- Kannada News Photo gallery Cricket photos ICC Awards 2022: ICC Men's T20I Cricketer of the Year 2022 revealed Kannada News zp
ICC Awards 2022: ಐಸಿಸಿ 2022 ರ ಟಿ20 ಆಟಗಾರ ಸೂರ್ಯಕುಮಾರ್ ಯಾದವ್
ICC Awards 2022: 2022 ರ ಟಿ20 ಆಟಗಾರರ ಪ್ರಶಸ್ತಿ ಸುತ್ತಿನಲ್ಲಿ ಒಟ್ಟು ನಾಲ್ವರು ಆಟಗಾರರು ಆಯ್ಕೆಯಾಗಿದ್ದರು. ಅವರಲ್ಲಿ ಇಬ್ಬರು ಆಲ್ರೌಂಡರ್ ಹಾಗೂ ಇಬ್ಬರು ಬ್ಯಾಟ್ಸ್ಮನ್ಗಳು ಅಂತಿಮ ಸುತ್ತಿನಲ್ಲಿದ್ದರು.
Updated on:Jan 25, 2023 | 6:02 PM

ಐಸಿಸಿ 2022 ರ ಟಿ20 ಆಟಗಾರ ಪ್ರಶಸ್ತಿಯನ್ನು ಪ್ರಕಟಿಸಿದೆ. ಈ ಬಾರಿಯ ಟಿ20 ಆಟಗಾರ ಪ್ರಶಸ್ತಿಯು ಇಂಡಿಯಾ ಪ್ಲೇಯರ್ ಸೂರ್ಯಕುಮಾರ್ ಯಾದವ್ ಅವರಿಗೆ ಒಲಿದಿದೆ.

2022 ರ ಟಿ20 ಆಟಗಾರರ ಪ್ರಶಸ್ತಿ ಸುತ್ತಿನಲ್ಲಿ ಒಟ್ಟು ನಾಲ್ವರು ಆಟಗಾರರು ಆಯ್ಕೆಯಾಗಿದ್ದರು. ಅವರಲ್ಲಿ ಇಬ್ಬರು ಆಲ್ರೌಂಡರ್ ಹಾಗೂ ಇಬ್ಬರು ಬ್ಯಾಟ್ಸ್ಮನ್ಗಳು ಅಂತಿಮ ಸುತ್ತಿನಲ್ಲಿದ್ದರು.

ಆದರೆ ಇಂಗ್ಲೆಂಡ್ ಆಲ್ರೌಂಡರ್ ಸ್ಯಾಮ್ ಕರನ್, ಜಿಂಬಾಬ್ವೆ ಆಲ್ರೌಂಡರ್ ಸಿಕಂದರ್ ರಾಝ ಹಾಗೂ ಪಾಕಿಸ್ತಾನದ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಮೊಹಮ್ಮದ್ ರಿಜ್ವಾನ್ ಅವರನ್ನು ಹಿಂದಿಕ್ಕಿ ಸೂರ್ಯಕುಮಾರ್ ಯಾದವ್ಗೆ 2022ರ ಟಿ20 ಆಟಗಾರನಾಗಿ ಹೊರಹೊಮ್ಮಿದ್ದಾರೆ.

ಕಳೆದ ವರ್ಷ 31 ಟಿ20 ಇನಿಂಗ್ಸ್ ಆಡಿದ್ದ ಸೂರ್ಯಕುಮಾರ್ ಯಾದವ್ 187.43 ಸ್ಟ್ರೈಕ್ ರೇಟ್‌ನಲ್ಲಿ 1164 ರನ್ ಗಳಿಸಿದ್ದರು. ಈ ವೇಳೆ 2 ಶತಕ ಹಾಗೂ 9 ಅರ್ಧಶತಕಗಳನ್ನು ಬಾರಿಸಿದ್ದರು. ಅಷ್ಟೇ ಅಲ್ಲದೆ 68 ಸಿಕ್ಸ್ ಸಿಡಿಸುವ ಮೂಲಕ ಹೊಸ ದಾಖಲೆ ಬರೆದಿದ್ದರು.

ಹಾಗೆಯೇ ಒಂದು ಕ್ಯಾಲೆಂಡರ್ ವರ್ಷದಲ್ಲಿ ಟೀಮ್ ಇಂಡಿಯಾ ಪರ ಟಿ20 ಕ್ರಿಕೆಟ್ನಲ್ಲಿ ಅತ್ಯಧಿಕ ರನ್ ಕಲೆಹಾಕಿದ ದಾಖಲೆ ನಿರ್ಮಿಸಿದ್ದರು. ಇದರ ಜೊತೆಗೆ ಟಿ20 ಕ್ರಿಕೆಟ್ ಶ್ರೇಯಾಂಕ ಪಟ್ಟಿಯಲ್ಲಿ ಅಗ್ರಸ್ಥಾನ ಅಲಂಕರಿಸುವ ಮೂಲಕ ಹೊಸ ಇತಿಹಾಸವನ್ನು ಬರೆದಿದ್ದರು. ಇದೀಗ ಈ ಎಲ್ಲಾ ಸಾಧನೆಗಳ ಸರದಾರನಿಗೆ ಐಸಿಸಿ ಟಿ20 ಆಟಗಾರ ಪ್ರಶಸ್ತಿ ಒದಲಿದಿರುವುದು ವಿಶೇಷ.
Published On - 6:02 pm, Wed, 25 January 23
