AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಸಿಸಿಐಯಿಂದ ಬಿಗ್ ಶಾಕ್: ವಿಶ್ವಕಪ್ ಉದ್ಘಾಟನಾ ಸಮಾರಂಭ ದಿಢೀರ್ ರದ್ದು?

ICC ODI World Cup 2023 opening ceremony cancelled: ಎಲ್ಲವೂ ಸರಿಯಾಗಿದೆ, ಇನ್ನೇನು ವಿಶ್ವಕಪ್ ಟೂರ್ನಿಗೆ ಚಾಲನೆ ಸಿಗಬೇಕು ಎನ್ನವಷ್ಟರಲ್ಲಿ ಅಕ್ಟೋಬರ್ 4 ರಂದು ಆಯೋಜಿಸಿದ್ದ ಉದ್ಘಾಟನಾ ಸಮಾರಂಭವನ್ನು ಬಿಸಿಸಿಐ ರದ್ದು ಮಾಡಿದೆ. ಒಪನಿಂಗ್ ಸೆರಮನಿಗೆ ಆಶಾ ಭೋಸ್ಲೆ, ರಣವೀರ್ ಸಿಂಗ್, ತಮನ್ನಾ ಭಾಟಿಯಾ, ಶ್ರೇಯಾ ಘೋಷಾಲ್, ಶಂಕರ್ ಮಹಾದೇವನ್ ಮತ್ತು ಅರಿಜಿತ್ ಸಿಂಗ್ ಅವರಂತಹ ತಾರೆಯರನ್ನು ಬರಲಿದ್ದಾರೆ ಎಂದು ಹೇಳಲಾಗಿತ್ತು.

Vinay Bhat
|

Updated on: Oct 03, 2023 | 9:15 AM

Share
ಐಸಿಸಿ ಏಕದಿನ ವಿಶ್ವಕಪ್ ಟೂರ್ನಿ ಆರಂಭಕ್ಕೂ ಮುನ್ನವೇ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಬಿಸಿಸಿಐ ಒಂದಲ್ಲ ಒಂದು ಎಡವಟ್ಟು ಮಾಡಿಕೊಳ್ಳುತ್ತಿದೆ. ಆರಂಭದಲ್ಲಿ ವಿಶ್ವಕಪ್‌ನ ವೇಳಾಪಟ್ಟಿಯ ಮೇಲಿನ ಟೀಕೆ, ನಂತರ ಸ್ಥಳಗಳ ಗೊಂದಲ, ಟಿಕೆಟ್​ನಲ್ಲಿ ಎಡವಟ್ಟು ಹೀಗೆ ಬಿಸಿಸಿಐ ಅಂದುಕೊಂಡಂತೆ ಎಲ್ಲವೂ ಸಾಗುತ್ತಿಲ್ಲ. ಇದರ ನಡುವೆ ಮತ್ತೊಂದು ಮಹತ್ವದ ನಿರ್ಧಾರ ತೆಗದುಕೊಂಡಿದೆ ಎನ್ನಲಾಗಿದೆ.

1 / 6
ಎಲ್ಲವೂ ಸರಿಯಾಗಿದೆ, ಇನ್ನೇನು ವಿಶ್ವಕಪ್ ಟೂರ್ನಿಗೆ ಚಾಲನೆ ಸಿಗಬೇಕು ಎನ್ನವಷ್ಟರಲ್ಲಿ ಅಕ್ಟೋಬರ್ 4 ರಂದು ಆಯೋಜಿಸಿದ್ದ ಉದ್ಘಾಟನಾ ಸಮಾರಂಭವನ್ನು ಬಿಸಿಸಿಐ ರದ್ದು ಮಾಡಿದೆ. ಇನ್ಸೈಡ್ ಸ್ಪೋರ್ಟ್ ವರದಿಯನ್ನು ಗಮನಿಸಿ ಟಿವಿ9 ಕನ್ನಡ ವೆಬ್ ಕೂಡ ಈ ಹಿಂದೆ ಬಿಸಿಸಿಐ ಉದ್ಘಾಟನಾ ಸಮಾರಂಭವನ್ನು ಯೋಜಿಸಿದೆ ಎಂದು ಹೇಳಿತ್ತು.

