IND vs AUS: ಬಾಕ್ಸಿಂಗ್ ಡೇ ಟು ಬಾಕ್ಸಿಂಗ್ ಡೇ: ದಶಕ ಪೂರೈಸಿದ ಕೆಎಲ್ ರಾಹುಲ್

|

Updated on: Dec 26, 2024 | 10:55 AM

KL Rahul: ಕೆಎಲ್ ರಾಹುಲ್ ತಮ್ಮ ಟೆಸ್ಟ್ ಕೆರಿಯರ್ ಆರಂಭಿಸಿದ್ದು ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದ ಮೂಲಕ. 2014, ಡಿಸೆಂಬರ್ 26 ರಂದು ಆಸ್ಟ್ರೇಲಿಯಾ ವಿರುದ್ಧ ಕಣಕ್ಕಿಳಿಯುವ ಮೂಲಕ ರಾಹುಲ್ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಪಾದಾರ್ಪಣೆ ಮಾಡಿದ್ದರು. ಇದೀಗ ಆಸ್ಟ್ರೇಲಿಯಾ ವಿರುದ್ಧವೇ ಕಣಕ್ಕಿಳಿಯುವ ಮೂಲಕ ಇಂಟರ್​ನ್ಯಾಷನಲ್​ ಕ್ರಿಕೆಟ್​ನಲ್ಲಿ ದಶಕ ಪೂರೈಸಿದ್ದಾರೆ.

1 / 6
ಕೆಎಲ್ ರಾಹುಲ್ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಪಾದಾರ್ಪಣೆ ಮಾಡಿ ಇಂದಿಗೆ 10 ವರ್ಷಗಳಾಗಿವೆ. ವಿಶೇಷ ಎಂದರೆ ಯಾವ ಮೈದಾನದಲ್ಲಿ ಚೊಚ್ಚಲ ಪಂದ್ಯವಾಡಿದ್ದರೋ, ಇದೀಗ ಅದೇ ಮೈದಾನದ ಮೂಲಕ 10 ವರ್ಷವನ್ನು ಪೂರೈಸಿದ್ದಾರೆ. ಅಂದರೆ ಕೆಎಲ್ ರಾಹುಲ್ ಮೆಲ್ಬೋರ್ನ್​ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಕಣಕ್ಕಿಳಿಯುವ ಟೆಸ್ಟ್ ಕೆರಿಯರ್ ಆರಂಭಿಸಿದ್ದರು.

2 / 6
2014, ಡಿಸೆಂಬರ್ 26 ರಂದು ಮೆಲ್ಬೋರ್ನ್​ ಎಂಸಿಜಿ ಮೈದಾನದಲ್ಲಿ ಆಸ್ಟ್ರೇಲಿಯಾ ವಿರುದ್ಧ ರಾಹುಲ್ ಚೊಚ್ಚಲ ಟೆಸ್ಟ್ ಪಂದ್ಯವಾಡಿದ್ದರು. ಈ ಪಂದ್ಯದ ಮೊದಲ ಇನಿಂಗ್ಸ್​ನಲ್ಲಿ ಕೇವಲ 3 ರನ್​ಗಳಿಸಿ ಆಲೌಟ್ ಆಗಿದ್ದ ರಾಹುಲ್, ದ್ವಿತೀಯ ಇನಿಂಗ್ಸ್​ನಲ್ಲಿ ಕೇವಲ 1 ರನ್​ ಮಾತ್ರ ಗಳಿಸಿದ್ದರು.

3 / 6
ಆದರೆ ಆ ಬಳಿಕ ಟೆಸ್ಟ್ ಕ್ರಿಕೆಟ್​ನಲ್ಲಿ ಅದ್ಭುತ ಪ್ರದರ್ಶನ ನೀಡಿದ ಕೆಎಲ್ ರಾಹುಲ್ ಕಳೆದ 10 ವರ್ಷಗಳಲ್ಲಿ 56 ಪಂದ್ಯಗಳನ್ನಾಡಿದ್ದಾರೆ. ಈ ವೇಳೆ 97 ಇನಿಂಗ್ಸ್​​ಗಳಲ್ಲಿ ಬ್ಯಾಟ್ ಬೀಸಿರುವ ಅವರು 8 ಶತಕ ಹಾಗೂ 17 ಅರ್ಧಶತಕಗಳೊಂದಿಗೆ ಒಟ್ಟು 3216 ರನ್ ಕಲೆಹಾಕಿದ್ದಾರೆ.

4 / 6
ಇನ್ನು 2016 ರಲ್ಲಿ ಏಕದಿನ ಕ್ರಿಕೆಟ್​ಗೆ ಪಾದಾರ್ಪಣೆ ಮಾಡಿದ ಕೆಎಲ್ ರಾಹುಲ್ 77	 ಪಂದ್ಯಗಳನ್ನಾಡಿದ್ದು, ಈ ವೇಳೆ 72 ಇನಿಂಗ್ಸ್​ಗಳಿಂದ 2851 ರನ್ ಕಲೆಹಾಕಿದ್ದಾರೆ. ಇದರ ನಡುವೆ 7 ಶತಕ ಹಾಗೂ 18 ಅರ್ಧಶತಕಗಳನ್ನು ಬಾರಿಸಿದ್ದಾರೆ.

5 / 6
ಹಾಗೆಯೇ 	72 ಟಿ20 ಪಂದ್ಯಗಳಲ್ಲಿ ಕಾಣಿಸಿಕೊಂಡಿರುವ ರಾಹುಲ್, 68 ಇನಿಂಗ್ಸ್​ಗಳಿಂದ 2265 ರನ್​ ಕಲೆಹಾಕಿದ್ದಾರೆ. ಈ ವೇಳೆ ಕನ್ನಡಿಗನ ಬ್ಯಾಟ್​ನಿಂದ 2 ಶತಕ ಹಾಗೂ 22 ಅರ್ಧಶತಕಗಳು ಮೂಡಿಬಂದಿವೆ.

6 / 6
ಇದೀಗ ಮೆಲ್ಬೋರ್ನ್​ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಕಣಕ್ಕಿಳಿಯುವ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ 10 ವರ್ಷ ಪೂರೈಸಿದ್ದಾರೆ. ಈ ವಿಶೇಷ ಮೈಲುಗಲ್ಲಿನ ಪಂದ್ಯದಲ್ಲಿ ಕೆಎಲ್ ರಾಹುಲ್ ಅವರ ಬ್ಯಾಟ್​​ನಿಂದ ಎಂಸಿಜಿ ಮೈದಾನದಲ್ಲಿ ಅವಿಸ್ಮರಣೀಯ ಇನಿಂಗ್ಸ್ ಮೂಡಿಬರಲಿದೆಯಾ ಕಾದು ನೋಡಬೇಕಿದೆ.