IND vs AUS: WTC ಫೈನಲ್‌ಗೆ ಎಂಟ್ರಿಕೊಟ್ಟ ಆಸ್ಟ್ರೇಲಿಯಾ; ಸೋತ ಟೀಂ ಇಂಡಿಯಾದ ಕಥೆ ಏನು?

|

Updated on: Mar 03, 2023 | 12:37 PM

ICC World Test Championship: ಈ ಸೋಲಿನ ಹೊರತಾಗಿಯೂ ಭಾರತ ತಂಡವು 4 ಪಂದ್ಯಗಳ ಸರಣಿಯಲ್ಲಿ 2-1 ಮುನ್ನಡೆಯಲ್ಲಿದ್ದರೂ, ಇಂದೋರ್ ಟೆಸ್ಟ್‌ನಲ್ಲಿ ಸೋತ ನಂತರ, ಟೀಂ ಇಂಡಿಯಾಕ್ಕೆ ಹೊಸ ಆತಂಕ ಎದುರಾಗಿದೆ.

1 / 7
ಇಂದೋರ್​ನಲ್ಲಿ ನಡೆದ ಮೂರನೇ ಟೆಸ್ಟ್ ಪಂದ್ಯ ಮೂರು ದಿನವೂ ನಡೆಯದೆ, ಮೂರನೇ ದಿನದ ಮೊದಲ ಸೆಷನ್​ನಲ್ಲಿಯೇ ಅಂತ್ಯಗೊಂಡಿದೆ. ಟೀಂ ಇಂಡಿಯಾವನ್ನು 9 ವಿಕೆಟ್‌ಗಳಿಂದ ಸೋಲಿಸಿದ ಆಸ್ಟ್ರೇಲಿಯಾ ಇದರೊಂದಿಗೆ ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ತನ್ನ ಗೆಲುವಿನ ಖಾತೆಯನ್ನು ತೆರೆದಿದೆ.

2 / 7
ಈ ಸೋಲಿನ ಹೊರತಾಗಿಯೂ ಭಾರತ ತಂಡವು 4 ಪಂದ್ಯಗಳ ಸರಣಿಯಲ್ಲಿ 2-1 ಮುನ್ನಡೆಯಲ್ಲಿದ್ದರೂ, ಇಂದೋರ್ ಟೆಸ್ಟ್‌ನಲ್ಲಿ ಸೋತ ನಂತರ, ಟೀಂ ಇಂಡಿಯಾಕ್ಕೆ ಹೊಸ ಆತಂಕ ಎದುರಾಗಿದೆ. ಇಂದೋರ್‌ನಲ್ಲಿ ಗೆದ್ದು ಆಸ್ಟ್ರೇಲಿಯಾ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ಪ್ರವೇಶಿಸಿದರೆ, ಇತ್ತ ಸೋತ ಭಾರತಕ್ಕೆ ಸಂಕಷ್ಟ ಎದುರಾಗಿದೆ.

3 / 7
ವಾಸ್ತವವಾಗಿ ಭಾರತ ವಿಶ್ವ ಟೆಸ್ಟ್ ಚಾಂಪಿಯನ್​ಶಿಫ್ ಫೈನಲ್‌ಗೆ ಪ್ರವೇಶಿಸಲು ಈ ಸರಣಿಯನ್ನು ಗೆಲ್ಲಲೇಬೇಕಾಗಿತ್ತು. ಆದರೆ ಇದೀಗ 3ನೇ ಟೆಸ್ಟ್ ಸೋತಿರುವ ಭಾರತ ನಾಲ್ಕನೇ ಟೆಸ್ಟ್‌ಗಾಗಿ ಕಾಯಬೇಕಾಗಿದೆ. ಒಂದು ವೇಳೆ ಭಾರತ ನಾಲ್ಕನೇ ಟೆಸ್ಟ್ ಗೆದ್ದರೆ ಟೆಸ್ಟ್ ವಿಶ್ವಕಪ್ ಆಡಲಿದೆ. ಹೀಗಾಗಿ ಮಾರ್ಚ್ 9 ರಿಂದ ಅಹಮದಾಬಾದ್‌ನಲ್ಲಿ ನಡೆಯಲಿರುವ ಸರಣಿಯ ನಾಲ್ಕನೇ ಮತ್ತು ಕೊನೆಯ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಗೆಲುವು ದಾಖಲಿಸಬೇಕಾಗಿದೆ.

