- Kannada News Photo gallery Cricket photos Shane Warnes Rs 120 crore fortune to be divided evenly among his three children brothers family
ಶೇನ್ ವಾರ್ನ್ ಅವರ 120 ಕೋಟಿ ಮೌಲ್ಯದ ಆಸ್ತಿ ಹಂಚಿಕೆ; ಮಾಜಿ ಪತ್ನಿ ಮತ್ತು ಗೆಳತಿಗೆ ನಯ ಪೈಸೆ ಸಿಗಲ್ಲ!
Shane Warne: ವರದಿ ಪ್ರಕಾರ ವಾರ್ನ್ 120 ಕೋಟಿ ಮೌಲ್ಯದ ಆಸ್ತಿಯನ್ನು ಬಿಟ್ಟು ಹೋಗಿದ್ದಾರೆ. ಆದರೆ ಈ ಆಸ್ತಿಯಲ್ಲಿ ಅವರ ಮಾಜಿ ಪತ್ನಿ ಮತ್ತು ಗೆಳತಿ-ಸಿಮೋನ್ ಮತ್ತು ಲಿಸಾ ಹಾರ್ಲೆ ಇಬ್ಬರಿಗೂ ನಯ ಪೈಸ ಸಿಗುತ್ತಿಲ್ಲ.
Updated on:Feb 10, 2023 | 12:01 PM

ವಿಶ್ವದ ದಿಗ್ಗಜ ಲೆಗ್ ಸ್ಪಿನ್ನರ್‌ಗಳಲ್ಲಿ ಒಬ್ಬರಾದ ಶೇನ್ ವಾರ್ನ್ ಕಳೆದ ವರ್ಷ ಹೃದಯಾಘಾತದಿಂದ ನಿಧನರಾದರು. ತನ್ನ ಸ್ಪಿನ್ ಮ್ಯಾಜಿಕ್ನಿಂದ ಹಲವು ವರ್ಷ ವಿಶ್ವ ಕ್ರಿಕೆಟ್ ಆಳಿದ ವಾರ್ನ್, ರಾಷ್ಟ್ರೀಯ ತಂಡ ಸೇರಿದಂತೆ ನಿವೃತ್ತಿಯ ನಂತರ, ಅನೇಕ ಫ್ರಾಂಚೈಸಿಗಳನ್ನು ಆಡಿದ್ದರು. ಹಾಗೆಯೇ ಕ್ರಿಕೆಟ್ ಕಾಮೆಂಟ್ ಕೂಡ ಮಾಡಿದ್ದರು. ಇದರಿಂದ ಸಾಕಷ್ಟು ಸಂಪಾದನೆ ಮಾಡಿದ್ದ ವಾರ್ನ್ ಅವರ ಆಸ್ತಿ ಇದೀಗ ಹಂಚಿಕೆಯಾಗುತ್ತಿದೆ.

ವರದಿ ಪ್ರಕಾರ ವಾರ್ನ್ 120 ಕೋಟಿ ಮೌಲ್ಯದ ಆಸ್ತಿಯನ್ನು ಬಿಟ್ಟು ಹೋಗಿದ್ದಾರೆ. ಆದರೆ ಈ ಆಸ್ತಿಯಲ್ಲಿ ಅವರ ಮಾಜಿ ಪತ್ನಿ ಮತ್ತು ಗೆಳತಿ-ಸಿಮೋನ್ ಮತ್ತು ಲಿಸಾ ಹಾರ್ಲೆ ಇಬ್ಬರಿಗೂ ನಯ ಪೈಸ ಸಿಗುತ್ತಿಲ್ಲ.

ಬದಲಿಗೆ ವಾರ್ನ್ ಅವರ ಆಸ್ತಿಯನ್ನು ಅವರ ಮೂವರು ಮಕ್ಕಳಾದ ಜಾಕ್ಸನ್, ಬ್ರೂಕ್ ಮತ್ತು ಸಮ್ಮರ್ ನಡುವೆ ಹಂಚಲಾಗುತ್ತದೆ. ವಿಕ್ಟೋರಿಯಾದ ಸುಪ್ರೀಂ ಕೋರ್ಟ್ ಈ ನಿರ್ಧಾರವನ್ನು ತೆಗೆದುಕೊಂಡಿದೆ ಎಂದು ಗುರುವಾರ ಆಸ್ಟ್ರೇಲಿಯಾದ ಮಾಧ್ಯಮಗಳಲ್ಲಿ ತಿಳಿಸಲಾಗಿದೆ. ಮೂವರಿಗೂ ತಲಾ 31 ಪರ್ಸೆಂಟ್ ಆಸ್ತಿ ಹಂಚಿಕೆಯಾಗಲಿದೆ. ಇದರ ಹೊರತಾಗಿ ವಾರ್ನ್ ಅವರ ಆಸ್ತಿಯಲ್ಲಿ ಎರಡು ಪ್ರತಿಶತವೂ ಅವರ ಸಹೋದರನ ಕುಟುಂಬಕ್ಕೆ ಹೋಗುತ್ತದೆ ಎಂದು ವರದಿಯಾಗಿದೆ.

ವಾರ್ನ್ ಅವರ ಬಳಿ ಇದ್ದ ಯಮಹಾ ಮೋಟಾರ್‌ಬೈಕ್, BMW ಮತ್ತು ಮರ್ಸಿಡಿಸ್ ಕಾರನ್ನು ಮಗ ಜಾಕ್ಸನ್‌ಗೆ ನೀಡಲಾಗುವುದು ಎಂದು ವರದಿಯಾಗಿದೆ. ಅಲ್ಲದೆ ವಾರ್ನರ್, ರಿಯಲ್ ಎಸ್ಟೇಟ್ ಆಸ್ತಿ ಮೌಲ್ಯ ಒಟ್ಟು 39 ಕೋಟಿ ಇದ್ದು, ಅವರು ವಿಕ್ಟೋರಿಯಾದಲ್ಲಿ 39 ಕೋಟಿ ರೂಪಾಯಿ ಮೌಲ್ಯದ ಮನೆಯನ್ನು ಹೊಂದಿದ್ದಾರೆ. ಹಾಗೆಯೇ ಅವರ ಆಸ್ಟ್ರೇಲಿಯನ್ ಬ್ಯಾಂಕ್ ಖಾತೆಯಲ್ಲಿ 5 ಮಿಲಿಯನ್ ಡಾಲರ್ ಹಣವಿದ್ದು, 24 ಮಿಲಿಯನ್‌ಗಿಂತಲೂ ಹೆಚ್ಚು ಷೇರು ಹೊಂದಿದ್ದಾರೆ.

ಕಳೆದ ವರ್ಷ ಮಾರ್ಚ್‌ನಲ್ಲಿ ಥಾಯ್ಲೆಂಡ್‌ನಲ್ಲಿ ವಿಹಾರ ಮಾಡುತ್ತಿದ್ದಾಗ ವಾರ್ನ್ ಅವರು ಹೃದಯಾಘಾತದಿಂದ ನಿಧನರಾದರು. ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್‌ಗಳ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ ವಾರ್ನ್ ಅವರು 708 ಟೆಸ್ಟ್ ವಿಕೆಟ್‌ಗಳನ್ನು ಪಡೆದಿದ್ದರು.
Published On - 12:01 pm, Fri, 10 February 23




