IND vs AFG: ಬೆಂಗಳೂರಿನಲ್ಲಿ 6 ವರ್ಷಗಳ ಹಿಂದೆ ರನ್​ಗಳ ಮಳೆ ಸುರಿಸಿದ್ದ ಟೀಂ ಇಂಡಿಯಾ..!

|

Updated on: Jan 15, 2024 | 7:46 PM

IND vs AFG: ಬೆಂಗಳೂರಿನ ಎಂ ಚಿನ್ನಸ್ವಾಮಿ ಮೈದಾನ ಬ್ಯಾಟರ್​ಗಳಿಗೆ ಹೆಚ್ಚು ನೆರವಾಗುತ್ತದೆ. ಹೀಗಾಗಿ ಬೆಂಗಳೂರಿನಲ್ಲಿ ಟಿ20ಯೇ ಇರಲಿ ಅಥವಾ ಏಕದಿನ ಪಂದ್ಯವೇ ಇರಲಿ. ಇಲ್ಲಿ ಸಾಕಷ್ಟು ರನ್​ಗಳ ಮಳೆ ಸುರಿಯುತ್ತದೆ. ಇದಕ್ಕೆ ಪೂರಕವಾಗಿ ಸುಮಾರು 6 ವರ್ಷಗಳ ಹಿಂದೆ ಈ ನೆಲದಲ್ಲಿಯೇ ಟೀಂ ಇಂಡಿಯಾ ದಾಖಲೆ ನಿರ್ಮಿಸಿತ್ತು.

1 / 6
ಭಾರತ ಹಾಗೂ ಅಫ್ಘಾನಿಸ್ತಾನ ನಡುವಿನ ಮೂರನೇ ಟಿ20 ಪಂದ್ಯ ಬೆಂಗಳೂರಿನಲ್ಲಿ ಇದೇ ಜನವರಿ 17 ರಂದು ನಡೆಯಲ್ಲಿದೆ. ಭಾರತ ಈಗಾಗಲೇ ಟಿ20 ಸರಣಿ ಗೆದ್ದಿರುವುದರಿಂದ ಈ ಪಂದ್ಯದಲ್ಲಿ ರೋಹಿತ್ ಶರ್ಮಾ ಟಾಸ್ ಗೆದ್ದರೆ ಮೊದಲು ಬ್ಯಾಟಿಂಗ್ ಮಾಡುವ ಸಾಧ್ಯತೆಗಳು ಹೆಚ್ಚಿವೆ. ಇದರೊಂದಿಗೆ ಈ ಪಂದ್ಯದಲ್ಲಿ ರನ್​ಗಳ ಮಳೆ ಹರಿಯುವ ನಿರೀಕ್ಷೆ ಹೆಚ್ಚಾಗಿದೆ.

2 / 6
ವಾಸ್ತವವಾಗಿ ಬೆಂಗಳೂರಿನ ಎಂ ಚಿನ್ನಸ್ವಾಮಿ ಮೈದಾನ ಬ್ಯಾಟರ್​ಗಳಿಗೆ ಹೆಚ್ಚು ನೆರವಾಗುತ್ತದೆ. ಹೀಗಾಗಿ ಬೆಂಗಳೂರಿನಲ್ಲಿ ಟಿ20ಯೇ ಇರಲಿ ಅಥವಾ ಏಕದಿನ ಪಂದ್ಯವೇ ಇರಲಿ. ಇಲ್ಲಿ ಸಾಕಷ್ಟು ರನ್​ಗಳ ಮಳೆ ಸುರಿಯುತ್ತದೆ. ಇದಕ್ಕೆ ಪೂರಕವಾಗಿ ಸುಮಾರು 6 ವರ್ಷಗಳ ಹಿಂದೆ ಈ ನೆಲದಲ್ಲಿಯೇ ಟೀಂ ಇಂಡಿಯಾ ದಾಖಲೆ ನಿರ್ಮಿಸಿತ್ತು.

