- Kannada News Photo gallery Cricket photos 'It's a Nice Feeling to Hear ‘Ram Siya Ram’: Keshav Maharaj
ಶ್ರೀರಾಮನ ಹಾಡು ಕೇಳುವುದೇ ಖುಷಿ ಎಂದ ಸೌತ್ ಆಫ್ರಿಕಾ ಕ್ರಿಕೆಟಿಗ
Keshav Maharaj: ಭಾರತೀಯ ಮೂಲದ ಕೇಶವ್ ಮಹಾರಾಜ್ ಸೌತ್ ಆಫ್ರಿಕಾ ಪರ 127 ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿದ್ದಾರೆ. ಈ ವೇಳೆ ಒಟ್ಟು 237 ವಿಕೆಟ್ ಕಬಳಿಸುವ ಮೂಲಕ ಮಿಂಚಿದ್ದಾರೆ. ಇದೀಗ ಸೌತ್ ಆಫ್ರಿಕಾದಲ್ಲಿ ನಡೆಯುತ್ತಿರುವ ಟಿ20 ಲೀಗ್ನಲ್ಲಿ ಡರ್ಬನ್ ಸೂಪರ್ ಜೈಂಟ್ಸ್ ತಂಡದ ನಾಯಕರಾಗಿ ಕಣಕ್ಕಿಳಿಯುತ್ತಿದ್ದಾರೆ.
Updated on: Jan 10, 2024 | 7:54 AM

ಸೌತ್ ಆಫ್ರಿಕಾ ಬ್ಯಾಟರ್ರೊಬ್ಬರು ಮೈದಾನಕ್ಕೆ ಬರುತ್ತಿದ್ದಂತೆ ರಾಮ್ ಸಿಯಾ ರಾಮ್ ಹಾಡು ಕೇಳಿ ಬಂದರೆ...ಬರುತ್ತಿರುವುದು ಕೇಶವ್ ಮಹಾರಾಜ್ (Keshav Maharaj) ಎಂದರ್ಥ. ಹೌದು, ಕೇಶವ್ ಮಹಾರಾಜ್ ಎಂಟ್ರಿಗೆ ರಾಮ್ ಸಿಯಾ ರಾಮ್ ಹಾಡನ್ನು ಹಾಕುವುದು ಹೊಸ ಟ್ರೆಂಡ್ ಆಗಿ ಮಾರ್ಪಟ್ಟಿದೆ.

ಇದೇ ವಿಷಯವನ್ನು ಇತ್ತೀಚೆಗೆ ಕೆಎಲ್ ರಾಹುಲ್ ಕೂಡ ಪ್ರಸ್ತಾಪಿಸಿದ್ದರು. ಸೌತ್ ಆಫ್ರಿಕಾ ವಿರುದ್ಧದ ಏಕದಿನ ಸರಣಿ ವೇಳೆ ಕೇಶವ್ ಮಹಾರಾಜ್ ಬ್ಯಾಟಿಂಗ್ಗೆ ಆಗಮಿಸಿದ್ದರು. ಈ ವೇಳೆ ಡಿಜೆ ರಾಮ್ ಸಿಯಾ ರಾಮ್ ಹಾಡನ್ನು ಪ್ಲೇ ಮಾಡಿದ್ದರು. ನೀವು ಮೈದಾನಕ್ಕೆ ಬರುವಾಗ ಯಾವಾಗಲೂ ಈ ಹಾಡನ್ನು ಹಾಕುತ್ತಾರಲ್ವಾ ಎಂದು ರಾಹುಲ್, ಕೇಶವ್ ಮಹಾರಾಜ್ ಅವರನ್ನು ಕೇಳಿದ್ದರು.

