
ಭಾರತೀಯ ಪಿಚ್ನಲ್ಲಿ ಹರ್ಮನ್ಪ್ರೀತ್ ಕೌರ್ ಹೊಸ ಇತಿಹಾಸ ಬರೆದಿದ್ದಾರೆ. ಅದು ಸಹ ಸ್ಫೋಟಕ 91 ರನ್ಗಳಿಸುವ ಮೂಲಕ. ಈ 91 ರನ್ಗಳೊಂದಿಗೆ ಹರ್ಮನ್ಪ್ರೀತ್ ಕೌರ್ ಭಾರತೀಯ ಪಿಚ್ನಲ್ಲಿ ಭರ್ಜರಿ ದಾಖಲೆ ನಿರ್ಮಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅದು ಸಹ ಆಸ್ಟ್ರೇಲಿಯನ್ ಆಟಗಾರ್ತಿಯ ದಾಖಲೆ ಮುರಿಯುವ ಮೂಲಕ ಎಂಬುದು ವಿಶೇಷ. (PC: Gettyimages)
ರಾಯ್ಪುರದಲ್ಲಿ ನಡೆದ ಝಿಂಬಾಬ್ವೆ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ ಹರ್ಮನ್ಪ್ರೀತ್ ಕೌರ್ ಹೊಡಿಬಡಿ ಆಟದೊಂದಿಗೆ ಕೇವಲ 41 ಎಸೆತಗಳಲ್ಲಿ 5 ಭರ್ಜರಿ ಸಿಕ್ಸರ್ ಹಾಗೂ 10 ಫೋರ್ಗಳೊಂದಿಗೆ ಅಜೇಯ 91 ರನ್ ಬಾರಿಸಿದರು. (PC: Gettyimages)
ಈ 91 ರನ್ಗಳೊಂದಿಗೆ ಹರ್ಮನ್ಪ್ರೀತ್ ಕೌರ್ ಭಾರತೀಯ ಪಿಚ್ನಲ್ಲಿ ಮಹಿಳಾ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಗರಿಷ್ಠ ಸ್ಕೋರ್ ಗಳಿಸಿದ ಬ್ಯಾಟರ್ ಎನಿಸಿಕೊಂಡಿದ್ದಾರೆ. ಇದಕ್ಕೂ ಮುನ್ನ ಈ ದಾಖಲೆ ಆಸ್ಟ್ರೇಲಿಯಾ ತಂಡದ ಮಾಜಿ ನಾಯಕಿ ಅಲಿಸ್ಸಾ ಹೀಲಿ ಹೆಸರಿನಲ್ಲಿತ್ತು. (PC: Gettyimages)
2012 ರಲ್ಲಿ ಆಸ್ಟ್ರೇಲಿಯಾ ತಂಡ ಭಾರತ ಪ್ರವಾಸ ಕೈಗೊಂಡಿದ್ದಾಗ, ವಿಶಾಖಪಟ್ಟಣಂನಲ್ಲಿ ನಡೆದ ಮಹಿಳಾ ಟಿ20 ಅಂತರರಾಷ್ಟ್ರೀಯ ಪಂದ್ಯದಲ್ಲಿ ಆರಂಭಿಕ ಆಟಗಾರ್ತಿಯಾಗಿ ಕಣಕ್ಕಿಳಿದಿದ್ದ ಅಲಿಸ್ಸಾ ಹೀಲಿ, ಭಾರತೀಯ ಬೌಲರ್ಗಳನ್ನು ಮನಬಂದಂತೆ ಕಾಡಿ ಕೇವಲ 61 ಎಸೆತಗಳಲ್ಲಿ 10 ಬೌಂಡರಿ ಹಾಗೂ 2 ಸಿಕ್ಸರ್ಗಳ ನೆರವಿನಿಂದ 90 ರನ್ ಚಚ್ಚಿದ್ದರು. ಈ ಮೂಲಕ ಭಾರತದಲ್ಲಿ ಗರಿಷ್ಠ ವೈಯುಕ್ತಿಕ ಸ್ಖೋರ್ಗಳಿಸಿದ ಮಹಿಳಾ ಬ್ಯಾಟರ್ ಎನಿಸಿಕೊಂಡಿದ್ದರು. (PC: Gettyimages)
ಇದೀಗ 14 ವರ್ಷಗಳ ಬಳಿಕ ಈ ದಾಖಲೆಯನ್ನು ಅಳಿಸಿ ಹಾಕುವಲ್ಲಿ ಹರ್ಮನ್ಪ್ರೀತ್ ಕೌರ್ ಯಶಸ್ವಿಯಾಗಿದ್ದಾರೆ. ಝಿಂಬಾಬ್ವೆ ವಿರುದ್ಧ ಕೇವಲ 41 ಎಸೆತಗಳಲ್ಲಿ ಅಜೇಯ 91 ರನ್ ಬಾರಿಸುವ ಮೂಲಕ ಹರ್ಮನ್ಪ್ರೀತ್ ಕೌರ್ ಭಾರತೀಯ ಪಿಚ್ನಲ್ಲಿ ಗರಿಷ್ಠ ವೈಯುಕ್ತಿಕ ಸ್ಕೋರ್ಗಳಿಸಿದ ಮಹಿಳಾ ಬ್ಯಾಟರ್ ಎಂಬ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ. (PC: Gettyimages)