IND vs AFG: ಟಿ20 ಸರಣಿಯಿಂದ ಹೊರಬಿದ್ದ ಅಫ್ಘಾನ್ ತಂಡದ ಸ್ಟಾರ್ ಸ್ಪಿನ್ನರ್ ರಶೀದ್ ಖಾನ್..!
IND vs AFG: ಮಾಧ್ಯಮ ವರದಿಗಳ ಪ್ರಕಾರ ಅಫ್ಘಾನಿಸ್ತಾನದ ಸ್ಟಾರ್ ಸ್ಪಿನ್ನರ್ ರಶೀದ್ ಖಾನ್ ಭಾರತ ವಿರುದ್ಧದ ಟಿ20 ಸರಣಿಯಿಂದ ಹೊರಗುಳಿದಿದ್ದಾರೆ ಎಂದು ವರದಿಯಾಗಿದೆ. 2023 ರ ಏಕದಿನ ವಿಶ್ವಕಪ್ ನಂತರ ರಶೀದ್ ಬೆನ್ನಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಗಾಯದ ಕಾರಣ ಅವರು ಬಿಗ್ಬ್ಯಾಷ್ ಲೀಗ್ ಕೂಡ ಆಡಿರಲಿಲ್ಲ.
1 / 8
2024ರ ಟಿ20 ವಿಶ್ವಕಪ್‌ಗೂ ಮುನ್ನ ಭಾರತ ಮತ್ತು ಅಫ್ಘಾನಿಸ್ತಾನ ನಡುವೆ ಮೂರು ಟಿ20 ಪಂದ್ಯಗಳ ಸರಣಿ ನಡೆಯಲಿದೆ. 2024ರ ಟಿ20 ವಿಶ್ವಕಪ್‌ಗೂ ಮುನ್ನ ಇದು ಭಾರತದ ಕೊನೆಯ ಟಿ20 ಸರಣಿಯಾಗಿದೆ. ಅಲ್ಲದೆ ಮೊದಲ ಬಾರಿಗೆ ಟಿ20 ಸರಣಿಗಾಗಿ ಭಾರತಕ್ಕೆ ಬರುತ್ತಿರುವ ಅಫ್ಘಾನ್ ತಂಡಕ್ಕೂ ಈ ಸರಣಿ ಅತ್ಯಂತ ಮಹತ್ವದ್ದಾಗಿದೆ.
2 / 8
ಈ ಸರಣಿಗಾಗಿ ಈಗಾಗಲೇ ಎರಡೂ ತಂಡಗಳನ್ನು ಪ್ರಕಟಿಸಲಾಗಿದೆ. ಅದರಂತೆ ಭಾರತ ತಂಡವನ್ನು ಹಾರ್ದಿಕ್ ಪಾಂಡ್ಯ ಬದಲು ರೋಹಿತ್ ಶರ್ಮಾ ಮುನ್ನಡೆಸಿದರೆ, ಅಫ್ಘಾನಿಸ್ತಾನ ತಂಡವನ್ನು ರಶೀದ್ ಖಾನ್ ಬದಲು ಇಬ್ರಾಹಿಂ ಜದ್ರಾನ್ ಮುನ್ನಡೆಸುತ್ತಿದ್ದಾರೆ.
3 / 8
ಉಭಯ ತಂಡಗಳ ನಡುವಿನ ಮೊದಲ ದ್ವಿಪಕ್ಷೀಯ ಸರಣಿ ಇದಾಗಿದ್ದು, ಸರಣಿಯ ಮೊದಲ ಪಂದ್ಯ ಜನವರಿ 11ರಂದು ಮೊಹಾಲಿ ಮೈದಾನದಲ್ಲಿ ನಡೆಯಲಿದೆ. ಈ ನಡುವೆ ಅಫ್ಘಾನ್ ತಂಡಕ್ಕೆ ಬಿಗ್ ಶಾಕ್ ಎದುರಾಗಿದ್ದು, ತಂಡದ ಸ್ಟಾರ್ ಆಲ್ರೌಂಡರ್ ಸರಣಿಯಿಂದಲೇ ಹೊರಬಿದ್ದಿದ್ದಾರೆ.
4 / 8
ಮಾಧ್ಯಮ ವರದಿಗಳ ಪ್ರಕಾರ ಅಫ್ಘಾನಿಸ್ತಾನದ ಸ್ಟಾರ್ ಸ್ಪಿನ್ನರ್ ರಶೀದ್ ಖಾನ್ ಭಾರತ ವಿರುದ್ಧದ ಟಿ20 ಸರಣಿಯಿಂದ ಹೊರಗುಳಿದಿದ್ದಾರೆ ಎಂದು ವರದಿಯಾಗಿದೆ. 2023 ರ ಏಕದಿನ ವಿಶ್ವಕಪ್ ನಂತರ ರಶೀದ್ ಬೆನ್ನಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಗಾಯದ ಕಾರಣ ಅವರು ಬಿಗ್ಬ್ಯಾಷ್ ಲೀಗ್ ಕೂಡ ಆಡಿರಲಿಲ್ಲ.