3 / 6
2017ರಲ್ಲಿ ಈ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾರತ ಮತ್ತು ಇಂಗ್ಲೆಂಡ್ ನಡುವೆ ಟಿ20 ಅಂತಾರಾಷ್ಟ್ರೀಯ ಪಂದ್ಯ ನಡೆದಿತ್ತು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ನಿಗದಿತ 20 ಓವರ್​ಗಳಲ್ಲಿ ಆರು ವಿಕೆಟ್ ನಷ್ಟಕ್ಕೆ 202 ರನ್ ಗಳಿಸಿತ್ತು. ಭಾರತದ ಪರ ಸುರೇಶ್ ರೈನಾ 45 ಎಸೆತಗಳಲ್ಲಿ 65 ರನ್ ಮತ್ತು ಎಂಎಸ್ ಧೋನಿ 36 ಎಸೆತಗಳಲ್ಲಿ 56 ರನ್ ಗಳಿಸಿ ಅತ್ಯುತ್ತಮ ಇನ್ನಿಂಗ್ಸ್ ಆಡಿದರು.

4 / 6
ಈ ಪಂದ್ಯದಲ್ಲಿ ನಾಯಕ ವಿರಾಟ್ ಕೊಹ್ಲಿ ಅವರು ಕೆಎಲ್ ರಾಹುಲ್ ಅವರೊಂದಿಗೆ ಓಪನಿಂಗ್ ಮಾಡಿದರು. ಆದರೆ ಕೊಹ್ಲಿ ಕೇವಲ 2 ರನ್ ಮತ್ತು ರಾಹುಲ್ 22 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಇದಾದ ಬಳಿಕ 203 ರನ್‌ಗಳ ಗುರಿ ಬೆನ್ನತ್ತಿದ ಇಂಗ್ಲೆಂಡ್ ತಂಡವು ಕೇವಲ 16.3 ಓವರ್‌ಗಳಲ್ಲಿ 127 ರನ್‌ಗಳಿಗೆ ಆಲೌಟ್ ಆಗಿತ್ತು.

5 / 6
ಈ ಪಂದ್ಯದಲ್ಲಿ ಯಜುವೇಂದ್ರ ಚಹಾಲ್ ಟೀಂ ಇಂಡಿಯಾ ಪರ ಅತ್ಯಧಿಕ 6 ವಿಕೆಟ್ ಕಬಳಿಸಿದ್ದರು. ಇವರೊಂದಿಗೆ ಜಸ್ಪ್ರೀತ್ ಬುಮ್ರಾ ಕೂಡ ಮೂರು ವಿಕೆಟ್ ಪಡೆದರು. ಈ ಪಂದ್ಯದಲ್ಲಿ 202 ರನ್ ಕಲೆಹಾಕಿದ್ದ ಭಾರತ ಅಂತಾರಾಷ್ಟ್ರೀಯ ಟಿ20 ಯಲ್ಲಿ ಅಧಿಕ ರನ್ ಕಲೆಹಾಕಿದ ಮೊದಲ ತಂಡ ಎನಿಸಿಕೊಂಡಿತು.

6 / 6
ಇದರೊಂದಿಗೆ ಬೆಂಗಳೂರಿನಲ್ಲಿ ಅಂತಾರಾಷ್ಟ್ರೀಯ ಟಿ20ಯಲ್ಲಿ ತಂಡವೊಂದು ಕಲೆಹಾಕಿದ ಎರಡನೇ ಅತ್ಯಧಿಕ ಸ್ಕೋರ್ ಬಗ್ಗೆ ಮಾತನಾಡುವುದಾದರೆ,​ 2019 ರಲ್ಲಿ ನಡೆದ ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಪಂದ್ಯದಲ್ಲಿ ಭಾರತ ನೀಡಿದ 190 ರನ್​ಗಳ ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾ ಕೇವಲ ಮೂರು ವಿಕೆಟ್‌ ಕಳೆದುಕೊಂಡು 194 ರನ್ ಕಲೆಹಾಕಿತ್ತು.