
ಶ್ರೀಲಂಕಾ ವಿರುದ್ಧದ ಮೊಹಾಲಿ ಟೆಸ್ಟ್‌ನಲ್ಲಿ ಭರ್ಜರಿ ಶತಕ ಸಿಡಿಸಿದ ರವೀಂದ್ರ ಜಡೇಜಾ ಈ ಪಂದ್ಯದಲ್ಲಿ ಒಟ್ಟು 9 ವಿಕೆಟ್ ಪಡೆದಿದ್ದಕ್ಕೆ ದೊಡ್ಡ ಬಹುಮಾನ ಪಡೆದಿದ್ದಾರೆ. ರವೀಂದ್ರ ಜಡೇಜಾ ಇತ್ತೀಚಿನ ಐಸಿಸಿ ಟೆಸ್ಟ್ ಶ್ರೇಯಾಂಕದಲ್ಲಿ ನಂಬರ್ 1 ಆಲ್ ರೌಂಡರ್ ಎನಿಸಿಕೊಂಡಿದ್ದಾರೆ. ವೆಸ್ಟ್ ಇಂಡೀಸ್ನ ಜೇಸನ್ ಹೋಲ್ಡರ್ ಅವರನ್ನು ಜಡೇಜಾ ಹಿಂದಿಕ್ಕಿದ್ದಾರೆ. ಅದೇ ಸಮಯದಲ್ಲಿ, ಅಶ್ವಿನ್ 3 ನೇ ಸ್ಥಾನಕ್ಕೆ ಕುಸಿದಿದ್ದಾರೆ.

ಜಡೇಜಾ 2 ಸ್ಥಾನ ಮೇಲಕ್ಕೇರಿದ್ದಾರೆ. ಮೊಹಾಲಿಯಲ್ಲಿ ಜಡೇಜಾ ಅಜೇಯ 175 ರನ್ ಗಳಿಸಿದರು. ನಂತರ ಅವರು 9 ವಿಕೆಟ್ ಪಡೆಯುವ ಮೂಲಕ ಪಂದ್ಯ ಶ್ರೇಷ್ಠ ಪ್ರಶಸ್ತಿಗೂ ಭಾಜನರಾಗಿದ್ದರು.



Published On - 3:46 pm, Wed, 9 March 22