Paul Stirling: 8 ಭರ್ಜರಿ ಸಿಕ್ಸ್, 15 ಫೋರ್: ಸಿಡಿಲಬ್ಬರದ ಸೆಂಚುರಿ ಸಿಡಿಸಿದ ಸ್ಟಿರ್ಲಿಂಗ್

| Updated By: ಝಾಹಿರ್ ಯೂಸುಫ್

Updated on: Jun 27, 2023 | 10:09 PM

ICC World Cup Qualifiers 2023: ಐರ್ಲೆಂಡ್ ತಂಡಕ್ಕೆ ಆರಂಭಿಕರಾದ ಪೌಲ್ ಸ್ಟೀರ್ಲಿಂಗ್ ಹಾಗೂ ಮ್ಯಾಕ್​ಬ್ರೈನ್ (24) ಉತ್ತಮ ಆರಂಭ ಒದಗಿಸಿದ್ದರು.

1 / 7
 ICC World Cup Qualifiers 2023: ಝಿಂಬಾಬ್ವೆಯ ಬುಲವಾಯೊನ ಅಥ್ಲೆಟಿಕ್ ಸ್ಟೇಡಿಯಂನಲ್ಲಿ ನಡೆದ ಏಕದಿನ ವಿಶ್ವಕಪ್​ನ ಅರ್ಹತಾ ಸುತ್ತಿನ ಪಂದ್ಯದಲ್ಲಿ ಐರ್ಲೆಂಡ್ ಆರಂಭಿಕ ಆಟಗಾರ ಪೌಲ್ ಸ್ಟೀರ್ಲಿಂಗ್ ಸ್ಪೋಟಕ ಶತಕ ಸಿಡಿಸಿ ಮಿಂಚಿದ್ದಾರೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಯುಎಇ ಫೀಲ್ಡಿಂಗ್ ಆಯ್ದುಕೊಂಡಿತು.

2 / 7
ಅದರಂತೆ ಇನಿಂಗ್ಸ್ ಆರಂಭಿಸಿದ ಐರ್ಲೆಂಡ್ ತಂಡಕ್ಕೆ ಆರಂಭಿಕರಾದ ಪೌಲ್ ಸ್ಟೀರ್ಲಿಂಗ್ ಹಾಗೂ ಮ್ಯಾಕ್​ಬ್ರೈನ್ (24) ಉತ್ತಮ ಆರಂಭ ಒದಗಿಸಿದ್ದರು. ಇನ್ನು ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ನಾಯಕ ಬಾಲ್ಬಿರ್ನಿ 88 ಎಸೆತಗಳಲ್ಲಿ 66 ರನ್​ ಬಾರಿಸಿ ನಿರ್ಗಮಿಸಿದರು.

3 / 7
ಆದರೆ ಮತ್ತೊಂದೆಡೆ ಗಟ್ಟಿಯಾಗಿ ನೆಲೆಯೂರಿದ ಪೌಲ್ ಸ್ಟಿರ್ಲಿಂಗ್ ರನ್ ಪೇರಿಸುತ್ತಾ ಸಾಗಿದರು. ಪರಿಣಾಮ 100 ಎಸೆತಗಳಲ್ಲಿ ತಮ್ಮ ಶತಕ ಪೂರೈಸಿದರು. ಭರ್ಜರಿ ಸೆಂಚುರಿ ಬೆನ್ನಲ್ಲೇ ಬಿರುಸಿನ ಬ್ಯಾಟಿಂಗ್​ಗೆ ಒತ್ತು ನೀಡಿದ ಸ್ಟಿರ್ಲಿಂಗ್ ಸಿಕ್ಸ್​-ಫೋರ್​ಗಳ ಸುರಿಮಳೆಗೈದರು.

4 / 7
ಮೈದಾನದ ಮೂಲೆ ಮೂಲೆಗೂ ಸಿಕ್ಸ್​-ಫೋರ್​ಗಳನ್ನು ಬಾರಿಸಿದ ಸ್ಟಿರ್ಲಿಂಗ್ 124 ಎಸೆತಗಳಲ್ಲಿ 150 ರನ್ ಪೂರೈಸಿದರು. ಈ ಹಂತದಲ್ಲಿ ರನ್​ ಗತಿ ಹೆಚ್ಚಿಸಲು ಮುಂದಾದ ಪೌಲ್ ಸ್ಟಿರ್ಲಿಂಗ್ ಕ್ಯಾಚ್ ನೀಡಿ ಔಟಾದರು.

5 / 7
ಆದರೆ ಅಷ್ಟರಲ್ಲಾಗಲೇ 134 ಎಸೆತಗಳಲ್ಲಿ 8 ಭರ್ಜರಿ ಸಿಕ್ಸ್​ ಹಾಗೂ 15 ಫೋರ್​ನೊಂದಿಗೆ ಪೌಲ್ ಸ್ಟಿರ್ಲಿಂಗ್ 162 ರನ್ ಬಾರಿಸಿದ್ದರು.

6 / 7
ಪೌಲ್ ಸ್ಟಿರ್ಲಿಂಗ್ ಅವರ ಈ ಭರ್ಜರಿ ಶತಕದ ನೆರವಿನಿಂದ ಐರ್ಲೆಂಡ್ ತಂಡವು ನಿಗದಿತ 50 ಓವರ್​ಗಳಲ್ಲಿ 4 ವಿಕೆಟ್ ನಷ್ಟಕ್ಕೆ 349 ರನ್​ ಕಲೆಹಾಕಿದೆ.

7 / 7
350 ರನ್​ಗಳ ಕಠಿಣ ಗುರಿ ಬೆನ್ನತ್ತಿದ ಯುಎಇ ತಂಡವು 39 ಓವರ್​ಗಳಲ್ಲಿ 211 ರನ್​ಗಳಿಸಿ ಆಲೌಟ್ ಆಯಿತು. ಇದರೊಂದಿಗೆ ಐರ್ಲೆಂಡ್ ತಂಡ 138 ರನ್​ಗಳ ಭರ್ಜರಿ ಜಯ ತನ್ನದಾಗಿಸಿಕೊಂಡಿದೆ.