ICC World Cup 2023 Trophy: ಬಹುನಿರೀಕ್ಷಿತ ಏಕದಿನ ವಿಶ್ವಕಪ್ ಟ್ರೋಫಿ ಅನಾವರಣ: ಬಿಡುಗಡೆ ಆಗಿದ್ದು ಎಲ್ಲಿ ಗೊತ್ತೇ?

|

Updated on: Jun 27, 2023 | 8:38 AM

CWC23: ವಿಶ್ವಕಪ್ ಟ್ರೋಫಿಯನ್ನು ಅತ್ಯಂತ ವಿಶೇಷವಾಗಿ ಆಗಸದಿಂದ ಅನಾವರಣಗೊಳಿಸಲಾಗಿದೆ. ಅತ್ಯಾಧುನಿಕ 4ಕೆ ಕ್ಯಾಮೆರಾಗಳ ಮೂಲಕ ಈ ಅದ್ಭುತ ದೃಶ್ಯವನ್ನು ಸೆರೆಹಿಡಿಯಲಾಗಿದೆ.

1 / 7
ಈ ವರ್ಷ ಭಾರತದಲ್ಲಿ ನಡೆಯಲಿರುವ ಬಹುನಿರೀಕ್ಷಿತ ಐಸಿಸಿ ಪುರುಷರ ಏಕದಿನ ವಿಶ್ವಕಪ್ ಟೂರ್ನಿಯ ಫೀವರ್ ಶುರುವಾಗಿದೆ. ಅತ್ತ ಜಿಂಬಾಬ್ವೆಯಲ್ಲಿ ಅರ್ಹತಾ ಸುತ್ತಿನ ಪಂದ್ಯಗಳು ನಡೆಯುತ್ತಿದ್ದರೆ ಇತ್ತ ಭಾರತದಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಹಾಗೂ ಬಿಸಿಸಿಐ  ಏಕದಿನ ವಿಶ್ವಕಪ್‌ ಕ್ರಿಕೆಟ್‌ ಟ್ರೋಫಿಯನ್ನು ವಿಶೇಷವಾಗಿ ಅನಾವರಣ ಮಾಡಿದೆ.

2 / 7
ವಿಶ್ವಕಪ್ ಟ್ರೋಫಿಯನ್ನು ಅತ್ಯಂತ ವಿಶೇಷವಾಗಿ ಆಗಸದಿಂದ ಅನಾವರಣಗೊಳಿಸಲಾಗಿದೆ. ಭುವಿಯಿಂದ ಸುಮಾರು 1,20,000 ಅಡಿ ಎತ್ತರದಲ್ಲಿ ಬಲೂನ್‌ಗೆ ಕಟ್ಟಿದ ಪ್ರತಿಷ್ಠಿತ ಬೆಳ್ಳಿಯ ಟ್ರೋಫಿಯನ್ನು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಚಿತ್ತಾಕರ್ಷಕ ರೀತಿಯಲ್ಲಿ ಇಳಿಸಲಾಯಿತು.

3 / 7
ಅತ್ಯಾಧುನಿಕ 4ಕೆ ಕ್ಯಾಮೆರಾಗಳ ಮೂಲಕ ಈ ಅದ್ಭುತ ದೃಶ್ಯವನ್ನು ಸೆರೆಹಿಡಿಯಲಾಗಿದೆ. ಇದು ಗಗನಕ್ಕೇರಿದ ಮೊದಲ ಕ್ರೀಡಾ ಟ್ರೋಫಿ ಎನ್ನುವ ಹೆಗ್ಗಳಿಕೆಗೂ ಪಾತ್ರವಾಗಿದೆ. ಈ ಮೂಲಕ ಕ್ರೀಡಾಲೋಕದಲ್ಲಿ ವಿಶೇಷ ಸಾಧನೆಯೊಂದನ್ನು ಐಸಿಸಿ ಹಾಗೂ ಬಿಸಿಸಿಐ ಮಾಡಿದೆ.

4 / 7
ಇನ್ನು ಈ ಬಾರಿಯ ಐಸಿಸಿ ವಿಶ್ವಕಪ್ ಟ್ರೋಫಿ ವಿಶ್ವಪರ್ಯಟನೆ ನಡೆಸಲಿದ್ದು ವಿಶ್ವದ ಅನೇಕ ನಗರಗಳಿಗೆ ತೆರಳಲಿದೆ. ಕುವೈಟ್, ಬಹ್ರೈನ್, ಮಲೇಷ್ಯಾ, ಯುಎಸ್‌ಎ, ನೈಜೀರಿಯಾ, ಉಗಾಂಡಾ, ಫ್ರಾನ್ಸ್, ಇಟೆಲಿ, ಸೇರಿದಂತೆ ಒಟ್ಟು 18 ರಾಷ್ಟ್ರಗಳಿಗೆ ಪ್ರಯಾಣಿಸಲಿದೆ.

5 / 7
ಈ ಬಗ್ಗೆ ಐಸಿಸಿ ಚೀಫ್‌ ಎಕ್ಸಿಕ್ಯೂಟಿವ್‌ ಜೆಫ್‌ ಆಲ್ಡರ್‌ಡೈಸ್‌ ಮಾತನಾಡಿದ್ದು, 'ಐಸಿಸಿ ಪುರುಷರ ವಿಶ್ವಕಪ್‌ ಟ್ರೋಫಿಯ ಸಂಚಾರವು ಟೂರ್ನಿಯ ಕೌಂಟ್‌ಡೌನ್‌ನಲ್ಲಿ ಪ್ರಮುಖ ಮೈಲಿಗಲ್ಲು. ಕೆಟ್‌ ಅಭಿವೃದ್ಧಿ ಚಟುವಟಿಕೆಗೆ ಬೆಂಬಲ ಸಿಗಲಿದೆ. ಇದು ಅತಿ ದೊಡ್ಡ ವಿಶ್ವಕಪ್‌ ಟೂರ್ನಿಯಾಗಲಿದೆ' ಎಂದು ಹೇಳಿದ್ದಾರೆ.

6 / 7
ಐಸಿಸಿ ಏಕದಿನ ವಿಶ್ವಕಪ್ ಟೂರ್ನಿ ಅಕ್ಟೋಬರ್‌ 5 ರಿಂದ ನವೆಂಬರ್‌ 19ರವರೆಗೆ ನಡೆಯಲಿದೆ. ಮಾಹಿತಿಯ ಪ್ರಕಾರ ಜೂನ್ 27 ಮಂಗಳವಾರದಂದು ವಿಶ್ವಕಪ್ ವೇಳಾಪಟ್ಟಿ ಬಿಡುಗಡೆಯಾಗಲಿದೆ.

7 / 7
ಈ ಹಿಂದೆಯೇ ವಿಶ್ವಕಪ್ ವೇಳಾಪಟ್ಟಿ ಪ್ರಕಟವಾಗಬೇಕಿತ್ತು. ಆದರೆ, ಬಿಸಿಸಿಐ ಮತ್ತು ಪಿಸಿಬಿ ನಡುವಿನ ವೇಳಾಪಟ್ಟಿ ಸಂಬಂಧಿತ ಹಗ್ಗಜಗ್ಗಾಟದಿಂದಾಗಿ ವೇಳಾಪಟ್ಟಿಯನ್ನು ಪ್ರಕಟಿಸಲು ಸಾಧ್ಯವಾಗಿಲ್ಲ.