ICC ODI World Cup: ವಿಶ್ವಕಪ್​ನಲ್ಲಿ ವಿರಾಟ್ ಕೊಹ್ಲಿ ರೋಲ್ ಏನು?: ಟೀಮ್ ಇಂಡಿಯಾದ ಮಾಸ್ಟರ್ ಪ್ಲಾನ್ ಇಲ್ಲಿದೆ ನೋಡಿ

Team India Master Plan in ICC World Cup 2023: ಭಾರತ ತಂಡ ಐಸಿಸಿ ಏಕದಿನ ವಿಶ್ವಕಪ್ 2023 ಲೀಗ್ ಹಂತದಿಂದ ಇಲ್ಲಿಯವರೆಗೆ ನೀಡಿದ ಪ್ರದರ್ಶನ ಅದ್ಭುತವಾಗಿತ್ತು. ರೋಹಿತ್ ಟೀಮ್ ಈ ಪಂದ್ಯಗಳನ್ನೆಲ್ಲ ಗೆದ್ದಿರುವುದು ಕೇವಲ ಅದೃಷ್ಟದಿಂದ ಅಲ್ಲ ಎಂಬುದು ಸ್ಪಷ್ಟವಾಗಿ ಗೊತ್ತಿದೆ. ಪ್ರತಿ ಪಂದ್ಯದಲ್ಲಿ ಒಬ್ಬೊಬ್ಬರು ಮ್ಯಾಚ್ ವಿನ್ನಿಂಗ್ ಪ್ರದರ್ಶನ ನೀಡಿದ್ದಾರೆ.

Vinay Bhat
|

Updated on: Nov 16, 2023 | 1:10 PM

ಐಸಿಸಿ ಏಕದಿನ ವಿಶ್ವಕಪ್ 2023 ರಲ್ಲಿಂದು ಭಾರತ ಒಂದೇ ಒಂದು ಸೋಲು ಕಾಣದೆ ಫೈನಲ್​ಗೇರಿದ ಸಾಧನೆ ಮಾಡಿದೆ. ಆಡಿದ ಹತ್ತು ಪಂದ್ಯಗಳ ಪೈಕಿ ಹತ್ತರಲ್ಲೂ ಗೆದ್ದು ಬೀಗಿದೆ. ಬುಧವಾರ ನಡೆದ ನ್ಯೂಝಿಲೆಂಡ್ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ 70 ರನ್​ಗಳ ಜಯ ಸಾಧಿಸಿ ಪ್ರಶಸ್ತಿ ಸುತ್ತಿಗೆ ಪ್ರವೇಶಿಸಿತು.

1 / 6
ಭಾರತ ತಂಡ ಲೀಗ್ ಹಂತದಿಂದ ಇಲ್ಲಿಯವರೆಗೆ ನೀಡಿದ ಪ್ರದರ್ಶನ ಅದ್ಭುತವಾಗಿತ್ತು. ರೋಹಿತ್ ಟೀಮ್ ಈ ಪಂದ್ಯಗಳನ್ನೆಲ್ಲ ಗೆದ್ದಿರುವುದು ಕೇವಲ ಅದೃಷ್ಟದಿಂದ ಅಲ್ಲ ಎಂಬುದು ಸ್ಪಷ್ಟವಾಗಿ ಗೊತ್ತಿದೆ. ಪ್ರತಿ ಪಂದ್ಯದಲ್ಲಿ ಒಬ್ಬೊಬ್ಬರು ಮ್ಯಾಚ್ ವಿನ್ನಿಂಗ್ ಪ್ರದರ್ಶನ ನೀಡಿದ್ದಾರೆ. ಇದರಲ್ಲಿ ಬಹುಪಾಲು ವಿರಾಟ್ ಕೊಹ್ಲಿಯದ್ದಿದೆ. ಇದಕ್ಕೆ ಕಾರಣ ಕೂಡ ಇದೆ.

