Hardik Pandya: ದುಬಾರಿ ವಾಚ್ ಕಟ್ಟುತ್ತಿದ್ದ ಹಾರ್ದಿಕ್ ಪಾಂಡ್ಯಗೆ ಏರ್ಪೋರ್ಟ್ನಲ್ಲೇ ಎದುರಾಯ್ತು ಸಂಕಷ್ಟ..!
TV9 Web | Updated By: ಪೃಥ್ವಿಶಂಕರ
Updated on:
Nov 15, 2021 | 10:16 PM
Hardik Pandya: ಹಾರ್ದಿಕ್ ಪಾಂಡ್ಯ ಅವರಿಂದ 5 ಕೋಟಿ ಮೌಲ್ಯದ 2 ವಾಚ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂಬ ವರದಿಗಳಿದ್ದು, ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಇಲಾಖೆಯು ಅವುಗಳನ್ನು ಜಪ್ತಿ ಮಾಡಿದೆ.
1 / 5
2021 ರ ಟಿ 20 ವಿಶ್ವಕಪ್‌ನಲ್ಲಿ ಅತ್ಯಂತ ಕಳಪೆ ಪ್ರದರ್ಶನ ನೀಡಿದ ನಂತರ ಹಾರ್ದಿಕ್ ಪಾಂಡ್ಯ ಅವರನ್ನು ಟೀಮ್ ಇಂಡಿಯಾದಿಂದ ಕೈಬಿಡಲಾಗಿದೆ. ತಂಡದಿಂದ ಕೈಬಿಟ್ಟ ಆತಂಕದಲ್ಲಿರುವ ಈ ಆಲ್‌ರೌಂಡರ್ ಹೊಸ ತೊಂದರೆಗೆ ಸಿಲುಕಿದ್ದಾರೆ. ಹಾರ್ದಿಕ್ ಪಾಂಡ್ಯ ಅವರಿಂದ 5 ಕೋಟಿ ಮೌಲ್ಯದ 2 ವಾಚ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂಬ ವರದಿಗಳಿದ್ದು, ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಇಲಾಖೆಯು ಅವುಗಳನ್ನು ಜಪ್ತಿ ಮಾಡಿದೆ.
2 / 5
ಹಾರ್ದಿಕ್ ಪಾಂಡ್ಯ ಅವರ ಬಳಿ 5 ಕೋಟಿಯ ಈ ವಾಚ್‌ಗಳ ಬಿಲ್ ಇಲ್ಲದಿರುವುದೇ ಇದಕ್ಕೆ ಕಾರಣ. ಹಾರ್ದಿಕ್ ಪಾಂಡ್ಯ ಭಾನುವಾರ ತಂಡದೊಂದಿಗೆ ಮನೆಗೆ ಮರಳಿದರು. ಆದರೆ ಅವರನ್ನು ಏರ್ಪೋರ್ಟ್ನಲ್ಲೇ ತಡೆದ ಕಸ್ಟಮ್ಸ್ ಇಲಾಖೆ ಅವರ ದುಬಾರಿ ವಾಚ್‌ಗಳನ್ನು ಜಪ್ತಿ ಮಾಡಿದೆ ಎಂದು ವರದಿಯಾಗಿದೆ.
3 / 5
ಹಾರ್ದಿಕ್ ಪಾಂಡ್ಯ ದುಬಾರಿ ವಾಚ್‌ಗಳನ್ನು ತುಂಬಾ ಇಷ್ಟಪಡುತ್ತಾರೆ. ಐಪಿಎಲ್ 2021 ರ ಸಮಯದಲ್ಲಿ, ಈ ಆಟಗಾರ ಫಿಲಿಪ್ ನಾಟಿಲಸ್ ಪ್ಲಾಟಿನಂ 5711 ವಾಚ್ ಅನ್ನು ಧರಿಸಿದ್ದರು. ಇದು 50 ಮಿಲಿಯನ್‌ಗಿಂತಲೂ ಹೆಚ್ಚು ಮೌಲ್ಯದ್ದಾಗಿದೆ. ಜಗತ್ತಿನಲ್ಲಿ ಕೆಲವೇ ಜನರು ಇಂತಹ ಗಡಿಯಾರಗಳನ್ನು ಧರಿಸುತ್ತಾರೆ.
4 / 5
2019 ರಲ್ಲಿ, ಹಾರ್ದಿಕ್ ಪಾಂಡ್ಯ ಅವರು ಆಸ್ಪತ್ರೆಯ ಹಾಸಿಗೆಯ ಮೇಲೆ ಮಲಗಿರುವ ಮತ್ತು ಕೈಯಲ್ಲಿ ಚಿನ್ನದ ಗಡಿಯಾರವನ್ನು ಹೊಂದಿರುವ ಚಿತ್ರವನ್ನು ಹಂಚಿಕೊಂಡಿದ್ದರು.
5 / 5
ಕಳೆದ ವರ್ಷ ಹಾರ್ದಿಕ್ ಪಾಂಡ್ಯ ಅವರ ಹಿರಿಯ ಸಹೋದರ ಕೃನಾಲ್ ಕೂಡ ದುಬಾರಿ ವಾಚ್‌ಗಳ ಪ್ರಕರಣದಲ್ಲಿ ಸಿಕ್ಕಿಬಿದ್ದಿದ್ದರು. ಲಕ್ಷಗಟ್ಟಲೆ ಮೌಲ್ಯದ ವಾಚ್‌ಗಳ ಮಾಹಿತಿಯನ್ನು ಅವರು ಕಸ್ಟಮ್ಸ್ ಇಲಾಖೆಯೊಂದಿಗೆ ಹಂಚಿಕೊಂಡಿಲ್ಲದ ಕಾರಣ ನೀಡಿ ನಂತರ ಅವುಗಳನ್ನು ಜಪ್ತಿ ಮಾಡಲಾಗಿತ್ತು.