5 / 8
ಇದಲ್ಲದೆ, ಅವರು ಯುಎಇ ವಿರುದ್ಧದ ಟಿ20 ಸರಣಿಗೂ ತಂಡದಲ್ಲಿ ಆಯ್ಕೆಯಾಗಿರಲಿಲ್ಲ. ಆದರೆ ಭಾರತ ವಿರುದ್ಧದ ಟಿ20 ಸರಣಿ ಆರಂಭದ ವೇಳೆಗೆ ರಶೀದ್ ಪೂರ್ಣ ಫಿಟ್ ಆಗುವ ಭರವಸೆಯಿಂದ ಆಯ್ಕೆ ಮಂಡಳಿ ಅವರನ್ನು ತಂಡದಲ್ಲಿ ಆಯ್ಕೆ ಮಾಡಿತ್ತು. ಆದರೀಗ ಅವರು ಸಂಪೂರ್ಣವಾಗಿ ಫಿಟ್ ಆಗಿರದ ಕಾರಣ ಅವರನ್ನು ಟಿ20 ಸರಣಿಯಿಂದ ಕೈಬಿಡಲಾಗಿದೆ ಎಂದು ವರದಿಯಾಗಿದೆ.
6 / 8
ವಾಸ್ತವವಾಗಿ ರಶೀದ್ ಅಫ್ಘಾನಿಸ್ತಾನ ತಂಡದ ನಿಯಮಿತ ನಾಯಕ. ಆದರೆ ಭಾರತ ವಿರುದ್ಧದ ಸರಣಿಗೆ ಇಬ್ರಾಹಿಂ ಜದ್ರಾನ್ ಅವರಿಗೆ ನಾಯಕತ್ವ ವಹಿಸಲಾಗಿದೆ. ಯುಎಇ ವಿರುದ್ಧವೂ ಜದ್ರಾನ್ ತಂಡವನ್ನು ಮುನ್ನಡೆಸಿದ್ದರು. ಅಫ್ಘಾನಿಸ್ತಾನದ ಅತ್ಯುತ್ತಮ ಬೌಲರ್‌ಗಳಲ್ಲಿ ಒಬ್ಬರಾಗಿರುವ ರಶೀದ್, ತಂಡದ ಪರ 82 ಟಿ20 ಪಂದ್ಯಗಳಲ್ಲಿ 130 ವಿಕೆಟ್‌ಗಳನ್ನು ಪಡೆದಿದ್ದಾರೆ. ಹಾಗೆಯೇ 103 ಏಕದಿನ ಪಂದ್ಯಗಳಲ್ಲಿ 183 ವಿಕೆಟ್‌ಗಳನ್ನು ಪಡೆದಿದ್ದಾರೆ.
7 / 8
ಭಾರತ ಮತ್ತು ಅಫ್ಘಾನಿಸ್ತಾನ ನಡುವಿನ ಮೊದಲ ಪಂದ್ಯ ಜನವರಿ 11 ರಂದು ಮೊಹಾಲಿಯಲ್ಲಿ ನಡೆಯಲಿದೆ. ಉಭಯ ತಂಡಗಳ ನಡುವೆ ಇದುವರೆಗೆ 5 ಟಿ20 ಅಂತಾರಾಷ್ಟ್ರೀಯ ಪಂದ್ಯಗಳು ನಡೆದಿದ್ದು, ಅದರಲ್ಲಿ ಭಾರತ ನಾಲ್ಕರಲ್ಲಿ ಗೆದ್ದಿದೆ. ಒಂದು ಪಂದ್ಯದ ಫಲಿತಾಂಶವಿಲ್ಲದೆ ಕೊನೆಗೊಂಡಿದೆ.
8 / 8
ಅಫ್ಘಾನಿಸ್ತಾನ ತಂಡ: ಇಬ್ರಾಹಿಂ ಝದ್ರಾನ್ (ನಾಯಕ), ರಹಮಾನುಲ್ಲಾ ಗುರ್ಬಾಜ್, ಇಕ್ರಮ್ ಅಲಿಖಿಲ್, ಹಜರತುಲ್ಲಾ ಝಜೈ, ರಹಮತ್ ಷಾ, ನಜಿಬುಲ್ಲಾ ಝದ್ರಾನ್, ಮೊಹಮ್ಮದ್ ನಬಿ, ಕರೀಂ ಜನತ್, ಅಜ್ಮುಲ್ಲಾ ಉಮರ್ಜಾಯ್, ಶರಫುದ್ದೀನ್ ಅಶ್ರಫ್, ಮುಜೀಬ್ ಉರ್ ರೆಹಮಾಲ್, ಫಜಲ್ ಹಕ್ಮಾನ್, ನವೀನ್ ಉಲ್ ಹಕ್, ನೂರ್ ಅಹ್ಮದ್, ಮೊಹಮ್ಮದ್ ಸಲೀಮ್, ಖೈಸ್ ಅಹ್ಮದ್, ಗುಲ್ಬದಿನ್ ನೈಬ್ ಮತ್ತು ರಶೀದ್ ಖಾನ್.