2 / 6
ವಿಶ್ವಕಪ್​ನಲ್ಲಿ ವಿರಾಟ್ ಕೊಹ್ಲಿಗೆ ಮ್ಯಾನೇಜ್ಮೆಂಟ್ ನೀಡಿರುವುದು ಅಂತಹ ಪ್ರಮುಖ ಜವಾಬ್ದಾರಿ. ಪ್ರತಿ ಪಂದ್ಯದಲ್ಲಿ ಕೊಹ್ಲಿಯ ಆಟ ಗಮನಿಸಿದರೆ ಅವರು ದೊಡ್ಡ ಶಾಟ್​ಗೆ ಮುಂದಾದವರಲ್ಲ. ಸಿಕ್ಕ ಅವಕಾಶದಲ್ಲಿ, ಬಂದ ಕಳಪೆ ಚೆಂಡನ್ನು ಬೌಂಡರಿಗೆ ಅಟ್ಟುತ್ತಿದ್ದರು. ಅಷ್ಟಕ್ಕೂ ಕೊಹ್ಲಿಗೆ ನೀಡಿದ ಜವಾಬ್ದಾರಿ ಹಾಗಿತ್ತು.

3 / 6
ವಿರಾಟ್ ಕೊಹ್ಲಿ ಬ್ಯಾಟಿಂಗ್​ಗೆ ಬಂದಾಗಿನಿಂದ ಕೊನೆಯ ವರೆಗೆ ಕ್ರೀಸ್​ನಲ್ಲಿ ಇರಬೇಕು. ಎಲ್ಲಾದರು ಒಂದು ಕಡೆ ವಿಕೆಟ್ ಉರುಳುತ್ತಿದ್ದರೆ ಅತ್ತ ಕೊಹ್ಲಿ ಟೊಂಕ ಕಟ್ಟಿ ನಿಲ್ಲಬೇಕು. ಕೊಹ್ಲಿ ಜೊತೆ ಬಂದು ಹೋಗುವವರು ರನ್ ಗಳಿಸುತ್ತಾ ಸಾಗಬೇಕು. ಇದು ಟೀಮ್ ಇಂಡಿಯಾದ ಮಾಸ್ಟರ್ ಪ್ಲಾನ್. ಅದರಂತೆ ಕೊಹ್ಲಿ ಸಿಂಗಲ್, ಡಬಲ್, ಅವಕಾಶ ಸಿಕ್ಕಾಗ ಫೋರ್, ಸಿಕ್ಸ್ ಸಿಡಿಸುತ್ತಿದ್ದರಷ್ಟೆ.

4 / 6
ಟೀಮ್ ಇಂಡಿಯಾ ತನ್ನ ಯೋಜನೆಯಂತೆ ಇಡೀ ಟೂರ್ನಿಯಲ್ಲಿ ಪ್ರದರ್ಶನ ನೀಡಿದೆ. ಓಪನರ್​ಗಳಾದ ರೋಹಿತ್ ಶರ್ಮಾ ಸ್ಫೋಟಕ ಆರಂಭ ಒದಗಿಸುವುದು, ಶುಭ್​ಮನ್ ಗಿಲ್ 10 ಓವರ್​ಗಳ ನಂತರ ಹೆಚ್ಚು ರನ್ ಬಾರಿಸುವುದು ಒಂದು ಯೋಜನೆಯಾದರೆ, ಶ್ರೇಯಸ್ ಅಯ್ಯರ್ ಬಿಗ್ ಶಾಟ್​ಗೆ ಹೆಚ್ಚು ಒತ್ತು ನೀಡಬೇಕು ಎಂಬುದು ಪ್ಲಾನ್ ಆಗಿದೆ.