4 / 7
ಒಂದು ವೇಳೆ ನಾಲ್ಕನೇ ಟೆಸ್ಟ್‌ನಲ್ಲಿ ಭಾರತ ಸೋತರೆ, ಇನ್ನೊಂದು ತಂಡದ ಫಲಿಂತಾಶದ ಮೇಲೆ ಅವಲಂಬಿಸಬೇಕಾಗುತ್ತದೆ. ಏಕೆಂದರೆ ಅಂತಿಮ ರೇಸ್‌ನಲ್ಲಿ ಭಾರತದ ಜೊತೆಗೆ ಶ್ರೀಲಂಕಾ ತಂಡವೂ ಇದೆ. ಅಲ್ಲದೆ ಅಹಮದಾಬಾದ್ ಟೆಸ್ಟ್ ಡ್ರಾ ಆದರೂ ಭಾರತಕ್ಕೆ ಸಂಕಷ್ಟ ಹೆಚ್ಚಲಿದೆ. ಇದರೊಂದಿಗೆ ಶ್ರೀಲಂಕಾಗೆ ಫೈನಲ್‌ನ ಬಾಗಿಲು ತೆರೆಯಲಿದೆ.

5 / 7
ವಾಸ್ತವವಾಗಿ ಶ್ರೀಲಂಕಾ ಈ ತಿಂಗಳು ನ್ಯೂಜಿಲೆಂಡ್ ವಿರುದ್ಧ 2 ಟೆಸ್ಟ್ ಪಂದ್ಯಗಳನ್ನು ಆಡಬೇಕಾಗಿದೆ. ಈ ಸರಣಿಯಲ್ಲಿ ಲಂಕಾ ತಂಡ ಕಿವಿ ತಂಡವನ್ನು ಕ್ಲೀನ್ ಸ್ವೀಪ್ ಮಾಡಿದರೆ, ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್‌ಗೇರುವ ಸಾಧ್ಯತೆ ಹೆಚ್ಚಾಗಲಿದೆ.

6 / 7
ಶೇ 68.52 ಗೆಲುವಿನೊಂದಿಗೆ ಆಸ್ಟ್ರೇಲಿಯಾ ಪಾಯಿಂಟ್​ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದುಕೊಂಡಿದ್ದು, ಇದರೊಂದಿಗೆ ಡಬ್ಲ್ಯುಟಿಸಿ ಫೈನಲ್​ಗೆ ಎಂಟ್ರಿಕೊಟ್ಟಿದೆ. ಅದೇ ವೇಳೆ ಭಾರತ ಶೇ.60.29 ಗೆಲುವಿನೊಂದಿಗೆ ಎರಡನೇ ಸ್ಥಾನದಲ್ಲಿದ್ದರೆ, ಶೇ.53.33 ಗೆಲುವಿನೊಂದಿಗೆ ಶ್ರೀಲಂಕಾ ಮೂರನೇ ಸ್ಥಾನದಲ್ಲಿದೆ.

7 / 7
ಹೀಗಾಗಿ ಭಾರತ ಡಬ್ಲ್ಯುಟಿಸಿ ಫೈನಲ್ ಆಡಬೇಕೆಂದರೆ ಕಿವೀಸ್ ವಿರುದ್ಧದ ಸರಣಿಯಲ್ಲಿ ಶ್ರೀಲಂಕಾ ಸೋಲಲೇಬೇಕಾಗಿದೆ. ಇದಕ್ಕೆ ಪೂರಕವೆಂಬಂತೆ ಈ 2 ಪಂದ್ಯಗಳ ಟೆಸ್ಟ್ ಸರಣಿ ನ್ಯೂಜಿಲೆಂಡ್​ನಲ್ಲಿ ನಡೆಯುತ್ತಿರುವುದರಿಂದ ತವರಿನ ಲಾಭವನ್ನು ಕಿವೀಸ್ ಪಡೆಯುವ ಸಾಧ್ಯತೆ ಹೆಚ್ಚಿದೆ.

Published On - 12:37 pm, Fri, 3 March 23