2025ರ ಐಪಿಎಲ್ ಹರಾಜಿಗೂ ಮುನ್ನ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಿಂದ ಹೊರಬಿದಿದ್ದ ಯುವ ಆಲ್ರೌಂಡರ್ ಮಹಿಪಾಲ್ ಲೊಮ್ರೋರ್, ಇದೀಗ ರಣಜಿ ಟ್ರೋಫಿಯಲ್ಲಿ ಸಿಡಿಲಬ್ಬದ ಬ್ಯಾಟಿಂಗ್ ಪ್ರದರ್ಶಿಸಿ, ತ್ರಿಶತಕ ಸಿಡಿಸಿ ಮಿಂಚಿದ್ದಾರೆ. 357 ಎಸೆತಗಳಲ್ಲಿ ತಮ್ಮ ತ್ರಿಶತಕವನ್ನು ಪೂರ್ಣಗೊಳಿಸಿದ ಲೊಮ್ರೋರ್, ತಮ್ಮ ಇನ್ನಿಂಗ್ಸ್ನಲ್ಲಿ 13 ಸಿಕ್ಸರ್ ಮತ್ತು 25 ಬೌಂಡರಿಗಳನ್ನು ಬಾರಿಸಿದರು.