ಈ ನಡುವೆ ಕ್ರೀಡಾ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಸ್ಮಿತ್, ಬುಮ್ರಾ ಒಬ್ಬ ಶ್ರೇಷ್ಠ ಬೌಲರ್. ಹೊಸ ಚೆಂಡಿನಲಿರಲಿ, ಸ್ವಲ್ಪ ಹಳೆಯ ಚೆಂಡಿನಿರಲಿ ಅಥವಾ ಹಳೆಯ ಚೆಂಡಿನಲ್ಲಿರಲಿ, ಬ್ಯಾಟ್ಸ್‌ಮನ್‌ಗೆ ಎಲ್ಲ ರೀತಿಯಲ್ಲೂ ತೊಂದರೆ ಕೊಡುವ ಪ್ರತಿಭೆ ಬುಮ್ರಾ ಅವರಲ್ಲಿದೆ. ಬುಮ್ರಾ ಎಲ್ಲಾ ಮೂರು ಮಾದರಿಗಳಲ್ಲಿ ಅತ್ಯುತ್ತಮ ವೇಗದ ಬೌಲರ್. ಅವರ ವಿರುದ್ಧ ಆಡುವುದು ಯಾವಾಗಲೂ ಸವಾಲಿನ ಸಂಗತಿ ಎಂದಿದ್ದಾರೆ.