ಟೀಂ ಇಂಡಿಯಾಗೆ ಆಘಾತ; ಅಭ್ಯಾಸದ ವೇಳೆ ರಾಹುಲ್​ ಮೊಣಕೈಗೆ ಗಾಯ

|

Updated on: Nov 15, 2024 | 5:39 PM

KL Rahul: ಪರ್ತ್ ಟೆಸ್ಟ್ ಆರಂಭಕ್ಕೂ ಮುನ್ನ ಭಾರತ ತಂಡ ಆಸ್ಟ್ರೇಲಿಯಾದಲ್ಲಿ ಬಿರುಸಿನ ಅಭ್ಯಾಸ ನಡೆಸುತ್ತಿದೆ. ನವೆಂಬರ್ 15 ಶುಕ್ರವಾರದಂದು ಟೀಂ ಇಂಡಿಯಾ ಬ್ಯಾಟ್ಸ್‌ಮನ್‌ಗಳು ಮತ್ತು ಬೌಲರ್‌ಗಳ ತಂಡವನ್ನು ರಚಿಸಿಕೊಂಡು ತಮ್ಮ ತಮ್ಮಲ್ಲೇ ಅಭ್ಯಾಸ ನಡೆಸಿತು. ಈ ವೇಳೆ ಕೆಎಲ್ ರಾಹುಲ್ ಮೊಣಕೈಗೆ ತೀವ್ರ ಪೆಟ್ಟಾಗಿದ್ದು, ಅಭ್ಯಾಸದಿಂದ ಹೊರನಡೆದಿದ್ದಾರೆ.

1 / 5
ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೊದಲ ಟೆಸ್ಟ್ ಪಂದ್ಯ ಪರ್ತ್‌ನಲ್ಲಿ ನಡೆಯಲಿದೆ. ನವೆಂಬರ್ 22 ರಿಂದ ಆರಂಭವಾಗಲಿರುವ ಈ ಪಂದ್ಯಕ್ಕೂ ಮುನ್ನ ಟೀಂ ಇಂಡಿಯಾ ಪಾಳಯದಿಂದ ಆತಂಕಕ್ಕಾರಿ ಸುದ್ದಿಯೊಂದು ಹೊರಬಿದ್ದಿದೆ.  ಅಭ್ಯಾಸ ಪಂದ್ಯದ ವೇಳೆ ಕೆಎಲ್ ರಾಹುಲ್ ಗಂಭೀರವಾಗಿ ಗಾಯಗೊಂಡಿದ್ದಾರೆ. ಹೀಗಾಗಿ ರಾಹುಲ್, ಮಧ್ಯದಲ್ಲಿಯೇ ಬ್ಯಾಟಿಂಗ್ ತೊರೆದು ಡಗೌಟ್​ಗೆ ತೆರಳಿದ್ದಾರೆ.

2 / 5
ವಾಸ್ತವವಾಗಿ ಪರ್ತ್‌ನ ಡಬ್ಲ್ಯುಎಸಿಎ ಸ್ಟೇಡಿಯಂನಲ್ಲಿ ಭಾರತ ತಂಡ ಕಳೆದ 3 ದಿನಗಳಿಂದ ನೆಟ್ ಅಭ್ಯಾಸ ನಡೆಸುತ್ತಿದೆ. ತಮ್ಮ ಸಿದ್ಧತೆಯನ್ನು ಮತ್ತಷ್ಟು ಬಲಪಡಿಸುವ ಸಲುವಾಗಿ ಭಾರತ ತಂಡ ಮತ್ತು ಭಾರತ ಎ ತಂಡಗಳ ನಡುವೆ ಅಭ್ಯಾಸ ಪಂದ್ಯವನ್ನು ಆಡಲಾಯಿತು.

