ILT20 ಲೀಗ್ ಗೆದ್ದ ಮುಂಬೈ ಫ್ರಾಂಚೈಸಿ ತಂಡಕ್ಕೆ ಸಿಕ್ಕ ಬಹುಮಾನ ಮೊತ್ತ ಎಷ್ಟು ಗೊತ್ತಾ?
TV9 Web | Updated By: ಝಾಹಿರ್ ಯೂಸುಫ್
Updated on:
Feb 18, 2024 | 8:23 AM
ILT20 2024: ದುಬೈ ಇಂಟರ್ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ILT20 ಲೀಗ್ ಫೈನಲ್ ಪಂದ್ಯದಲ್ಲಿ ಎಂಐ ಎಮಿರೇಟ್ಸ್ ತಂಡ ಭರ್ಜರಿ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಎಂಐ ಎಮಿರೇಟ್ಸ್ ತಂಡವು 208 ರನ್ ಕಲೆಹಾಕಿತು. ಈ ಬೃಹತ್ ಗುರಿಯನ್ನು ಬೆನ್ನತ್ತಿದ ದುಬೈ ಕ್ಯಾಪಿಟಲ್ಸ್ ತಂಡ 163 ರನ್ಗಳಿಸಲಷ್ಟೇ ಶಕ್ತರಾದರು.
1 / 7
ಇಂಟರ್ನ್ಯಾಷನಲ್ ಲೀಗ್ (ILT20 2024) ಟಿ20 ಕ್ರಿಕೆಟ್ನ ಹೊಸ ಅಧಿಪತಿಯಾಗಿ ಎಂಐ ಎಮಿರೇಟ್ಸ್ ತಂಡ ಹೊರಹೊಮ್ಮಿದೆ. ದುಬೈನ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ದುಬೈ ಕ್ಯಾಪಿಟಲ್ಸ್ (Dubai Capitals) ತಂಡವನ್ನು 45 ರನ್ಗಳಿಂದ ಮಣಿಸಿ ಎಂಐ ಎಮಿರೇಟ್ಸ್ (MI Emirates) ಚಾಂಪಿಯನ್ ಪಟ್ಟ ಅಲಂಕರಿಸಿದೆ.
2 / 7
ಇದರೊಂದಿಗೆ ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯ ಮತ್ತೊಂದು ತಂಡ ಮತ್ತೊಂದು ಕಿರೀಟವನ್ನು ಮುಡಿಗೇರಿಸಿಕೊಂಡಂತಾಗಿದೆ. ಇದಕ್ಕೂ ಮುನ್ನ ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯ ತಂಡಗಳು ಐಪಿಎಲ್, ಸಿಎಲ್ಟಿ20, ಡಬ್ಲ್ಯೂಪಿಎಲ್, ಎಂಎಲ್ಸಿ ಲೀಗ್ನಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿತ್ತು. ಇದೀಗ ಇಂಟರ್ನ್ಯಾಷನಲ್ ಲೀಗ್ ಟಿ20 ಯಲ್ಲೂ ಟ್ರೋಫಿ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಈ ಚಾಂಪಿಯನ್ ಪಟ್ಟದೊಂದಿಗೆ ಎಂಐ ಎಮಿರೇಟ್ಸ್ ತಂಡಕ್ಕೆ ಸಿಕ್ಕ ಬಹುಮಾನ ಮೊತ್ತ ಎಷ್ಟು ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ...
3 / 7
ಇಂಟರ್ನ್ಯಾಷನಲ್ ಲೀಗ್ ಟಿ20 ಟೂರ್ನಿಯಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸುವ ತಂಡಕ್ಕೆ 7 ಲಕ್ಷ ಡಾಲರ್ ಬಹುಮಾನ ಮೊತ್ತ ನೀಡಲಾಗುತ್ತದೆ. ಅಂದರಂತೆ ಇದೀಗ ಎಂಐ ಎಮಿರೇಟ್ಸ್ ತಂಡವು ಭಾರತೀಯ ಮೌಲ್ಯ 5,80,91,950 ರೂ. ಬಹುಮಾನ ಮೊತ್ತವಾಗಿ ಪಡೆದುಕೊಂಡಿದೆ.
4 / 7
ಇನ್ನು ಈ ಟೂರ್ನಿಯಲ್ಲಿ ರನ್ನರ್ ಅಪ್ ಆಗುವ ತಂಡಕ್ಕೆ 3 ಲಕ್ಷ ಡಾಲರ್ ಬಹುಮಾನ ಮೊತ್ತ ನಿಗದಿ ಮಾಡಲಾಗಿದ್ದು, ಇದೀಗ ಫೈನಲ್ನಲ್ಲಿ ಎಡವಿರುವ ದುಬೈ ಕ್ಯಾಪಿಟಲ್ಸ್ ತಂಡವು ಒಟ್ಟು 2,48,96,550 ರೂ. ಬಹುಮಾನ ಮೊತ್ತ ಪಡೆದುಕೊಂಡಿದೆ.
5 / 7
ಹಾಗೆಯೇ ಅತೀ ಹೆಚ್ಚು ಸಿಕ್ಸ್ ಬಾರಿಸಿದ ಆಟಗಾರನಿಗೆ 15000 ಡಾಲರ್ ನೀಡಲಾಗಿದೆ. ಅದರಂತೆ ಈ ಬಾರಿಯ ಟೂರ್ನಿಯಲ್ಲಿ 31 ಸಿಕ್ಸ್ ಸಿಡಿಸಿದ ನಿಕೋಲಸ್ ಪೂರನ್ 12,44,827 ರೂ. ಮೊತ್ತ ಪಡೆದುಕೊಂಡಿದ್ದಾರೆ.
6 / 7
ಇನ್ನು ಅತ್ಯುತ್ತಮ ಬೌಲರ್ ಪ್ರಶಸ್ತಿಯನ್ನು ವಾಖರ್ ಸಕ್ಲೈನ್ (12,44,827 ರೂ.) ಪಡೆದುಕೊಂಡರೆ, ಅತ್ಯುತ್ತಮ ಬ್ಯಾಟ್ಸ್ಮನ್ ಪ್ರಶಸ್ತಿಯನ್ನು ಜೇಮ್ಸ್ ವಿನ್ಸ್ (12,44,827 ರೂ.) ತಮ್ಮದಾಗಿಸಿಕೊಂಡಿದ್ದಾರೆ.
7 / 7
ಹಾಗೆಯೇ ಟೂರ್ನಿಯುದ್ದಕ್ಕೂ ಅದ್ಭುತ ಆಲ್ರೌಂಡರ್ ಪ್ರದರ್ಶನದ ಮೂಲಕ ಮಿಂಚಿದ್ದ ಸಿಕಂದರ್ ರಾಝಗೆ (313 ರನ್ಸ್ + 13 ವಿಕೆಟ್) ಅತ್ಯಂತ ಮೌಲ್ಯಯುತ ಆಟಗಾರನ ಪ್ರಶಸ್ತಿ ಒಲಿದಿದೆ. ಈ ಪ್ರಶಸ್ತಿಯೊಂದಿಗೆ ರಾಝ 12,44,827 ರೂ. ಬಹುಮಾನ ಮೊತ್ತ ಪಡೆದುಕೊಂಡಿದ್ದಾರೆ.