೈನಲ್ಲಿ ಜನಿಸಿದ ಸಚಿನ್ ಟೀಮ್ ಇಂಡಿಯಾ ಪರ ಬರೋಬ್ಬರಿ 24 ವರ್ಷಗಳ ಕಾಲ ಆಡಿದ್ದರು ಎಂದರೆ ನಂಬಲೇಬೇಕು. ಅಂದರೆ ತಮ್ಮ ಜೀವನದ ಅರ್ಧಭಾಗವನ್ನು ಕ್ರಿಕೆಟ್​ ದೇವರು ಭಾರತ ತಂಡಕ್ಕಾಗಿ ಮೀಸಲಿಟ್ಟಿದ್ದಾರೆ. ಈ ವೇಳೆ ಒಟ್ಟು 100 ಶತಕಗಳನ್ನು ಸಹ ಸಿಡಿಸಿದ್ದಾರೆ. ಈ ಶತಕಗಳು ಯಾವ ತಂಡಗಳ ಪರ ಮೂಡಿಬಂದಿದ್ದವು ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ...

1 / 13
Sachin Tendulkar: ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರ ಹೆಸರಿನಲ್ಲಿ ಹಲವು ವಿಶ್ವ ದಾಖಲೆಗಳಿವೆ. ಅವುಗಳಲ್ಲಿ ನೂರು ಶತಕಗಳ ಸಾಧನೆ ಪ್ರಮುಖವಾದವು. ಏಕೆಂದರೆ ತೆಂಡೂಲ್ಕರ್ ಅವರನ್ನು ಹೊರತುಪಡಿಸಿ ಯಾವುದೇ ಬ್ಯಾಟ್ಸ್​ಮನ್ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ನೂರು ಶತಕಗಳನ್ನು ಬಾರಿಸಿಲ್ಲ.

2 / 13
ಇತ್ತ ಸಚಿನ್ ತೆಂಡೂಲ್ಕರ್ ಏಕದಿನ ಕ್ರಿಕೆಟ್​ನಲ್ಲಿ 49 ಶತಕಗಳು ಹಾಗೂ ಟೆಸ್ಟ್​ ಕ್ರಿಕೆಟ್​ನಲ್ಲಿ 51 ಶತಕಗಳನ್ನು ಬಾರಿಸುವ ಮೂಲಕ ಸೆಂಚುರಿಗಳ ಸರದಾರ ಎನಿಸಿಕೊಂಡಿದ್ದಾರೆ. ಹಾಗಿದ್ರೆ ಸಚಿನ್ ತೆಂಡೂಲ್ಕರ್ ಯಾವ ತಂಡದ ವಿರುದ್ಧ ಎಷ್ಟು ಸೆಂಚುರಿಗಳನ್ನು ಸಿಡಿಸಿದ್ದರು ಎಂಬುದನ್ನು ತಿಳಿಯೋಣ...

3 / 13
1- ಆಸ್ಟ್ರೇಲಿಯಾ: ಸಚಿನ್ ತೆಂಡೂಲ್ಕರ್ ಅತೀ ಹೆಚ್ಚು ಶತಕ ಬಾರಿಸಿದ್ದು ಬಲಿಷ್ಠ ಆಸ್ಟ್ರೇಲಿಯಾ ತಂಡದ ವಿರುದ್ಧ ಎಂಬುದು ವಿಶೇಷ. ಆಸೀಸ್​ ವಿರುದ್ಧ ಮಾಸ್ಟರ್ ಬ್ಲಾಸ್ಟರ್ ಒಟ್ಟು 20 ಶತಕಗಳನ್ನು ಸಿಡಿಸಿದ್ದಾರೆ.

4 / 13
2- ಶ್ರೀಲಂಕಾ: ಲಂಕಾ ವಿರುದ್ಧ ಸಚಿನ್ ತೆಂಡೂಲ್ಕರ್ ಅವರ ಬ್ಯಾಟ್​ನಿಂದ ಒಟ್ಟು 17 ಶತಕಗಳು ಮೂಡಿಬಂದಿವೆ.

5 / 13
3- ಸೌತ್ ಆಫ್ರಿಕಾ: ದಕ್ಷಿಣ ಆಫ್ರಿಕಾ ವಿರುದ್ಧ ಕೂಡ ಅಬ್ಬರಿಸಿರುವ ಸಚಿನ್ ಒಟ್ಟು 12 ಶತಕಗಳನ್ನು ಸಿಡಿಸಿದ್ದಾರೆ.

6 / 13
4- ಇಂಗ್ಲೆಂಡ್: ಆಂಗ್ಲರ ವಿರುದ್ಧ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶಿಸುತ್ತಿದ್ದ ಸಚಿನ್ ಒಟ್ಟು 9 ಶತಕಗಳನ್ನು ಬಾರಿಸಿದ್ದಾರೆ.

7 / 13
5- ನ್ಯೂಝಿಲೆಂಡ್: ಕಿವೀಸ್ ಪಡೆಯ ವಿರುದ್ಧ ಸಚಿನ್ ಬ್ಯಾಟ್​ನಿಂದ ಒಟ್ಟು 9 ಸೆಂಚುರಿಗಳು ಮೂಡಿಬಂದಿವೆ.

8 / 13
6- ಝಿಂಬಾಬ್ವೆ: ಸಚಿನ್ ತೆಂಡೂಲ್ಕರ್ ಝಿಂಬಾಬ್ವೆ ವಿರುದ್ಧ ಒಟ್ಟು 8 ಶತಕಗಳನ್ನು ಬಾರಿಸಿದ್ದಾರೆ.

9 / 13
7- ಪಾಕಿಸ್ತಾನ್: ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ್ ವಿರುದ್ಧ ಅಬ್ಬರಿಸುತ್ತಿದ್ದ ಸಚಿನ್ ತೆಂಡೂಲ್ಕರ್ ಒಟ್ಟು 7 ಶತಕ ಬಾರಿಸಿ ಮಿಂಚಿದ್ದಾರೆ.

10 / 13
8- ವೆಸ್ಟ್ ಇಂಡೀಸ್: ವಿಂಡೀಸ್ ವಿರುದ್ಧದ ಪಂದ್ಯದಲ್ಲಿ ಸಚಿನ್ ಬ್ಯಾಟ್​ನಿಂದ ಒಟ್ಟು 7 ಶತಕಗಳು ಮೂಡಿಬಂದಿವೆ.

11 / 13
9- ಬಾಂಗ್ಲಾದೇಶ್: ನೆರೆಯ ಬಾಂಗ್ಲಾದೇಶ್ ವಿರುದ್ಧ ಸಚಿನ್ ತೆಂಡೂಲ್ಕರ್ ಒಟ್ಟು 6 ಶತಕಗಳನ್ನು ಬಾರಿಸಿದ್ದರು.

12 / 13
10- ಕೀನ್ಯಾ: ಸಚಿನ್ ಕೀನ್ಯಾ ತಂಡದ ವಿರುದ್ಧ ಒಟ್ಟು 4 ಸೆಂಚುರಿಗಳನ್ನು ಬಾರಿಸಿದ್ದರು.

13 / 13
11- ನಮೀಬಿಯಾ: ಕ್ರಿಕೆಟ್ ಶಿಶು ನಮೀಬಿಯಾ ವಿರುದ್ಧ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ 1 ಶತಕ ಸಿಡಿಸಿದ್ದರು.

Published On - 8:27 am, Wed, 24 April 24