5 / 6
ಕೆಎಲ್ ರಾಹುಲ್ ಕೂಡ ಆರಂಭದಲ್ಲಿ ನಿಧಾಗತಿಯ ಆಟದ ಮೂಲಕ ನಾನ್​ಸ್ಟ್ರೈಕರ್​ಗೆ ಆಡಲು ಹೆಚ್ಚು ಅವಕಾಶ ಕೊಡಬೇಕು. ನಂತರ ಕೊನೆಯ ಹಂತದಲ್ಲಿ ಅಬ್ಬರಿಸುವುದು ರಾಹುಲ್ ಸ್ಟ್ರಾಟಜಿ ಆಗಿದೆ. ಬೌಲಿಂಗ್​ನಲ್ಲಿ ಬ್ರೇಕ್ ತಂದು ಕೊಡುವ ಹೊಣೆ ಮೊಹಮ್ಮದ್ ಶಮಿ ಮತ್ತು ಜಡೇಜಾಗೆ ನೀಡಲಾಗಿದೆ. ಬುಮ್ರಾ ಹಾಗೂ ಕುಲ್ದೀಪ್ ರನ್​ಗೆ ಕಡಿವಾಣ ಹಾಕಬೇಕು. ಇದು ವಿಶ್ವಕಪ್​ನಲ್ಲಿ ಟೀಮ್ ಇಂಡಿಯಾ ಮಾಸ್ಟರ್ ಪ್ಲಾನ್ ಆಗಿದೆ.

6 / 6
Follow us
ಹಿಂದೆ ಯೋಗೇಶ್ವರ್ ಕಾಂಗ್ರೆಸ್ ಶಾಸಕರನ್ನು ಖರೀದಿಸುವ ಮಾತಾಡಿದ್ದರು: ಸುರೇಶ್

ಯಾದಗಿರಿ ತಲುಪಿ ರೈತರ ಸಂಕಷ್ಟ ಆಲಿಸುತ್ತಿರುವ ಬಸನಗೌಡ ಯತ್ನಾಳ್ ತಂಡ

ಬೆಂಗಳೂರು: ನಡೆದುಕೊಂಡು ಹೋಗುತ್ತಿದ್ದ ಯುವತಿಗೆ ಬ್ಯಾಡ್ ಟಚ್, ವಿಡಿಯೋ ವೈರಲ್

ಶಿಶುವನ್ನು ವಾಪಸ್ಸು ಪಡೆದ ತಂದೆತಾಯಿಗಳ ಸಂತೋಷಕ್ಕೆ ಪಾರವೇ ಇಲ್ಲ!

ಮುಸ್ಲಿಮರಿಗೆ ಮತದಾನದ ಹಕ್ಕು: ಸ್ವಾಮೀಜಿ ಹೇಳಿಕೆಗೆ ಮಹದೇವಪ್ಪ ಗರಂ

ಮೋಕ್ಷಿತಾ ಈಗ ಯುವರಾಣಿ; ಇಬ್ಭಾಗವಾದ ಬಿಗ್ ಬಾಸ್ ಮನೆ

6,6,6,6,6: RCB ಆಟಗಾರ ಲಿಯಾಮ್ ಲಿವಿಂಗ್​ಸ್ಟೋನ್ ಸಿಡಿಲಬ್ಬರ ಶುರು

Daily Devotional: ಪುಣ್ಯಕ್ಷೇತ್ರಗಳಿಗೆ ತೆರಳುವಾಗ ಅಪಘಾತವಾದರೆ ಏನರ್ಥ

Daily Horoscope: ಈ ರಾಶಿಯವರ ವ್ಯಾಪಾರದ ತೊಂದರೆಗಳು ನಿವಾರಣೆಯಾಗುತ್ತದೆ

ಹನುಮಂತನೊಟ್ಟಿಗೆ ಜಗಳ, ಮಹಾಪ್ರಭುಗಳ ಆಜ್ಞೆಯನ್ನೂ ಧಿಕ್ಕರಿಸಿದ ಶೋಭಾ ಶೆಟ್ಟಿ