2 / 6
ಒಪನಿಂಗ್ ಸೆರಮನಿಗೆ ಆಶಾ ಭೋಸ್ಲೆ, ರಣವೀರ್ ಸಿಂಗ್, ತಮನ್ನಾ ಭಾಟಿಯಾ, ಶ್ರೇಯಾ ಘೋಷಾಲ್, ಶಂಕರ್ ಮಹಾದೇವನ್ ಮತ್ತು ಅರಿಜಿತ್ ಸಿಂಗ್ ಅವರಂತಹ ತಾರೆಯರನ್ನು ಬರಲಿದ್ದಾರೆ ಎಂದು ಹೇಳಲಾಗಿತ್ತು. ಆದಾಗ್ಯೂ, ದೈನಿಕ್ ಜಾಗರಣ್ ಅವರ ಇತ್ತೀಚಿನ ವರದಿಗಳ ಪ್ರಕಾರ, ಬಿಸಿಸಿಐ ಯಾವುದೇ ಉದ್ಘಾಟನಾ ಸಮಾರಂಭವನ್ನು ನಡೆಸುವುದಿಲ್ಲ ಎಂದು ವರದಿ ಮಾಡಿದೆ.

3 / 6
ಈ ವರದಿಗಳು ನಿಜ ಆಗಿದ್ದರೆ, ಬಿಸಿಸಿಐ ಅ. 4 ರಂದು ಎಲ್ಲ ತಂಡಗಳ ನಾಯಕರ ಸಭೆ ಮಾತ್ರ ನಡೆಯಲಿದೆ. ನಂತರ ಲೇಸರ್ ಶೋ ಇರಬಹುದು. ಬಿಸಿಸಿಐ ಉದ್ಘಾಟನಾ ಸಮಾರಂಭದ ಬದಲಿಗೆ ನವೆಂಬರ್ 19 ರಂದು ಸಮಾರೋಪ ಸಮಾರಂಭ ಅಥವಾ ಅಕ್ಟೋಬರ್ 14 ರಂದು ಭಾರತ ಮತ್ತು ಪಾಕಿಸ್ತಾನದ ಪಂದ್ಯದ ಮೊದಲು ಅದ್ಧೂರಿ ಸಮಾರಂಭವನ್ನು ಆಯೋಜಿಸುವ ಪ್ಲಾನ್​ನಲ್ಲಿದೆ.

4 / 6
ಎಲ್ಲಾ 10 ತಂಡಗಳ ನಾಯಕರು ಅಕ್ಟೋಬರ್ 3 ರಂದು ಅಹಮದಾಬಾದ್‌ಗೆ ಆಗಮಿಸಲಿದ್ದಾರೆ. ಇಲ್ಲಿ ಅ. 4 ರಂದು ನಾಯಕರ ಸಭೆ ನಡೆಯಲಿದೆ. ಆದರೆ ಇಂದು ಭಾರತ-ನೆದರ್ಲೆಂಡ್ಸ್ ಮತ್ತು ಇತರ ತಂಡಗಳ ಅಭ್ಯಾಸ ಪಂದ್ಯ ಇರುವುದರಿಂದ, ರೋಹಿತ್ ಶರ್ಮಾ ಸೇರಿದಂತೆ ಕೆಲ ನಾಯಕರು ಅಕ್ಟೋಬರ್ 4 ರಂದು ಬೆಳಿಗ್ಗೆ ಅಹ್ಮದಾಬಾದ್​ಗೆ ತೆರಳಲಿದ್ದಾರೆ ಎಂದು ಹೇಳಲಾಗಿದೆ.

5 / 6
ಭಾರತ ತನ್ನ ಎರಡನೇ ಹಾಗೂ ಕೊನೆಯ ವಾರ್ಮ್-ಅಪ್ ಮ್ಯಾಚ್ ಅನ್ನು ಇಂದು (ಅ. 3) ನೆದರ್ಲೆಂಡ್ಸ್ ವಿರುದ್ಧ ತಿರುವನಂತಪುರಂನ ಗ್ರೀನ್ ಫೀಲ್ಡ್ ಕ್ರೀಡಾಂಗಣದಲ್ಲಿ ಆಡಲಿದೆ. ಈಗಾಗಲೇ ಟೀಮ್ ಇಂಡಿಯಾ ತಿರುವನಂತಪುರಂಗೆ ತಲುಪಿದ್ದು ವಿಶೇಷ ರೀತಿಯಲ್ಲಿ ಆಟಗಾರರು ಅಭ್ಯಾಸ ನಡೆಸುತ್ತಿದ್ದಾರೆ.

6 / 6
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ

ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ

ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ

ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ

ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್

ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?

ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!

ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!

ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್

ಡಿಕೆಶಿ ತಂಡದ ಡಿನ್ನರ್​​ ಮೀಟಿಂಗ್​​ ಬಗ್ಗೆ ಸೋಮಶೇಖರ್​​ ಬಿಗ್​​ ಅಪ್ಡೇಟ್​​