- Kannada News Photo gallery Cricket photos IND vs AUS 4th test Cheteshwar Pujara completes 2000 Test runs vs australia
IND vs AUS: ಪೂಜಾರ ಮುಂದೆ ಮಂಕಾದ ಕೊಹ್ಲಿ; ಆಸೀಸ್ ವಿರುದ್ಧ ಮಹತ್ವದ ಸಾಧನೆ ಮಾಡಿದ ಟೆಸ್ಟ್ ಬ್ಯಾಟರ್
IND vs AUS: ಅಹಮದಾಬಾದ್ ಟೆಸ್ಟ್‌ನಲ್ಲಿ 42 ರನ್ ಬಾರಿಸಿದ ಪೂಜಾರ ಆಸ್ಟ್ರೇಲಿಯಾ ವಿರುದ್ಧ ತಮ್ಮ 2000 ಟೆಸ್ಟ್ ರನ್‌ಗಳನ್ನು ಪೂರ್ಣಗೊಳಿಸಿದರು. ಇದರೊಂದಿಗೆ ಈ ಸಾಧನೆ ಮಾಡಿದ ನಾಲ್ಕನೇ ಭಾರತೀಯ ಬ್ಯಾಟ್ಸ್‌ಮನ್ ಎನಿಸಿಕೊಂಡರು.
Updated on:Mar 11, 2023 | 3:53 PM

ಆಸ್ಟ್ರೇಲಿಯಾ ವಿರುದ್ಧ ಅಹಮದಾಬಾದ್‌ನಲ್ಲಿ ನಡೆಯುತ್ತಿರುವ ಸರಣಿಯ ನಾಲ್ಕನೇ ಮತ್ತು ಕೊನೆಯ ಟೆಸ್ಟ್ ಪಂದ್ಯದಲ್ಲಿ ಚೇತೇಶ್ವರ್ ಪೂಜಾರ ದೊಡ್ಡ ಮೈಲಿಗಲ್ಲು ಸಾಧಿಸಿದ್ದಾರೆ. ಇದರೊಂದಿಗೆ ಪೂಜಾರ, ಸಚಿನ್ ತೆಂಡೂಲ್ಕರ್, ವಿವಿಎಸ್ ಲಕ್ಷ್ಮಣ್, ರಾಹುಲ್ ದ್ರಾವಿಡ್ ಕ್ಲಬ್ ಸೇರಿದ್ದಾರೆ.

ಅಹಮದಾಬಾದ್ ಟೆಸ್ಟ್‌ನಲ್ಲಿ 42 ರನ್ ಬಾರಿಸಿದ ಪೂಜಾರ ಆಸ್ಟ್ರೇಲಿಯಾ ವಿರುದ್ಧ ತಮ್ಮ 2000 ಟೆಸ್ಟ್ ರನ್‌ಗಳನ್ನು ಪೂರ್ಣಗೊಳಿಸಿದರು. ಇದರೊಂದಿಗೆ ಈ ಸಾಧನೆ ಮಾಡಿದ ನಾಲ್ಕನೇ ಭಾರತೀಯ ಬ್ಯಾಟ್ಸ್‌ಮನ್ ಎನಿಸಿಕೊಂಡರು.

ಇಷ್ಟೇ ಅಲ್ಲ, ಆಸ್ಟ್ರೇಲಿಯಾ ವಿರುದ್ಧ ರನ್ ಗಳಿಸುವ ವಿಷಯದಲ್ಲಿ ಪೂಜಾರ ಕೊಹ್ಲಿಗಿಂತ ಮುಂದಿದ್ದು, ಕೊಹ್ಲಿ 24 ಪಂದ್ಯಗಳಲ್ಲಿ 1793 ರನ್ ಗಳಿಸಿದ್ದರೆ, ಅದೇ 24 ಪಂದ್ಯಗಳಲ್ಲಿ ಪೂಜಾರ 2000ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ.

ಆಸ್ಟ್ರೇಲಿಯಾ ವಿರುದ್ಧ 51 ರ ಸರಾಸರಿಯಲ್ಲಿ ರನ್ ಗಳಿಸಿರುವ ಪೂಜಾರ ಇದರಲ್ಲಿ 5 ಶತಕ ಹಾಗೂ 11 ಅರ್ಧ ಶತಕ ಕೂಡ ಸಿಡಿಸಿದ್ದಾರೆ. ಅಲ್ಲದೆ ಆಸ್ಟ್ರೇಲಿಯಾ ವಿರುದ್ಧ 204 ರನ್ಗಳ ಅತ್ಯಧಿಕ ವೈಯಕ್ತಿಕ ರನ್ ಕೂಡ ಬಾರಿಸಿದ್ದಾರೆ.

ಇಷ್ಟೆಲ್ಲದರ ನಡುವೆಯೂ ಇಡೀ ಸರಣಿ ಪೂಜಾರಗೆ ಹೇಳಿಕೊಳ್ಳುವಂತಹ ಯಶಸ್ಸು ತಂದುಕೊಟ್ಟಿಲ್ಲ. ಇಂದೋರ್ ಟೆಸ್ಟ್‌ನಲ್ಲಿ ಪೂಜಾರ ಅರ್ಧಶತಕ ಬಾರಿಸಿದ್ದು ಬಿಟ್ಟರೆ, ಇನ್ನುಳಿದ ಪಂದ್ಯಗಳಲ್ಲಿ ಪೂಜಾರ ಬ್ಯಾಟ್ ಮೌನವಾಗಿಯೇ ಉಳಿದಿತ್ತು.
Published On - 3:50 pm, Sat, 11 March 23




