ICC Rankings: ಐಸಿಸಿ ರ‍್ಯಾಂಕಿಂಗ್​ನಲ್ಲಿ ಟೀಂ ಇಂಡಿಯಾದ ಐವರಿಗೆ ಅಗ್ರಸ್ಥಾನ

Updated on: Dec 24, 2025 | 4:58 PM

Indian Dominance in ICC Rankings: ಐಸಿಸಿ ಇತ್ತೀಚಿನ ಶ್ರೇಯಾಂಕ ಬಿಡುಗಡೆ ಮಾಡಿದ್ದು, ಐವರು ಭಾರತೀಯ ಆಟಗಾರರು ನಂ.1 ಸ್ಥಾನದಲ್ಲಿದ್ದಾರೆ. ರೋಹಿತ್ ಶರ್ಮಾ, ಜಡೇಜಾ, ಬುಮ್ರಾ, ಅಭಿಷೇಕ್ ಶರ್ಮಾ, ವರುಣ್ ಚಕ್ರವರ್ತಿ ಅಗ್ರಸ್ಥಾನ ಅಲಂಕರಿಸಿದ್ದಾರೆ. ಆದರೆ ಸೂರ್ಯಕುಮಾರ್ ಯಾದವ್ ಕಳಪೆ ಫಾರ್ಮ್‌ನಿಂದಾಗಿ ಟಿ20 ಟಾಪ್ 10 ರಿಂದ ಹೊರಬಿದ್ದಿದ್ದಾರೆ. ಬುಮ್ರಾ ಮತ್ತು ವರುಣ್ ಸಹ ತಮ್ಮ ಅಗ್ರಸ್ಥಾನ ಕಳೆದುಕೊಳ್ಳುವ ಹಾದಿಯಲ್ಲಿದ್ದಾರೆ.

1 / 5
ಐಸಿಸಿ ಮೂರು ಮಾದರಿಗಳ ಇತ್ತೀಚಿನ ಶ್ರೇಯಾಂಕಗಳನ್ನು ಬಿಡುಗಡೆ ಮಾಡಿದೆ. ಒಂದಲ್ಲ, ಎರಡಲ್ಲ, ಐದು ಭಾರತೀಯ ಆಟಗಾರರು ಈ ಶ್ರೇಯಾಂಕದಲ್ಲಿ ನಂ. 1 ಸ್ಥಾನವನ್ನು ಅಲಂಕರಿಸಿದ್ದಾರೆ. ಟೆಸ್ಟ್, ಏಕದಿನ, ಟಿ20 ಕ್ರಿಕೆಟ್​ನಲ್ಲಿ ಟೀಂ ಇಂಡಿಯಾದ ಆಟಗಾರರು ಪ್ರಾಬಲ್ಯ ಸಾಧಿಸಿದ್ದಾರೆ.

2 / 5
ರೋಹಿತ್ ಶರ್ಮಾ ಏಕದಿನ ಶ್ರೇಯಾಂಕದಲ್ಲಿ ನಂ. 1 ಬ್ಯಾಟ್ಸ್‌ಮನ್ ಆಗಿ ಮುಂದುವರೆದಿದ್ದಾರೆ. ಜಸ್ಪ್ರೀತ್ ಬುಮ್ರಾ ಟೆಸ್ಟ್ ಶ್ರೇಯಾಂಕದಲ್ಲಿ ನಂ. 1 ಬೌಲರ್ ಆಗಿದ್ದರೆ, ರವೀಂದ್ರ ಜಡೇಜಾ ಟೆಸ್ಟ್ ಆಲ್‌ರೌಂಡರ್​ಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಹಾಗೆಯೇ ಅಭಿಷೇಕ್ ಶರ್ಮಾ ಟಿ 20 ಶ್ರೇಯಾಂಕದಲ್ಲಿ ನಂ. 1 ಬ್ಯಾಟ್ಸ್‌ಮನ್ ಆಗಿದ್ದರೆ, ವರುಣ್ ಚಕ್ರವರ್ತಿ ನಂ. 1 ಟಿ20 ಬೌಲರ್ ಎನಿಸಿಕೊಂಡಿದ್ದಾರೆ.

