ಭಾರತ ಮತ್ತು ಪಾಕಿಸ್ತಾನ್ ನಡುವಣ ಹೈವೋಲ್ಟೇಜ್ ಪಂದ್ಯದ ನಡುವೆ ಎಲ್ಲರ ಗಮನ ಸೆಳೆದಿದ್ದು ಹಾರ್ದಿಕ್ ಪಾಂಡ್ಯ ಅವರ ವಾಚ್. ಕ್ರಿಕೆಟಿಗರು ಸ್ಪೋರ್ಟ್ಸ್ ವಾಚ್ ಧರಿಸಿ ಕಣಕ್ಕಿಳಿಯುವುದು ಸಾಮಾನ್ಯ. ಆದರೆ ಟೀಮ್ ಇಂಡಿಯಾ ಆಟಗಾರ ಹಾರ್ದಿಕ್ ಪಾಂಡ್ಯ ಧರಿಸಿದ್ದು ಕೋಟಿ ಬೆಲೆಯ ವಾಚ್ ಎಂಬುದೇ ಇಲ್ಲಿ ವಿಶೇಷ.
ಹೌದು, ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಪಾಕಿಸ್ತಾನ್ ವಿರುದ್ಧದ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ರಿಚರ್ಡ್ ಮಿಲ್ಲೆ ಬ್ರಾಂಡ್ನ ಕೈ ಗಡಿಯಾರದೊಂದಿಗೆ ಕಾಣಿಸಿಕೊಂಡಿದ್ದರು. ಈ ವಾಚ್ನ ಬೆಲೆ ಸುಮಾರು 7 ಕೋಟಿ ರೂ.
ಹಾರ್ದಿಕ್ ಪಾಂಡ್ಯ ಧರಿಸಿರುವುದು ರಿಚರ್ಡ್ ಮಿಲ್ಲೆ ಕಂಪೆನಿಯು ತನ್ನ ಸ್ಪೆಷಲ್ ಎಡಿಷನ್ ಸ್ಪೋರ್ಟ್ಸ್ ಸ್ಟೈಲಿಶ್ RM 27-02 ವಾಚ್. ಇದರ ಬೆಲೆ 8 ಲಕ್ಷ ಡಾಲರ್. ಅಂದರೆ ಈ ವಾಚ್ನ ಭಾರತೀಯ ರೂಪಾಯಿ ಮೌಲ್ಯ 7 ಕೋಟಿ ರೂ. ಇದೀಗ ಕೋಟಿ ಬೆಲೆಯ ದುಬಾರಿ ವಾಚ್ನೊಂದಿಗೆ ಕಣಕ್ಕಿಳಿದ ಹಾರ್ದಿಕ್ ಪಾಂಡ್ಯ ಅವರ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಇನ್ನು ಈ ಪಂದ್ಯದಲ್ಲಿ ಅತ್ಯುತ್ತಮ ಬೌಲಿಂಗ್ ಪ್ರದರ್ಶನ ನೀಡಿದ್ದ ಹಾರ್ದಿಕ್ ಪಾಂಡ್ಯ 8 ಓವರ್ಗಳಲ್ಲಿ ಕೇವಲ 31 ರನ್ ನೀಡಿ 2 ವಿಕೆಟ್ ಕಬಳಿಸಿದ್ದರು. ಈ ಮೂಲಕ ಪಾಕಿಸ್ತಾನ್ ತಂಡ ಬೃಹತ್ ಮೊತ್ತ ಕಲೆಹಾಕುವುದನ್ನು ತಡೆಯುವಲ್ಲಿ ಪಾಂಡ್ಯ ಯಶಸ್ವಿಯಾಗಿದ್ದರು.
ಅದರಂತೆ ಪಾಕಿಸ್ತಾನ್ ತಂಡದ ನೀಡಿದ 242 ರನ್ಗಳ ಗುರಿಯನ್ನು ಬೆನ್ನತ್ತಿದ ಟೀಮ್ ಇಂಡಿಯಾ ಪರ ವಿರಾಟ್ ಕೊಹ್ಲಿ ಆಕರ್ಷಕ ಶತಕ ಬಾರಿಸಿದರು. ಈ ಶತಕದ ನೆರವಿನೊಂದಿಗೆ ಭಾರತ ತಂಡವು 42.3 ಓವರ್ಗಳಲ್ಲಿ 244 ರನ್ಗಳಿಸಿ 6 ವಿಕೆಟ್ಗಳ ಗೆಲುವು ದಾಖಲಿಸಿದೆ. ಈ ಗೆಲುವಿನೊಂದಿಗೆ ಟೀಮ್ ಇಂಡಿಯಾ ಸೆಮಿಫೈನಲ್ಗೇರುವುದನ್ನು ಖಚಿತಪಡಿಸಿಕೊಂಡಿದೆ.