ಈ ಬಾರಿಯ ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯಾ ಪರ ಡೇವಿಡ್ ವಾರ್ನರ್ ಅದ್ಭುತವಾಗಿ ಬ್ಯಾಟಿಂಗ್ ಮಾಡಿದ್ದರು. ಈ ವಿಶ್ವಕಪ್‌ಗೂ ಮುನ್ನ ಕಳಪೆ ಫಾರ್ಮ್‌ನಿಂದ ಬಳಲುತ್ತಿದ್ದ ಅವರು, ಈ ವಿಶ್ವಕಪ್‌ನಲ್ಲಿ ವಾರ್ನರ್ ಅಮೋಘ ಆಟ ಪ್ರದರ್ಶಿಸಿದರು. ಫೈನಲ್‌ನಲ್ಲಿ ಫಿಂಚ್ ಬೇಗನೆ ಔಟಾದಾಗ, ವಾರ್ನರ್ ಜವಾಬ್ದಾರಿಯನ್ನು ವಹಿಸಿಕೊಂಡರು ಮತ್ತು ತಂಡವನ್ನು ಒತ್ತಡಕ್ಕೆ ಬರಲು ಬಿಡಲಿಲ್ಲ. ಅವರು 38 ಎಸೆತಗಳಲ್ಲಿ 53 ರನ್ ಗಳಿಸಿದರು.