IND vs AUS: ಚೊಚ್ಚಲ ಪಂದ್ಯವನ್ನಾಡುವ ಬೌಲರೆಂದರೆ ಕೊಹ್ಲಿಗೆ ಭಯ! ಇದು ಅಂಕಿ- ಅಂಶ ಹೇಳಿದ ಸತ್ಯ

| Updated By: ಪೃಥ್ವಿಶಂಕರ

Updated on: Feb 10, 2023 | 5:01 PM

Virat Kohli: ಮರ್ಫಿಗೆ ವಿಕೆಟ್ ಒಪ್ಪಿಸುವ ಮೂಲಕ ಕೊಹ್ಲಿ ಬರೋಬ್ಬರಿ 19ನೇ ಬಾರಿಗೆ ಪದಾರ್ಪಣೆ ಮಾಡುತ್ತಿರುವ ಬೌಲರ್​ಗೆ ವಿಕೆಟ್ ಒಪ್ಪಿಸಿದ ಬೇಡದ ದಾಖಲೆ ಬರೆದಿದ್ದಾರೆ.

1 / 5
ನಾಗ್ಪುರದಲ್ಲಿ ನಡೆಯುತ್ತಿರುವ ಬಾರ್ಡರ್-ಗವಾಸ್ಕರ್ ಟ್ರೋಫಿಯ ಮೊದಲ ಟೆಸ್ಟ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅದ್ಭುತ ಇನ್ನಿಂಗ್ಸ್ ಆಡುತ್ತಾರೆ ಮತ್ತು 2019 ರಿಂದ ಟೆಸ್ಟ್‌ನಲ್ಲಿ ಎದುರಿಸುತ್ತಿರುವ ಶತಕಗಳ ಬರವನ್ನು ಕೊನೆಗೊಳಿಸುತ್ತಾರೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಅದು ಸಂಭವಿಸಲಿಲ್ಲ, ಕೇವಲ 12 ರನ್‌ಗಳಿಗೆ ಔಟಾಗುವ ಮೂಲಕ ಕೊಹ್ಲಿ ತಮ್ಮ ಇನ್ನಿಂಗ್ಸ್ ಮುಗಿಸಿದ್ದಾರೆ. ಇದರೊಂದಿಗೆ ಕೊಹ್ಲಿ ಬೇಡದ ದಾಖಲೆಯೊಂದನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ.

2 / 5
ಈ ಪಂದ್ಯದಲ್ಲಿ ಆಸ್ಟ್ರೇಲಿಯಾದ ಪರ ಚೊಚ್ಚಲ ಟೆಸ್ಟ್ ಪಂದ್ಯವನ್ನಾಡುತ್ತಿರುವ ಟಾಡ್ ಮರ್ಫಿ ಬೌಲಿಂಗ್​ನಲ್ಲಿ ವಿರಾಟ್ ಕೊಹ್ಲಿ ವಿಕೆಟ್ ಒಪ್ಪಿಸಿದರು. ಮರ್ಫಿಗೆ ವಿಕೆಟ್ ಒಪ್ಪಿಸುವ ಮೂಲಕ ಕೊಹ್ಲಿ ಬರೋಬ್ಬರಿ 19ನೇ ಬಾರಿಗೆ ಪದಾರ್ಪಣೆ ಮಾಡುತ್ತಿರುವ ಬೌಲರ್​ಗೆ ವಿಕೆಟ್ ಒಪ್ಪಿಸಿದ ಬೇಡದ ದಾಖಲೆ ಬರೆದಿದ್ದಾರೆ.

3 / 5
ಆದರೆ, ಟೆಸ್ಟ್‌ಗೆ ಪದಾರ್ಪಣೆ ಮಾಡಿದ ಆಟಗಾರರಿಗೆ ವಿಕೆಟ್ ಒಪ್ಪಿಸಿದ ವಿಚಾರದಲ್ಲಿ ಕೊಹ್ಲಿ ಆರನೇ ಸ್ಥಾನದಲ್ಲಿದ್ದಾರೆ. ಈ ಪಟ್ಟಿಯಲ್ಲಿ ಭಾರತದ ಶ್ರೇಷ್ಠ ಬ್ಯಾಟ್ಸ್‌ಮನ್ ಸಚಿನ್ ತೆಂಡೂಲ್ಕರ್ ಹೆಸರು ಅಗ್ರಸ್ಥಾನದಲ್ಲಿದೆ. ಸಚಿನ್ ಬರೋಬ್ಬರು 35 ಬಾರಿ ಚೊಚ್ಚಲ ಟೆಸ್ಟ್ ಪಂದ್ಯವನ್ನಾಡುತ್ತಿರುವ ಬೌಲರ್​ಗೆ ಔಟಾಗಿದ್ದಾರೆ.

4 / 5
ಎರಡನೇ ಸ್ಥಾನದಲ್ಲಿ ಮೂವರು ಬ್ಯಾಟ್ಸ್‌ಮನ್‌ಗಳಿದ್ದಾರೆ. ಶ್ರೀಲಂಕಾದ ಮಹೇಲಾ ಜಯವರ್ಧನೆ, ಬಾಂಗ್ಲಾದೇಶದ ಮಹಮುದುಲ್ಲಾ ಮತ್ತು ಭಾರತದ ಮೊಹಮ್ಮದ್ ಅಜರುದ್ದೀನ್ ಅವರು ತಲಾ 23 ಬಾರಿ ಔಟಾಗಿದ್ದಾರೆ.

5 / 5
ಬಳಿಕ ಡೆಸ್ಮಂಡ್ ಹೇನ್ಸ್ 22 ಬಾರಿ ಮತ್ತು ಇಂಗ್ಲೆಂಡ್‌ನ ಜೋ ರೂಟ್ 21 ಬಾರಿ ಔಟಾಗಿದ್ದಾರೆ. ನಂತರ ಸ್ಟೀವ್ ವಾ, ರಾಹುಲ್ ದ್ರಾವಿಡ್ ಮತ್ತು ವಿವಿಎಸ್ ಲಕ್ಷ್ಮಣ್ ತಲಾ 20 ಬಾರಿ ಮೊದಲ ಟೆಸ್ಟ್ ಪಂದ್ಯನ್ನಾಡುತ್ತಿರುವ ಬೌಲರ್​ಗೆ ವಿಕೆಟ್ ಒಪ್ಪಿಸಿದ್ದಾರೆ.

Published On - 5:01 pm, Fri, 10 February 23