ಅಷ್ಟೇ ಅಲ್ಲದೆ ಕೇಪ್ಟೌನ್ನಲ್ಲಿ ನಡೆದ 2ನೇ ಟೆಸ್ಟ್ ಪಂದ್ಯದ ವೇಳೆ ಕೇಶವ್ ಮಹಾರಾಜ್ ಆಗಮಿಸುತ್ತಿದಂತೆ ರಾಮ್ ಸಿಯಾ ರಾಮ್ ಹಾಡನ್ನು ಹಾಕಲಾಯಿತು. ಈ ಹಾಡು ಕೇಳುತ್ತಿದ್ದಂತೆ ಸ್ಲಿಪ್ನಲ್ಲಿ ಫೀಲ್ಡಿಂಗ್ನಲ್ಲಿದ್ದ ವಿರಾಟ್ ಕೊಹ್ಲಿ ರಾಮಬಾಣದ ಸನ್ನೆ ಮಾಡಿದರು. ಅಷ್ಟೇ ಅಲ್ಲದೆ ಕೈ ಮುಗಿಯುವ ಮೂಲಕ ದೈವಭಕ್ತಿಯನ್ನು ಸೂಚಿಸಿದ್ದರು.

ಇದೀಗ ಮೈದಾನದಲ್ಲಿ ಕೇಳಿ ಬರುತ್ತಿರುವ ಸಿಯಾ ರಾಮ್ ಹಾಡಿನ ಬಗ್ಗೆ ಕೇಶವ್ ಮಹಾರಾಜ್ ಬಗ್ಗೆ ಮಾತನಾಡಿದ್ದಾರೆ. ನಾನು ಮೈದಾನಕ್ಕೆ ಬರುತ್ತಿದ್ದಂತೆ ಶ್ರೀರಾಮನ ಹಾಡು ಹಾಕುತ್ತಿರುವುದು ಖುಷಿ ನೀಡುತ್ತಿದೆ ಎಂದಿದ್ದಾರೆ. ಅಷ್ಟೇ ಅಲ್ಲದೆ ಮುಂದೇನು ಇದೇ ರೀತಿ ಹಾಡನ್ನು ಹಾಕುವಂತೆ ಡಿಜೆಗೆ ಮನವಿ ಮಾಡಿದ್ದೇನೆ ಎಂದು ತಿಳಿಸಿದ್ದಾರೆ.

ದೇವರು ನನ್ನ ದೊಡ್ಡ ಅನುಗ್ರಹ. ನನಗೆ ಅವಕಾಶ ಸಿಕ್ಕಾಗಲೆಲ್ಲಾ ನಾನು ದೇವರನ್ನು ನೆನಪಿಸಿಕೊಳ್ಳಲು ಪ್ರಯತ್ನಿಸುತ್ತೇನೆ. ಇದು ನನ್ನ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ. ಅಲ್ಲದೆ ಇತರ ಆಟಗಾರರಿಂದ ಗೌರವವನ್ನು ಪಡೆಯುತ್ತೇನೆ. ಧರ್ಮ ಮತ್ತು ಸಂಸ್ಕೃತಿಯನ್ನು ಗೌರವಿಸುವುದು ಮುಖ್ಯ. ಅದರಲ್ಲೂ ಕ್ರೀಡಾಂಗಣದಲ್ಲಿ 'ರಾಮ್ ಸಿಯಾ ರಾಮ್' ಕೇಳಿದರೆ ತುಂಬಾ ಸಂತೋಷವಾಗುತ್ತದೆ ಎಂದು ಕೇಶವ್ ಮಹಾರಾಜ್ ಹೇಳಿದ್ದಾರೆ.

ಭಾರತೀಯ ಮೂಲದ ಕೇಶವ್ ಮಹಾರಾಜ್ ಸೌತ್ ಆಫ್ರಿಕಾ ಪರ 127 ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿದ್ದಾರೆ. ಈ ವೇಳೆ ಒಟ್ಟು 237 ವಿಕೆಟ್ ಕಬಳಿಸುವ ಮೂಲಕ ಮಿಂಚಿದ್ದಾರೆ. ಇದೀಗ ಸೌತ್ ಆಫ್ರಿಕಾದಲ್ಲಿ ನಡೆಯುತ್ತಿರುವ ಟಿ20 ಲೀಗ್ನಲ್ಲಿ ಡರ್ಬನ್ ಸೂಪರ್ ಜೈಂಟ್ಸ್ ತಂಡದ ನಾಯಕರಾಗಿ ಕಣಕ್ಕಿಳಿಯುತ್ತಿದ್ದಾರೆ.



















