- Kannada News Photo gallery Cricket photos Hardik Pandya in post match presentation after IND vs WI 1st T20I He said A young team will make mistakes
Hardik Pandya, IND vs WI 1st T20I: ತಂಡದ ಸೋಲಿಗೆ ನಾಯಕ ಹಾರ್ದಿಕ್ ಪಾಂಡ್ಯ ದೂರಿದ್ದು ಯಾರನ್ನ ಗೊತ್ತೇ?
IND vs WI 1st T20I: 4 ರನ್ಗಳ ರೋಚಕ ಜಯದೊಂದಿಗೆ ವೆಸ್ಟ್ ಇಂಡೀಸ್ ತಂಡ ಶುಭಾರಂಭ ಮಾಡಿದೆ. ಇದೀಗ ಐದು ಪಂದ್ಯಗಳ ಟಿ20 ಸರಣಿಯಲ್ಲಿ ವಿಂಡೀಸ್ 1-0 ಮುನ್ನಡೆ ಪಡೆದುಕೊಂಡಿದೆ. ಭಾರತದ ಸೋಲಿನ ಬಳಿಕ ನಾಯಕ ಹಾರ್ದಿಕ್ ಪಾಂಡ್ಯ ಮಾತನಾಡಿದ್ದು ಏನು ಹೇಳಿದ್ದಾರೆ ಕೇಳಿ.
Updated on: Aug 04, 2023 | 7:39 AM

ಟ್ರಿನಿಡಾಡ್ನ ಬ್ರಿಯನ್ ಲಾರಾ ಸ್ಟೇಡಿಯಂನಲ್ಲಿ ನಡೆದ ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಭಾರತ ಸೋಲು ಕಂಡಿದೆ. ಕೆರಿಬಿಯನ್ ಬೌಲರ್ಗಳ ಶ್ರಮಕ್ಕೆ ತಲೆಬಾಗಿದ ಟೀಮ್ ಇಂಡಿಯಾ ಯುವ ಪಡೆ ಕೊನೆಯ ಹಂತದಲ್ಲಿ ಸೋತಿತು.

4 ರನ್ಗಳ ರೋಚಕ ಜಯದೊಂದಿಗೆ ವೆಸ್ಟ್ ಇಂಡೀಸ್ ತಂಡ ಶುಭಾರಂಭ ಮಾಡಿದೆ. ಇದೀಗ ಐದು ಪಂದ್ಯಗಳ ಟಿ20 ಸರಣಿಯಲ್ಲಿ ವಿಂಡೀಸ್ 1-0 ಮುನ್ನಡೆ ಪಡೆದುಕೊಂಡಿದೆ. ಭಾರತದ ಸೋಲಿನ ಬಳಿಕ ನಾಯಕ ಹಾರ್ದಿಕ್ ಪಾಂಡ್ಯ ಮಾತನಾಡಿದ್ದು ಏನು ಹೇಳಿದ್ದಾರೆ ಕೇಳಿ.

ನಾವು ಸುಲಭವಾಗಿ ಟಾರ್ಗೆಟ್ ಬೆನ್ನಟ್ಟುತ್ತಿದ್ದೆವೆ. ಆದರೆ, ನಡುವಲ್ಲಿ ಕೆಲ ತಪ್ಪು ಎಸೆದೆವು. ನಮ್ಮದು ಯುವ ತಂಡವಾಗಿದ್ದು ಕೆಲ ತಪ್ಪುಗಳು ಆಗುತ್ತದೆ. ನಾವು ಜೊತೆಯಾಗಿ ಮುಂದೆ ಸಾಗುತ್ತೇವೆ. ಈ ಪಂದ್ಯ ಸೋತಿರಬಹುದು. ಆದರೆ, ನಮ್ಮಲ್ಲಿ ಧನಾತ್ಮಕವಾದ ಮನಸ್ಥಿತಿ ಇದೆ ಎಂದು ಹಾರ್ದಿಕ್ ಹೇಳಿದ್ದಾರೆ.

