‘ಆ ಕ್ಷಣಕ್ಕಾಗಿ ಕಾಯುತ್ತಿದ್ದೇನೆ’; ಭಾರತ- ಪಾಕ್ ಪಂದ್ಯಕ್ಕೂ ಮುನ್ನ ಮಹದಾಸೆ ಹೊರಹಾಕಿದ ಬುಮ್ರಾ
India vs Pakistan, World Cup 2023: ಹಲವು ಕಾರಣಗಳಿಂದ ಈ ಪಂದ್ಯ ವಿಶ್ವ ಕ್ರಿಕೆಟ್ನಲ್ಲಿ ಸಾಕಷ್ಟು ಸುದ್ದಿ ಮಾಡುತ್ತಿದ್ದರೆ, ಟೀಂ ಇಂಡಿಯಾ ವೇಗಿ ಜಸ್ಪ್ರೀತ್ ಬುಮ್ರಾಗೆ ಈ ಪಂದ್ಯ ಇನ್ನಷ್ಟು ವಿಶೇಷವಾಗಿದೆ. ಏಕೆಂದರೆ ತವರಿನಲ್ಲಿ ವೇಗಿ ಜಸ್ಪ್ರೀತ್ ಬುಮ್ರಾಗೆ ಇದು ಮೊದಲ ಅಂತಾರಾಷ್ಟ್ರೀಯ ಏಕದಿನ ಪಂದ್ಯವಾಗಿದೆ.
1 / 6
ತವರಿನಲ್ಲಿ ನಡೆಯುತ್ತಿರುವ ಏಕದಿನ ವಿಶ್ವಕಪ್‌ನಲ್ಲಿ ಟೀಂ ಇಂಡಿಯಾದ ತನ್ನ ಮೂರನೇ ಪಂದ್ಯವನ್ನು ಅಕ್ಟೋಬರ್ 14 ರಂದು ಪಾಕಿಸ್ತಾನದ ವಿರುದ್ಧ ಆಡುತ್ತಿದೆ. ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಈ ಪಂದ್ಯ ನಡೆಯಲಿದೆ.
2 / 6
ಹಲವು ಕಾರಣಗಳಿಂದ ಈ ಪಂದ್ಯ ವಿಶ್ವ ಕ್ರಿಕೆಟ್ನಲ್ಲಿ ಸಾಕಷ್ಟು ಸುದ್ದಿ ಮಾಡುತ್ತಿದ್ದರೆ, ಟೀಂ ಇಂಡಿಯಾ ವೇಗಿ ಜಸ್ಪ್ರೀತ್ ಬುಮ್ರಾಗೆ ಈ ಪಂದ್ಯ ಇನ್ನಷ್ಟು ವಿಶೇಷವಾಗಿದೆ. ಏಕೆಂದರೆ ತವರಿನಲ್ಲಿ ವೇಗಿ ಜಸ್ಪ್ರೀತ್ ಬುಮ್ರಾಗೆ ಇದು ಮೊದಲ ಅಂತಾರಾಷ್ಟ್ರೀಯ ಏಕದಿನ ಪಂದ್ಯವಾಗಿದೆ.
3 / 6
ಜಸ್ಪ್ರೀತ್ ಬುಮ್ರಾ ಗುಜರಾತ್‌ನ ಅಹಮದಾಬಾದ್‌ನಲ್ಲಿ ತಮ್ಮ ಮೊದಲ ಏಕದಿನ ಅಂತಾರಾಷ್ಟ್ರೀಯ ಪಂದ್ಯವನ್ನು ಆಡಲಿದ್ದಾರೆ. ಈ ಮೈದಾನದಲ್ಲಿ ಟೆಸ್ಟ್ ಹಾಗೂ ಟಿ20 ಕ್ರಿಕೆಟ್ ಆಡಿರುವ ಬುಮ್ರಾ ಒಂದೇ ಒಂದು ಏಕದಿನ ಪಂದ್ಯವನ್ನಾಡಿಲ್ಲ. ಹೀಗಾಗಿ ಬುಮ್ರಾಗೆ ಈ ಪಂದ್ಯ ವಿಶೇಷವಾಗಿದ್ದು, ಈ ಪಂದ್ಯಕ್ಕೂ ಮುನ್ನ ಬುಮ್ರಾ ತನ್ನ ಮಹದಾಸೆಯನ್ನು ಹೊರಹಾಕಿದ್ದಾರೆ.