3 / 5
ಆದಾಗ್ಯೂ ಟೀಂ ಇಂಡಿಯಾದ ಟಿ20 ನಾಯಕ ಸೂರ್ಯಕುಮಾರ್ ಯಾದವ್​ಗೆ ಆಘಾತ ಎದುರಾಗಿದೆ. ಕಳಪೆ ಫಾರ್ಮ್​ನಿಂದ ಬಳಲುತ್ತಿರುವ ಸೂರ್ಯ, ಟಿ20 ಶ್ರೇಯಾಂಕದಲ್ಲಿ ಅಗ್ರ 10 ರಿಂದ ಹೊರಬಿದ್ದಿದ್ದಾರೆ. ಕಳೆದ ಎರಡು ವರ್ಷಗಳಿಂದ ಮೌನಕ್ಕೆ ಶರಣಾಗಿರುವ ಸೂರ್ಯ ಆಡಿರುವ 21 ಟಿ20 ಪಂದ್ಯಗಳಲ್ಲಿ 13 ಸರಾಸರಿಯಲ್ಲಿ ಕೇವಲ 218 ರನ್ ಗಳಿಸಿದ್ದಾರೆ. ಇದರಿಂದಾಗಿ ಸೂರ್ಯಕುಮಾರ್ ಯಾದವ್ ಟಿ20 ಶ್ರೇಯಾಂಕದಲ್ಲಿ ನಿರಂತರವಾಗಿ ಕುಸಿತ ಕಂಡಿದ್ದಾರೆ.

4 / 5
ಇತ್ತ ಜಸ್ಪ್ರೀತ್ ಬುಮ್ರಾ ಮತ್ತು ವರುಣ್ ಚಕ್ರವರ್ತಿ ಕೂಡ ಐಸಿಸಿ ಶ್ರೇಯಾಂಕದಲ್ಲಿ  ನಂ.1 ಸ್ಥಾನವನ್ನು ಕಳೆದುಕೊಳ್ಳುವ ಹಂತದಲ್ಲಿದ್ದಾರೆ. ಪ್ರಸ್ತುತ ಬುಮ್ರಾ 879 ರೇಟಿಂಗ್ ಅಂಕಗಳೊಂದಿಗೆ ಅಗ್ರ ಸ್ಥಾನದಲ್ಲಿದ್ದಾರೆ. ಆದರೆ ಆಶಸ್ ಸರಣಿಯ ಕೇವಲ ಒಂದು ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡಿದ ಪ್ಯಾಟ್ ಕಮ್ಮಿನ್ಸ್,  849 ರೇಟಿಂಗ್ ಅಂಕಗಳೊಂದಿಗೆ ನಾಲ್ಕು ಬೌಲರ್‌ಗಳನ್ನು ಹಿಂದಿಕ್ಕಿ ಎರಡನೇ ಸ್ಥಾನಕ್ಕೇರಿದ್ದಾರೆ.

5 / 5
ವರುಣ್ ಚಕ್ರವರ್ತಿ ಕೂಡ ಟಿ20 ಬೌಲರ್​ಗಳ ಶ್ರೇಯಾಂಕದಲ್ಲಿ ನಂ. 1 ಸ್ಥಾನದಲ್ಲಿದ್ದಾರೆ. ಆದರೆ ದಕ್ಷಿಣ ಆಫ್ರಿಕಾ ವಿರುದ್ಧ ಅವರ ಅದ್ಭುತ ಪ್ರದರ್ಶನದ ಹೊರತಾಗಿಯೂ, ಅವರು 14 ರೇಟಿಂಗ್ ಅಂಕಗಳನ್ನು ಕಳೆದುಕೊಂಡಿದ್ದಾರೆ. ವರುಣ್ ಅವರ ರೇಟಿಂಗ್ಸ್​ 818 ರಿಂದ 804 ಕ್ಕೆ ಕುಸಿದಿದೆ. ಆದಾಗ್ಯೂ, ವರುಣ್ ಮತ್ತು ನಂ. 2 ಬೌಲರ್ ಜಾಕೋಬ್ ಡಫಿ ನಡುವೆ ಗಮನಾರ್ಹ ಅಂತರವಿದ್ದು, ವರುಣ್ ನಂ.1 ಸ್ಥಾನ ಕೆಲ ದಿನಗಳವರೆಗೆ ಮುಂದುವರೆಯಲಿದೆ.

Published On - 4:55 pm, Wed, 24 December 25