IND vs SA: 2 ಶತಕ, ದ್ವಿಶತಕ, ಸಿಕ್ಸರ್‌ಗಳ ಮಳೆ; ಭಾರತ ಬರೆದ ದಾಖಲೆಗಳು ಒಂದೆರಡಲ್ಲ..!

India vs South Africa T20: ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಕೊನೆಯ ಟಿ20 ಪಂದ್ಯದಲ್ಲಿ ಭಾರತ ಅದ್ಭುತ ಪ್ರದರ್ಶನ ನೀಡಿದೆ. ಸಂಜು ಸ್ಯಾಮ್ಸನ್ ಮತ್ತು ತಿಲಕ್ ವರ್ಮಾ ಅಜೇಯ ಶತಕಗಳನ್ನು ಬಾರಿಸಿ 283 ರನ್‌ಗಳ ದಾಖಲೆಯ ಮೊತ್ತವನ್ನು ಕಲೆಹಾಕಿದ್ದಾರೆ. ಇದು ವಿದೇಶಿ ನೆಲದಲ್ಲಿ ಭಾರತದ ಅತಿ ಹೆಚ್ಚು ಮೊತ್ತವಾಗಿದೆ. ಈ ಇಬ್ಬರು ಬ್ಯಾಟ್ಸ್‌ಮನ್‌ಗಳು 210 ರನ್‌ಗಳ ಅಜೇಯ ಜೊತೆಯಾಟವನ್ನೂ ನಿರ್ಮಿಸಿದ್ದಾರೆ. ಒಟ್ಟು 23 ಸಿಕ್ಸರ್‌ಗಳೊಂದಿಗೆ ಭಾರತ ಇನ್ನೊಂದು ದಾಖಲೆಯನ್ನೂ ಸೃಷ್ಟಿಸಿದೆ.

ಪೃಥ್ವಿಶಂಕರ
|

Updated on: Nov 15, 2024 | 11:31 PM

ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಟಿ20 ಸರಣಿಯ ಕೊನೆಯ ಮತ್ತು ನಾಲ್ಕನೇ ಪಂದ್ಯ ಜೋಹಾನ್ಸ್‌ಬರ್ಗ್‌ನಲ್ಲಿ ನಡೆಯುತ್ತಿದೆ. ಪಂದ್ಯದಲ್ಲಿ, ಟೀಂ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದರು. ನಾಯಕನ ನಿರ್ಧಾರವನ್ನು ಸರಿ ಎಂದು ಸಾಭೀತುಪಡಿಸಿದ ಟೀಂ ಇಂಡಿಯಾದ ಬ್ಯಾಟ್ಸ್‌ಮನ್​ಗಳು ಆಫ್ರಿಕಾ ವಿರುದ್ಧ ದಾಖಲೆಯ ಬ್ಯಾಟಿಂಗ್‌ ಮಾಡಿದ್ದಾರೆ.

1 / 7
ದಕ್ಷಿಣ ಆಫ್ರಿಕಾದ ಬೌಲರ್‌ಗಳನ್ನು ಇನ್ನಿಲ್ಲದಂತೆ ಕಾಡಿದ  ಸಂಜು ಸ್ಯಾಮ್ಸನ್ ಮತ್ತು ತಿಲಕ್ ವರ್ಮಾ ಅಜೇಯ ಶತಕ ಸಿಡಿಸಿ ಮಿಂಚಿದರು. ಸಂಜು 109 ರನ್​ಗಳ ಇನ್ನಿಂಗ್ಸ್ ಆಡಿದರೆ, ತಿಲಕ್ ವರ್ಮಾ 120 ರನ್ ಚಚ್ಚಿದರು. ಈ ಮೂಲಕ ಟೀಂ ಇಂಡಿಯಾ ಕೊನೆಯ ಟಿ20 ಪಂದ್ಯದಲ್ಲಿ ಹಲವು ದಾಖಲೆಗಳನ್ನು ಬರೆದಿದೆ.

2 / 7
ವಿದೇಶದಲ್ಲಿ ಅತಿ ದೊಡ್ಡ ಮೊತ್ತ: ನಾಲ್ಕನೇ ಟಿ20 ಪಂದ್ಯದಲ್ಲಿ ಬರೋಬ್ಬರಿ 283 ರನ್ ಕಲೆಹಾಕುವ ಮೂಲಕ ಟೀಂ ಇಂಡಿಯಾ, ವಿದೇಶಿ ನೆಲದಲ್ಲಿ ಅದರಲ್ಲೂ ಅಂತಾರಾಷ್ಟ್ರೀಯ ಟಿ20ಯಲ್ಲಿ ಅತಿ ದೊಡ್ಡ ಮೊತ್ತ ಕಲೆಹಾಕಿದ ದಾಖಲೆ ಬರೆದಿದೆ.

