ICC Awards 2023: ಐಸಿಸಿ ವರ್ಷದ ಟೆಸ್ಟ್ ಕ್ರಿಕೆಟಿಗ ಪ್ರಶಸ್ತಿ ಗೆದ್ದ ಉಸ್ಮಾನ್ ಖವಾಜಾ..!
ICC Awards 2023: ಉಸ್ಮಾನ್ ಖವಾಜಾ 2023 ರಲ್ಲಿ ನಡೆದ ಟೆಸ್ಟ್‌ಗಳಲ್ಲಿ ಉತ್ತಮ ಪ್ರದರ್ಶನ ನೀಡಿದ್ದರು. ಅಲ್ಲದೆ ಆಸ್ಟ್ರೇಲಿಯಾ ಚೊಚ್ಚಲ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಉಸ್ಮಾನ್ ಖವಾಜಾ 2023 ರಲ್ಲಿ 13 ಟೆಸ್ಟ್ ಪಂದ್ಯಗಳನ್ನು ಆಡಿದ್ದು, ಅದರಲ್ಲಿ ಒಟ್ಟು 1210 ರನ್ ಕಲೆಹಾಕಿದ್ದರು.
1 / 7
ಆಸ್ಟ್ರೇಲಿಯಾ ಟೆಸ್ಟ್ ತಂಡದ ಆರಂಭಿಕ ಆಟಗಾರ 37 ವರ್ಷದ ಉಸ್ಮಾನ್ ಖವಾಜಾ ಅವರಿಗೆ 2023ರ ಐಸಿಸಿ ವರ್ಷದ ಟೆಸ್ಟ್ ಕ್ರಿಕೆಟಿಗ ಪ್ರಶಸ್ತಿಗೆ ಭಾಜನರಾಗಿದ್ದಾರೆ.
2 / 7
ಈ ಪ್ರಶಸ್ತಿ ರೇಸ್ನಲ್ಲಿ ಉಸ್ಮಾನ್ ಖವಾಜಾ ಹೊರತುಪಡಿಸಿ, ಆಸ್ಟ್ರೇಲಿಯಾ ತಂಡದ ಮತ್ತೊಬ್ಬ ಆರಂಭಿಕ ಆಟಗಾರ ಟ್ರಾವಿಸ್ ಹೆಡ್, ಭಾರತದ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಮತ್ತು ಇಂಗ್ಲೆಂಡ್‌ನ ಜೋ ರೂಟ್ ಸಹ ಇದ್ದರು. ಆದರೆ ಈ ಮೂವರನ್ನು ಹಿಂದಿಕ್ಕಿದ ಉಸ್ಮಾನ್ ಖವಾಜಾಗೆ ಪ್ರಶಸ್ತಿ ಲಭಿಸಿದೆ.
3 / 7
ಉಸ್ಮಾನ್ ಖವಾಜಾ 2023 ರಲ್ಲಿ ನಡೆದ ಟೆಸ್ಟ್‌ಗಳಲ್ಲಿ ಉತ್ತಮ ಪ್ರದರ್ಶನ ನೀಡಿದ್ದರು. ಅಲ್ಲದೆ ಆಸ್ಟ್ರೇಲಿಯಾ ಚೊಚ್ಚಲ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಉಸ್ಮಾನ್ ಖವಾಜಾ 2023 ರಲ್ಲಿ 13 ಟೆಸ್ಟ್ ಪಂದ್ಯಗಳನ್ನು ಆಡಿದ್ದು, ಅದರಲ್ಲಿ ಒಟ್ಟು 1210 ರನ್ ಕಲೆಹಾಕಿದ್ದರು.
4 / 7
2023 ರ ಆರಂಭದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಟೆಸ್ಟ್ ಪಂದ್ಯದಲ್ಲಿ 195 ರನ್ ಕಲೆಹಾಕಿದ್ದ ಖವಾಜಾ, ಆ ನಂತರ ಭಾರತ ಪ್ರವಾಸದಲ್ಲಿ ಆಡಿದ ನಾಲ್ಕು ಪಂದ್ಯಗಳಲ್ಲಿ 333 ರನ್ ಸಿಡಿಸುವ ಮೂಲಕ ಸರಣಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎನಿಸಿಕೊಂಡಿದ್ದರಯ.
5 / 7
ಅಲ್ಲದೆ ಖವಾಜಾ ಪ್ರತಿಷ್ಠಿತ ಆಶಸ್‌ನಲ್ಲಿಯೂ ಇಂಗ್ಲೆಂಡ್ ವಿರುದ್ಧ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿ 496 ರನ್ ಸಿಡಿಸಿದ್ದರು. ಈ ಮೂಲಕ ಈ ಸರಣಿಯ ಟಾಸ್ ಸ್ಕೋರರ್ ಆಗಿದ್ದರು. ಆ ಬಳಿಕ ಪಾಕಿಸ್ತಾನದ ವಿರುದ್ಧ ನಡೆದ ಟೆಸ್ಟ್ ಸರಣಿಯಲ್ಲಿ 40+ ರನ್‌ಗಳ ಮೂರು ಇನ್ನಿಂಗ್ಸ್‌ಗಳನ್ನು ಆಡುವ ಮೂಲಕ ವರ್ಷವನ್ನು ಕೊನೆಗೊಳಿಸಿದ್ದರು.
6 / 7
ಉಸ್ಮಾನ್ ಖವಾಜಾ ಆಸ್ಟ್ರೇಲಿಯಾ ಪರ ಒಟ್ಟು 70 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. ಟೆಸ್ಟ್ನಲ್ಲಿ 46.70ರ ಸರಾಸರಿಯಲ್ಲಿ 5278 ರನ್ ಕಲೆಹಾಕಿರುವ ಖವಾಜಾ ತಮ್ಮ ಟೆಸ್ಟ್ ವೃತ್ತಿಜೀವನದಲ್ಲಿ 25 ಅರ್ಧ ಶತಕ ಮತ್ತು 15 ಶತಕಗಳನ್ನು ಸಿಡಿಸಿದ್ದಾರೆ.
7 / 7
ಟೆಸ್ಟ್ನಲ್ಲಿ ಮಾತ್ರವಲ್ಲದೆ ಆಸ್ಟ್ರೇಲಿಯಾ ಪರ 40 ಏಕದಿನ ಮತ್ತು 9 ಟಿ20 ಪಂದ್ಯಗಳನ್ನು ಆಡಿರುವ ಖವಾಜಾ ಏಕದಿನದಲ್ಲಿ 1554 ರನ್ ಹಾಗೂ ಟಿ20ಯಲ್ಲಿ 241 ರನ್ ಗಳಿಸಿದ್ದಾರೆ.