T20 World Cup: ವಿಶ್ವ ಚಾಂಪಿಯನ್ ಆಸ್ಟ್ರೇಲಿಯಾಕ್ಕೆ 8.87 ಕೋಟಿ ರೂ. ಬಹುಮಾನ! ಭಾರತಕ್ಕೆ ಸಿಕ್ಕಿದ್ದೇಷ್ಟು?
T20 World Cup 2023: ಇದೀಗ ಫೈನಲ್ ಪಂದ್ಯವನ್ನು ಗೆದ್ದ ಚಾಂಪಿಯನ್ ತಂಡಕ್ಕೆ ಎಷ್ಟು ಬಹುಮಾನ ಸಿಕ್ಕಿದೆ ಎಂಬುದು ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ. ಆಸ್ಟ್ರೇಲಿಯಾ ಮಾತ್ರವಲ್ಲದೆ, ರನ್ನರ್ ಅಪ್ ದಕ್ಷಿಣ ಆಫ್ರಿಕಾ ಹಾಗೂ ಸೆಮಿಫೈನಲಿಸ್ಟ್ ಭಾರತ ಮತ್ತು ಇಂಗ್ಲೆಂಡ್ ಕೂಡ ಉತ್ತಮ ಬಹಮಾನ ಪಡೆದಿವೆ.
1 / 9
ಆಸ್ಟ್ರೇಲಿಯ ಮತ್ತೊಮ್ಮೆ ಮಹಿಳಾ ಟಿ20 ವಿಶ್ವಕಪ್ ಕಿರೀಟ ಮುಡಿಗೇರಿಸಿಕೊಂಡಿದೆ. ಫೆಬ್ರವರಿ 26 ರಂದು ಕೇಪ್ ಟೌನ್‌ನಲ್ಲಿ ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ ಮೆಗ್ ಲ್ಯಾನಿಂಗ್ ನಾಯಕತ್ವದ ಆಸ್ಟ್ರೇಲಿಯನ್ ತಂಡವು ಆತಿಥೇಯ ದಕ್ಷಿಣ ಆಫ್ರಿಕಾವನ್ನು 19 ರನ್‌ಗಳಿಂದ ಸೋಲಿಸಿ, ಆರನೇ ಬಾರಿಗೆ ಮಹಿಳಾಟಿ20 ವಿಶ್ವಕಪ್ ಪ್ರಶಸ್ತಿಯನ್ನು ಗೆದ್ದುಕೊಂಡಿತು.
2 / 9
ಈ ಚಾಂಪಿಯನ್‌ಶಿಪ್‌ನೊಂದಿಗೆ ಆಸ್ಟ್ರೇಲಿಯಾ ಟಿ20 ವಿಶ್ವಕಪ್‌ನಲ್ಲಿ ಹ್ಯಾಟ್ರಿಕ್ ಸಾಧನೆ ಮಾಡಿದೆ. ಲ್ಯಾನಿಂಗ್ ನಾಯಕತ್ವದಲ್ಲಿ, ಆಸ್ಟ್ರೇಲಿಯಾ 2018 ಮತ್ತು 2020 ರಲ್ಲಿಯೂ ಈ ಪ್ರಶಸ್ತಿಯನ್ನು ಗೆದ್ದುಕೊಂಡಿತು. ಇಂತಹ ಅಮೋಘ ಸಾಧನೆಗೆ ಟ್ರೋಫಿಯ ರೂಪದಲ್ಲಿ ಆಸ್ಟ್ರೇಲಿಯಾಗೆ ಬಹುಮಾನ ಬಂದಿದ್ದು, ಇದರೊಂದಿಗೆ ಜೇಬಿಗೆ ಭಾರೀ ಮೊತ್ತವೂ ಸಿಕ್ಕಿದೆ.
3 / 9
ಇದೀಗ ಫೈನಲ್ ಪಂದ್ಯವನ್ನು ಗೆದ್ದ ಚಾಂಪಿಯನ್ ತಂಡಕ್ಕೆ ಎಷ್ಟು ಬಹುಮಾನ ಸಿಕ್ಕಿದೆ ಎಂಬುದು ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ. ಆಸ್ಟ್ರೇಲಿಯಾ ಮಾತ್ರವಲ್ಲದೆ, ರನ್ನರ್ ಅಪ್ ದಕ್ಷಿಣ ಆಫ್ರಿಕಾ ಹಾಗೂ ಸೆಮಿಫೈನಲಿಸ್ಟ್ ಭಾರತ ಮತ್ತು ಇಂಗ್ಲೆಂಡ್ ಕೂಡ ಉತ್ತಮ ಬಹಮಾನ ಪಡೆದಿವೆ.
4 / 9
2023ರ ಮಹಿಳಾ ಟಿ20 ವಿಶ್ವಕಪ್‌ಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ ಬಹುಮಾನ ಮೊತ್ತವನ್ನು ಬಹಳ ಹಿಂದೆಯೇ ಘೋಷಿಸಿತ್ತು. ಇದರ ಅಡಿಯಲ್ಲಿ, ಪಂದ್ಯಾವಳಿಯಲ್ಲಿ ಭಾಗವಹಿಸುವ ಎಲ್ಲಾ 10 ತಂಡಗಳಿಗೆ ಒಟ್ಟು $ 2.45 ಮಿಲಿಯನ್ ಅಂದರೆ ರೂ 20.31 ಕೋಟಿಗೂ ಹೆಚ್ಚು ಬಹುಮಾನವನ್ನು ವಿತರಿಸಲಾಗಿದೆ.
