
ICC Men’s Test Team of the Year: ಐಸಿಸಿಯು 2022ರ ಟೆಸ್ಟ್ ತಂಡವನ್ನು ಪ್ರಕಟಿಸಿದೆ. ವಿಶೇಷ ಎಂದರೆ 11 ಸದಸ್ಯರ ಈ ತಂಡದಲ್ಲಿ ಟೀಮ್ ಇಂಡಿಯಾ ಏಕೈಕ ಆಟಗಾರ ಮಾತ್ರ ಸ್ಥಾನ ಪಡೆದಿದ್ದಾರೆ.

ಇನ್ನು ಆಸ್ಟ್ರೇಲಿಯಾದ ನಾಲ್ವರು ಆಟಗಾರರು ಹಾಗೂ ಇಂಗ್ಲೆಂಡ್ನ ಮೂವರು ಪ್ಲೇಯರ್ಸ್ 2022ರ ಐಸಿಸಿ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಈ ತಂಡದಲ್ಲಿ ಸ್ಥಾನ ಪಡೆದಿರುವ ಏಕೈಕ ಭಾರತೀಯನಾಗಿ ರಿಷಭ್ ಪಂತ್ ಕಾಣಿಸಿಕೊಂಡಿದ್ದಾರೆ. 2022 ರಲ್ಲಿ 12 ಟೆಸ್ಟ್ ಇನಿಂಗ್ಸ್ ಆಡಿರುವ ಪಂತ್ 90.90 ಸರಾಸರಿಯಲ್ಲಿ ಒಟ್ಟು 680 ರನ್ ಕಲೆಹಾಕಿದ್ದರು. ಈ ವೇಳೆ 23 ಸಿಕ್ಸ್, 23 ಕ್ಯಾಚ್ ಹಾಗೂ 6 ಸ್ಟಂಪಿಂಗ್ಗಳನ್ನು ಕೂಡ ಮಾಡಿದ್ದರು. ಹೀಗಾಗಿಯೇ ಐಸಿಸಿ ಟೆಸ್ಟ್ ತಂಡದಲ್ಲಿ ವಿಕೆಟ್ ಕೀಪರ್ ಆಗಿ ರಿಷಭ್ ಪಂತ್ಗೆ ಸ್ಥಾನ ನೀಡಲಾಗಿದೆ. ಹಾಗಿದ್ರೆ ಐಸಿಸಿ 2022ರ ಟೆಸ್ಟ್ ತಂಡದಲ್ಲಿ ಕಾಣಿಸಿಕೊಂಡ ಆಟಗಾರರು ಯಾರೆಲ್ಲಾ ನೋಡೋಣ...

ಉಸ್ಮಾನ್ ಖ್ವಾಜಾ (ಆಸ್ಟ್ರೇಲಿಯಾ)

ಕ್ರೇಗ್ ಬ್ರಾಥ್ವೈಟ್ (ವೆಸ್ಟ್ ಇಂಡೀಸ್)

ಮಾರ್ನಸ್ ಲಾಬುಶೇನ್ (ಆಸ್ಟ್ರೇಲಿಯಾ)

ಬಾಬರ್ ಆಜಂ (ಪಾಕಿಸ್ತಾನ್)

ಜಾನಿ ಬೈರ್ಸ್ಟೋವ್ (ಇಂಗ್ಲೆಂಡ್)

ಬೆನ್ ಸ್ಟೋಕ್ಸ್ (ನಾಯಕ- ಇಂಗ್ಲೆಂಡ್)

ರಿಷಭ್ ಪಂತ್ (ವಿಕೆಟ್ ಕೀಪರ್-ಭಾರತ)

ನಾಥನ್ ಲಿಯಾನ್ (ಆಸ್ಟ್ರೇಲಿಯಾ)

ಕಗಿಸೊ ರಬಾಡ (ಸೌತ್ ಆಫ್ರಿಕಾ)

ಪ್ಯಾಟ್ ಕಮಿನ್ಸ್ (ಆಸ್ಟ್ರೇಲಿಯಾ)

ಜೇಮ್ಸ್ ಅ್ಯಂಡರ್ಸನ್ (ಇಂಗ್ಲೆಂಡ್)