ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ನಡುವೆ ನಡೆಯುತ್ತಿರುವ ಎರಡನೇ ಸೆಮಿಸ್ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ದಕ್ಷಿಣ ಆಫ್ರಿಕಾ ತಂಡ, ಆಸ್ಟ್ರೇಲಿಯಾ ತಂಡಕ್ಕೆ 212 ರನ್ ಟಾರ್ಗೆಟ್ ನೀಡಿದೆ. ತಂಡದ ಪರ ಡೇವಿಡ್ ಮಿಲ್ಲರ್ ಏಕಾಂಗಿ ಹೋರಾಟ ನೀಡಿ ಶತಕ ಸಿಡಿಸುವುದರೊಂದಿಗೆ ತಂಡವನ್ನು ದ್ವಿಶತಕದ ಗಡಿ ದಾಟಿಸಿದರು.
ಆದರೆ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆರಂಭಿಸಿದ ಆಫ್ರಿಕಾ ತಂಡಕ್ಕೆ ನಿರೀಕ್ಷಿತ ಆರಂಭ ಸಿಗಲಿಲ್ಲ. ತಂಡ14 ಓವರ್‌ಗಳ ಅಂತ್ಯಕ್ಕೆ 4 ವಿಕೆಟ್ ಕಳೆದುಕೊಂಡು ಕೇವಲ 44 ರನ್ ಗಳಿಸಿತು. ಅದರಲ್ಲೂ ದಕ್ಷಿಣ ಆಫ್ರಿಕಾ ತಂಡ ಪವರ್ ಪ್ಲೇನಲ್ಲಿ ಕೇವಲ 18 ರನ್ ಗಳಿಸಿದ್ದು, ತಂಡದ ಕಳಪೆ ಬ್ಯಾಟಿಂಗ್ಗೆ ಕೈಗನ್ನಡಿಯಾಯಿತು.
ಇನ್ನಿಂಗ್ಸ್ನ ಮೊದಲ ಹತ್ತು ಓವರ್ಗಳಲ್ಲಿ 2 ವಿಕೆಟ್ ಕಳೆದುಕೊಂಡು 18 ರನ್ ಕಲೆಹಾಕಿದ ದಕ್ಷಿಣ ಆಫ್ರಿಕಾ ತಂಡ ಪವರ್‌ಪ್ಲೇನಲ್ಲಿ ಕಲೆಹಾಕಿದ ಎರಡನೇ ಅತ್ಯಂತ ಕಡಿಮೆ ಸ್ಕೋರ್ ಇದಾಗಿದೆ. ಇನ್ನು ವಿಶ್ವಕಪ್ ಇತಿಹಾಸದಲ್ಲಿ ಪವರ್‌ಪ್ಲೇನಲ್ಲಿ ಅತಿ ಕಡಿಮೆ ಸ್ಕೋರ್ ದಾಖಲಿಸಿದ ತಂಡಗಳನ್ನು ನೋಡುವುದಾದರೆ..
ದಕ್ಷಿಣ ಆಫ್ರಿಕಾಗೂ ಮುನ್ನ ಶ್ರೀಲಂಕಾ ತಂಡ ಪವರ್ ಪ್ಲೇನಲ್ಲಿ 6 ವಿಕೆಟ್ ಕಳೆದುಕೊಂಡು 14 ರನ್ ಗಳಿಸಿತ್ತು. ಅದು ಭಾರತದ ಪಂದ್ಯದಲ್ಲಿ ಎಂಬುದು ಗಮನಾರ್ಹ.
2015ರ ವಿಶ್ವಕಪ್ನಲ್ಲಿ ಪಾಕಿಸ್ತಾನ ತಂಡ, ಜಿಂಬಾಬ್ವೆ ವಿರುದ್ಧ 2 ವಿಕೆಟ್ ಕಳೆದುಕೊಂಡು 14 ರನ್ ಗಳಿಸಿತ್ತು.
2011ರ ವಿಶ್ವಕಪ್ನಲ್ಲಿ ಕೆನಡಾ ತಂಡ ಕೂಡ ಜಿಂಬಾಬ್ವೆ ವಿರುದ್ಧ 3 ವಿಕೆಟ್‌ಗಳ ನಷ್ಟಕ್ಕೆ 14 ರನ್ ಗಳಿಸಿತ್ತು.
2011ರ ವಿಶ್ವಕಪ್ನಲ್ಲಿ ಪಾಕಿಸ್ತಾನ ವಿರುದ್ಧ ವೆಸ್ಟ್ ಇಂಡೀಸ್ ತಂಡ 3 ವಿಕೆಟ್ ನಷ್ಟಕ್ಕೆ 18 ರನ್ ಗಳಿಸಿತ್ತು.
ಇದೀಗ 2023ರ ವಿಶ್ವಕಪ್ನಲ್ಲಿ ಆಸ್ಟ್ರೇಲಿಯಾ ವಿರುದ್ಧ ದಕ್ಷಿಣ ಆಫ್ರಿಕಾ ತಂಡ 2 ವಿಕೆಟ್ ಕಳೆದುಕೊಂಡು 18 ರನ್ ಕಲೆಹಾಕಿದೆ.