5 / 9
ಚಾಂಪಿಯನ್ ತಂಡಕ್ಕೆ 1 ಮಿಲಿಯನ್ ಡಾಲರ್ ಅಂದರೆ 8.29 ಕೋಟಿ ಬಹುಮಾನ ಸಿಗಲಿದೆ. ಅಂದರೆ, ಪ್ರಶಸ್ತಿ ಗೆದ್ದಿದ್ದಕ್ಕಾಗಿ ಆಸ್ಟ್ರೇಲಿಯಾ ಒಟ್ಟು 8.29 ಕೋಟಿ ರೂ. ಪಡೆದರೆ, ಮತ್ತೊಂದೆಡೆ, ರನ್ನರ್ ಅಪ್ ದಕ್ಷಿಣ ಆಫ್ರಿಕಾ ಅಂದರೆ ಫೈನಲ್‌ನಲ್ಲಿ ಸೋತ ತಂಡಕ್ಕೆ 5 ಲಕ್ಷ ಡಾಲರ್ (4.14 ಕೋಟಿ ರೂ.) ಸಿಗಲಿದೆ.
6 / 9
ಹಾಗೆಯೇ ಐಸಿಸಿ ನಿಯಮಗಳ ಪ್ರಕಾರ, ಪ್ರತಿ ತಂಡವು ಗ್ರೂಪ್ ಹಂತದಲ್ಲಿ ಪಂದ್ಯವನ್ನು ಗೆದ್ದರೆ ರೂ 14.51 ಲಕ್ಷವನ್ನು ಪಡೆಯುತ್ತದೆ. ಆಸ್ಟ್ರೇಲಿಯಾ ಗುಂಪು ಹಂತದ ಎಲ್ಲಾ ನಾಲ್ಕು ಪಂದ್ಯಗಳನ್ನು ಗೆದ್ದುಕೊಂಡಿರುವುದರಿಂದ 58 ಲಕ್ಷ ರೂ. ಪಡೆಯುತ್ತದೆ. ಅಂದರೆ ಆಸೀಸ್ ಗಳಿಸಿದ್ದು ಒಟ್ಟು 8.87 ಕೋಟಿ ರೂ. ಬಹುಮಾನ.
7 / 9
ಗ್ರೂಪ್ ಹಂತದಲ್ಲಿ ದಕ್ಷಿಣ ಆಫ್ರಿಕಾ ಮೂರು ಪಂದ್ಯಗಳನ್ನು ಗೆದ್ದಿತ್ತು. ಹೀಗಾಗಿ ಫೈನಲ್ಗೇರಿದಕ್ಕೆ ಸಿಕ್ಕ 4.14 ಕೋಟಿ ಜೊತೆಗೆ ಇನ್ನೂ 43 ಲಕ್ಷ ರೂಪಾಯಿಗಳು ಆಫ್ರಿಕಾ ತಂಡಕ್ಕೆ ಸಿಗಲಿದೆ. ಅಂದರೆ ಆಫ್ರಿಕಾಗೆ ಒಟ್ಟಾರೆ 4.57 ಕೋಟಿ ರೂ. ಬಹುಮಾನ ಸಿಕ್ಕಂತ್ತಾಗಿದೆ.
8 / 9
ಅದೇ ಸಮಯದಲ್ಲಿ, ಸೆಮಿಫೈನಲ್‌ನಲ್ಲಿ ಸೋತ ಪ್ರತಿ ತಂಡಕ್ಕೆ1.74 ಕೋಟಿ ರೂ. ಬಹುಮಾನವನ್ನು ನೀಡಲಾಗಿದೆ. ಸೆಮಿಫೈನಲ್‌ನಲ್ಲಿ ಸೋತ ಭಾರತ ಮತ್ತು ಇಂಗ್ಲೆಂಡ್ ಎರಡೂ ತಂಡಗಳ ಜೇಬಿಗೆ 1.74 ಕೋಟಿ ರೂ. ಬಹುಮಾನ ಬಿದ್ದಿದೆ.
9 / 9
ಹಾಗೆಯೇ ಗ್ರೂಪ್ ಹಂತದಲ್ಲಿ ಭಾರತ 3 ಪಂದ್ಯಗಳನ್ನು ಗೆದ್ದಿದ್ದರಿಂದ ಅದಕ್ಕೆ ಇನ್ನೂ 43 ಲಕ್ಷ ರೂ. ಅಧಿಕವಾಗಿ ಸಿಗಲಿದೆ. ಈ ಮೂಲಕ ಭಾರತದ ಖಾತೆಗೆ ಒಟ್ಟು 2.17 ಕೋಟಿ ರೂ. ಬಹುಮಾನದ ಹಣ ಬಂದು ಬಿದ್ದಿದೆ. ಮತ್ತೊಂದೆಡೆ ಇಂಗ್ಲೆಂಡ್ ನಾಲ್ಕೂ ಪಂದ್ಯಗಳನ್ನು ಗೆದ್ದಿದ್ದರಿಂದ ಒಟ್ಟು 2.32 ಕೋಟಿ ರೂ. ಬಹುಮಾನ ಪಡೆದುಕೊಂಡಿದೆ.
Published On - 10:16 am, Mon, 27 February 23