4 / 6
ತವರಿನಲ್ಲಿ ಮೊದಲ ಏಕದಿನ ಪಂದ್ಯವನ್ನಾಡುತ್ತಿರುವ ಬುಮ್ರಾ ಈ ಪಂದ್ಯಕ್ಕೂ ಮುನ್ನ ತನ್ನ ತಾಯಿಯನ್ನೂ ಭೇಟಿಯಾಗುವ ಕಾತುರದಲ್ಲಿದ್ದಾರೆ. ಅಫ್ಘಾನಿಸ್ತಾನ ವಿರುದ್ಧದ ಪಂದ್ಯದ ಬಳಿಕ ನಡೆದ ಸಂವಾದದಲ್ಲಿ ಈ ಬಗ್ಗೆ ಮಾತನಾಡಿದ ಬುಮ್ರಾ, ‘ನಾನು ಅಹಮದಾಬಾದ್‌ನಲ್ಲಿ ಏಕದಿನ ಅಂತರಾಷ್ಟ್ರೀಯ ಪಂದ್ಯವನ್ನು ಆಡಿಲ್ಲ. ನಾನು ಟೆಸ್ಟ್ ಆಡಿದ್ದೇನೆ. ಹಾಗಾಗಿ ವಾತಾವರಣ ರೋಚಕವಾಗಿರಲಿದೆ. ಬಹಳಷ್ಟು ಜನರು ಬರುತ್ತಾರೆ ಎಂದು ನನಗೆ ಖಾತ್ರಿಯಿದೆ. ಹಾಗಾಗಿ ಅಲ್ಲಿ ಆಡಲು ನಾನು ಉತ್ಸುಕನಾಗಿದ್ದೇನೆ.
5 / 6
ನಾನು ಸ್ವಲ್ಪ ಸಮಯದಿಂದ ಮನೆಯಿಂದ ಹೊರಗಿದ್ದೇನೆ. ಹೀಗಾಗಿ ಕುಟುಂಬಸ್ಥರನ್ನು ತುಂಬ ದಿನಗಳಿಂದ ಮಿಸ್ ಮಾಡಿಕೊಳ್ಳುತ್ತಿದ್ದೇನೆ. ಇದೀಗ ತವರಿನಲ್ಲಿ ಪಂದ್ಯವನ್ನಾಡುತ್ತಿದ್ದು, ತಾಯ್ನಾಡಿನಲ್ಲಿ ಅಮ್ಮನನ್ನು ಕಂಡರೆ ಖುಷಿಯಾಗುತ್ತದೆ. ಹೀಗಾಗಿ ನಾನು ಅವರನ್ನು ಭೇಟಿ ಮಾಡಲು ಹೋಗುತ್ತಿದ್ದೇನೆ ಎಂದರು.
6 / 6
ಇನ್ನು ಪಾಕ್ ವಿರುದ್ಧದ ಪಂದ್ಯದ ಕುರಿತು ಮಾತನಾಡಿದ ಬುಮ್ರಾ, ‘ಪ್ರತಿ ತಂಡವು ಬ್ಯಾಟ್ಸ್‌ಮನ್‌ಗಳನ್ನು ಹೊಂದಿರುತ್ತದೆ, ಪ್ರತಿ ತಂಡವು ಬೌಲರ್‌ಗಳನ್ನು ಹೊಂದಿರುತ್ತದೆ. ನಮ್ಮಲ್ಲೂ ಬ್ಯಾಟ್ಸ್‌ಮನ್‌ಗಳಿದ್ದಾರೆ, ಬೌಲರ್‌ಗಳೂ ಇದ್ದಾರೆ. ನಾವು ಯಾವುದೇ ನಿರ್ದಿಷ್ಟ ತಂಡಕ್ಕಾಗಿ ಯಾವುದೇ ವಿಶೇಷ ಸಿದ್ಧತೆಗಳನ್ನು ಮಾಡುತ್ತಿಲ್ಲ ಎಂದಿದ್ದಾರೆ.