ಇನ್ನೂ ನಾಲ್ಕು ಪಂದ್ಯಗಳು ಬಾಕಿ ಉಳಿದಿದೆ. ಟಿ20 ಕ್ರಿಕೆಟ್ನಲ್ಲಿ ನೀವು ವಿಕೆಟ್ ಕಳೆದುಕೊಂಡರೆ ಚೇಸಿಂಗ್ ಮಾಡುವುದು ಬಹಳ ಕಷ್ಟ. ಇಂದಿನ ಪಂದ್ಯದಲ್ಲಿ ಇದೇ ನಡೆಯಿತು. ಕೆಲವೊಂದು ಹೊಡೆತಗಳು ಪಂದ್ಯವನ್ನು ನಮ್ಮ ಕಡೆ ಪಂದ್ಯವನ್ನು ತಿರುಗಿಸಿದವು. ಆದರೆ, ವಿಕೆಟ್ ಕಳೆದುಕೊಂಡಾಗ ಆ ಹೊಡೆತಗಳು ಪ್ರಯೋಜನಕ್ಕೆ ಬರುವುದಿಲ್ಲ- ಹಾರ್ದಿಕ್ ಪಾಂಡ್ಯ.

ನಾವು ಪರಿಸ್ಥಿತಿಗೆ ಅನುಗುಣವಾಗಿ ಮೂವರು ಸ್ಪಿನ್ನರ್ಗಳನ್ನು ಆಡಿಸಿದೆವು. ಕುಲ್ದೀಪ್, ಚಹಲ್ ಪ್ರಮುಖ ಸ್ಪಿನ್ನರ್ಸ್, ಅಕ್ಷರ್ ಆಲ್ರೌಂಡರ್ ಆಗಿದ್ದಾರೆ. ಹೀಗಾಗಿ ಇದು ಉತ್ತಮ ಕಾಂಬಿನೇಷನ್ ಎಂದು ಆಯ್ಕೆ ಮಾಡಿದೆವು ಎಂದು ತಂಡದ ಆಯ್ಕೆಯ ಬಗ್ಗೆ ಹಾರ್ದಿಕ್ ಸಮರ್ಥಿಸಿದ್ದಾರೆ.

ಮುಖೇಶ್ ಕುಮಾರ್ ಈ ಪ್ರವಾಸದ ಮೂಲಕ ಮೂರೂ ಫಾರ್ಮೆಟ್ನಲ್ಲಿ ಪದಾರ್ಪಣೆ ಮಾಡಿದ್ದಾರೆ. ಇದು ಒಳ್ಳೆಯ ಸುದ್ದಿ. ಮುಖೇಶ್ ಅದ್ಭುತ ವ್ಯಕ್ತಿ. ತಂಡಕ್ಕೆ ಅವರ ಕೊಡುಗೆ ಇನ್ನೂ ಬೇಕಾಗಿದೆ. ಒಂದರ ಹಿಂದೆ ಒಂದರಂತೆ ಓವರ್ಗಳನ್ನು ಮಾಡಿದ್ದು ಅದ್ಭುತವಾಗಿತ್ತು ಎಂದು ಹಾರ್ದಿಕ್ ಹೇಳಿದ್ದಾರೆ.

ತಿಲಕ್ ವರ್ಮಾ ಇನ್ನಿಂಗ್ಸ್ ಶುರು ಮಾಡಿದ ರೀತಿ ಚೆನ್ನಾಗಿತ್ತು. ಅಂತರರಾಷ್ಟ್ರೀಯ ಕ್ರಿಕೆಟ್ ಅನ್ನು ಕೆಲ ಸಿಕ್ಸರ್ಗಳ ಮೂಲಕ ಶುರುಮಾಡಿದರು. ಇದು ಒಳ್ಳೆಯ ಸೂಚನೆ. ಅವರಲ್ಲಿ ಭಯವಿಲ್ಲ. ಇದು ಭಾರತ ತಂಡಕ್ಕೆ ಪ್ಲಸ್ ಆಗುತ್ತದೆ ಎಂಬುದು ಹಾರ್ದಿಕ್ ಪಾಂಡ್ಯ ಮಾತು.