3 / 5
ಈ ವೇಳೆ ಪ್ರಸಿದ್ಧ್ ಕೃಷ್ಣ ಬೌಲ್ ಮಾಡಿದ ವೇಗದ ಚೆಂಡನ್ನು ಪರ್ತ್‌ನ ವೇಗದ ಪಿಚ್‌ನಲ್ಲಿ ರಾಹುಲ್​ಗೆ ಎದುರಿಸಲು ಸಾಧ್ಯವಾಗಲಿಲ್ಲ. ಹೀಗಾಗಿ ಚೆಂಡು ರಾಹುಲ್ ಅವರ ಮೊಣಕೈಗೆ ತಗುಲಿತು. ರಾಹುಲ್‌ಗೆ ಚೆಂಡು ಬಲವಾಗಿ ಬಡಿದಿದ್ದು, ಚಿಕಿತ್ಸೆಗಾಗಿ ವೈದ್ಯಕೀಯ ತಂಡವನ್ನು ಕರೆಯಬೇಕಾಯಿತು. ಇದಾದ ಬಳಿಕ ರಾಹುಲ್ ಎದ್ದು ಮತ್ತೆ ಆಡಲು ಯತ್ನಿಸಿದರು. ಆದರೆ ಅಸಹನೀಯ ನೋವಿನಿಂದ ಅವರು ಮೈದಾನದಿಂದ ಹೊರಗೆ ಹೋಗಬೇಕಾಯಿತು.

4 / 5
ಸದ್ಯದ ಮಾಹಿತಿ ಪ್ರಕಾರ, ರಾಹುಲ್ ಅವರ ಗಾಯ ಗಂಭೀರವಾಗಿಲ್ಲ ಎಂದು ತಿಳಿದುಬಂದಿದೆ. ಆದರೆ ಮುನ್ನೇಚ್ಚರಿಕೆಯ ಕ್ರಮವಾಗಿ ಸ್ವತಃ ರಾಹುಲ್ ಅವರೇ ಅಭ್ಯಾಸದಿಂದ ಹೊರನಡೆದಿದ್ದಾರೆ ಎಂದು ತಿಳಿದುಬಂದಿದೆ. ಆದಾಗ್ಯೂ ಇಂಜುರಿಗೊಳ್ಳುವ ಮುನ್ನ ರಾಹುಲ್, ಅಭ್ಯಾಸದ ವೇಳೆ ಸಮರ್ಥವಾಗಿ ಬ್ಯಾಟ್ ಬೀಸಿದರು. ಅವರು ಶಾರ್ಟ್ ಬಾಲ್ ಅನ್ನು ಚೆನ್ನಾಗಿ ಎದುರಿಸಿದರು ಎಂದು ವರದಿಯಾಗಿದೆ.

5 / 5
ಹೀಗಾಗಿ ರಾಹುಲ್, ಗಾಯದಿಂದ ಚೇತರಿಸಿಕೊಂಡರೆ ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ಓಪನರ್ ಆಗಿ ಕಣಕ್ಕಿಳಿಯಬಹುದು. ಒಂದು ವೇಳೆ ರಾಹುಲ್ ಇಂಜುರಿ ಗಂಭೀರವಾದರೆ, ಭಾರತ ತಂಡವು ಅಭಿಮನ್ಯು ಈಶ್ವರನ್ ಅವರನ್ನು ಆರಂಭಿಕನಾಗಿ ಕಣಕ್ಕಿಳಿಸಬೇಕಾಗುತ್ತದೆ. ಈಶ್ವರನ್ ಭಾರತ ತಂಡಕ್ಕೆ ಇನ್ನೂ ಪಾದಾರ್ಪಣೆ ಮಾಡಿಲ್ಲ. ಅಲ್ಲದೆ ಅವರು ಮೊದಲ ಬಾರಿಗೆ ಆಸ್ಟ್ರೇಲಿಯಾ ಪ್ರವಾಸದಲ್ಲಿ ಆಡುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಅವರನ್ನು ಕಣಕ್ಕಿಳಿಸುವುದು ಟೀಂ ಇಂಡಿಯಾಕ್ಕೆ ಕೊಂಚ ಹಿನ್ನಡೆಯನ್ನುಂಟು ಮಾಡಬಹುದು.