3 / 7
ಒಂದು ವರ್ಷದಲ್ಲಿ 3 ಶತಕ: ಕಳೆದೆರಡು ಪಂದ್ಯಗಳಲ್ಲಿ ಸೊನ್ನೆಗೆ ಸುಸ್ತಾಗಿದ್ದ ಸಂಜು, ಈ ಪಂದ್ಯದಲ್ಲಿ ಬೌಂಡರಿ, ಸಿಕ್ಸರ್​ಗಳ ಮಳೆಗರೆದರು. ಇದೇ ಸರಣಿಯ ಮೊದಲ ಪಂದ್ಯದಲ್ಲಿ ಶತಕ ಬಾರಿಸಿದ್ದ ಸಂಜು, ಈ ಸರಣಿಗೂ ಮುನ್ನ ನಡೆದಿದ್ದ ಬಾಂಗ್ಲಾದೇಶ ವಿರುದ್ಧದ ಸರಣಿಯಲ್ಲೂ ಶತಕ ಬಾರಿಸಿದ್ದರು. ಈ ಮೂಲಕ ಸಂಜು ಒಂದೇ ವರ್ಷದಲ್ಲಿ 3 ಟಿ20 ಶತಕಗಳನ್ನು ಸಿಡಿಸಿದ ವಿಶ್ವದ ಮೊದಲ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

4 / 7
ಒಂದೇ ಇನ್ನಿಂಗ್ಸ್‌ನಲ್ಲಿ 2 ಶತಕ: ಈ ಪಂದ್ಯದಲ್ಲಿ ಭಾರತದ ಪರ ಸಂಜು ಸ್ಯಾಮ್ಸನ್ ಮತ್ತು ತಿಲಕ್ ವರ್ಮಾ ಭರ್ಜರಿ ಶತಕ ಬಾರಿಸಿದರು. ಟಿ20 ಪಂದ್ಯದಲ್ಲಿ ಇಬ್ಬರು ಬ್ಯಾಟ್ಸ್‌ಮನ್‌ಗಳು ಶತಕ ಸಿಡಿಸಿದ್ದು ಇದೇ ಮೊದಲು.

5 / 7
ಅತಿ ದೊಡ್ಡ ಜೊತೆಯಾಟ: ಈ ಪಂದ್ಯದಲ್ಲಿ ಸಂಜು ಸ್ಯಾಮ್ಸನ್‌ ಹಾಗೂ ತಿಲಕ್ ವರ್ಮಾ ಅಜೇಯ ಶತಕ ಸಿಡಿಸಿದಲ್ಲದೆ, ಮುರಿಯದ ವಿಕೆಟ್​ಗಳ 210 ರನ್​ಗಳ ದಾಖಲೆಯ ಜೊತೆಯಾಟವನ್ನು ಆಡಿದರು. ಈ ಮೂಲಕ ಅಂತರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಅತಿದೊಡ್ಡ ಜೊತೆಯಾಟ ನಿರ್ಮಿಸಿದ ದಾಖಲೆಯನ್ನೂ ಈ ಇಬ್ಬರು ಬ್ಯಾಟ್ಸ್‌ಮನ್​ಗಳು ನಿರ್ಮಿಸಿದ್ದಾರೆ.

6 / 7
ಇನ್ನಿಂಗ್ಸ್‌ನಲ್ಲಿ ಹೆಚ್ಚಿನ ಸಿಕ್ಸರ್‌: ನಾಲ್ಕನೇ ಟಿ20ಯಲ್ಲಿ ಭಾರತದ ಬ್ಯಾಟ್ಸ್‌ಮನ್‌ಗಳಿಂದ ಸಿಕ್ಸರ್‌ಗಳ ಮಳೆ ಸುರಿಯಿತು. ಈ ಪಂದ್ಯದಲ್ಲಿ ಟೀಂ ಇಂಡಿಯಾ ಒಟ್ಟು 23 ಸಿಕ್ಸರ್‌ಗಳನ್ನು ಬಾರಿಸಿತ್ತು. ಇದೀಗ ಟಿ20 ಅಂತಾರಾಷ್ಟ್ರೀಯ ಇನ್ನಿಂಗ್ಸ್‌ನಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳನ್ನು ಬಾರಿಸಿದ ದಾಖಲೆಯೂ ಟೀಂ ಇಂಡಿಯಾ ಹೆಸರಿನಲ್ಲಿ ದಾಖಲಾಗಿದೆ. ಈ ಪಂದ್ಯದಲ್ಲಿ ಭಾರತದ ಪರ ತಿಲಕ್ ವರ್ಮಾ 10 ಸಿಕ್ಸರ್, ಸಂಜು ಸ್ಯಾಮ್ಸನ್ 9 ಮತ್ತು ಅಭಿಷೇಕ್ ಶರ್ಮಾ 4 ಸಿಕ್ಸರ್ ಬಾರಿಸಿದರು.

7 / 7
Follow us