IND vs AUS: ಅಂದು ರಹಾನೆ, ಇಂದು ಕಮಿನ್ಸ್: ಸೋತರೂ ಎಲ್ಲರ ಮನಗೆದ್ದ ಆಸ್ಟ್ರೇಲಿಯಾ ನಾಯಕ

| Updated By: ಝಾಹಿರ್ ಯೂಸುಫ್

Updated on: Feb 19, 2023 | 5:31 PM

India vs Australia 2nd Test: ಹೀನಾಯ ಸೋಲಿನ ಬಳಿಕ ಪ್ಯಾಟ್ ಕಮಿನ್ಸ್ ಟೀಮ್ ಇಂಡಿಯಾ ಡ್ರೆಸ್ಸಿಂಗ್ ರೂಮ್​ಗೆ ಆಗಮಿಸಿ ಚೇತೇಶ್ವರ ಪೂಜಾರಗೆ ವಿಶೇಷ ಜೆರ್ಸಿಯೊಂದನ್ನು ನೀಡಿ ಅಭಿನಂದಿಸಿದರು.

1 / 6
ದೆಹಲಿಯ ಅರುಣ್ ಜೇಟ್ಲಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಬಾರ್ಡರ್-ಗವಾಸ್ಕರ್ ಟೆಸ್ಟ್​ ಸರಣಿಯ 2ನೇ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡಕ್ಕೆ ಭಾರತ ಸೋಲುಣಿಸಿದೆ. ಈ ಮೂಲಕ 4 ಪಂದ್ಯಗಳ ಸರಣಿಯಲ್ಲಿ ಭಾರತ ತಂಡವು 2-0 ಅಂತರದಿಂದ ಮುನ್ನಡೆ ಸಾಧಿಸಿದೆ. ವಿಶೇಷ ಎಂದರೆ ಈ ಸೋಲಿನ ಬಳಿಕ ಆಸ್ಟ್ರೇಲಿಯಾ ತಂಡದ ನಾಯಕ ಪ್ಯಾಟ್ ಕಮಿನ್ಸ್ ಟೀಮ್ ಇಂಡಿಯಾ ಡ್ರೆಸ್ಸಿಂಗ್ ರೂಮ್​ನಲ್ಲಿ ಕಾಣಿಸಿಕೊಂಡಿದ್ದರು.

2 / 6
ಹೌದು, ಅತ್ತ ಹೀನಾಯ ಸೋಲಿನ ಬಳಿಕ ಪ್ಯಾಟ್ ಕಮಿನ್ಸ್ ಟೀಮ್ ಇಂಡಿಯಾ ಡ್ರೆಸ್ಸಿಂಗ್ ರೂಮ್​ಗೆ ಆಗಮಿಸಿ ಚೇತೇಶ್ವರ ಪೂಜಾರಗೆ ವಿಶೇಷ ಜೆರ್ಸಿಯೊಂದನ್ನು ನೀಡಿ ಅಭಿನಂದಿಸಿದರು.

3 / 6
100ನೇ ಟೆಸ್ಟ್ ಪಂದ್ಯವಾಡಿದ್ದ ಪೂಜಾರ ಅವರ ಸಾಧನೆಯನ್ನು ಅವಿಸ್ಮರಣೀಯವಾಗಿಸಲು ಆಸ್ಟ್ರೇಲಿಯಾ ತಂಡದ ಎಲ್ಲ ಆಟಗಾರರು ಸಹಿ ಹಾಕಿರುವ ಜೆರ್ಸಿಯನ್ನು ಪ್ಯಾಟ್ ಕಮಿನ್ಸ್​ ಉಡುಗೊರೆಯಾಗಿ ನೀಡಿ ಅಭಿನಂದಿಸಿದರು. ಇದೀಗ ಈ ಫೋಟೋ ವೈರಲ್ ಆಗಿದೆ.

4 / 6
ವಿಶೇಷ ಎಂದರೆ ಕಳೆದ ಬಾರಿಯ ಬಾರ್ಡರ್​​-ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ ಟೀಮ್ ಇಂಡಿಯಾದ ಹಂಗಾಮಿ ನಾಯಕರಾಗಿದ್ದ ಅಜಿಂಕ್ಯ ರಹಾನೆ ಕೂಡ ನಾಥನ್ ಲಿಯಾನ್ ಅವರನ್ನು ಇದೇ ಮಾದರಿಯಲ್ಲಿ ಗೌರವಿಸಿದ್ದರು.

5 / 6
ಬ್ರಿಸ್ಬೇನ್‌ನ ಗಬ್ಬಾ ಸ್ಟೇಡಿಯಂನಲ್ಲಿ ನಡೆದಿದ್ದ ಪಂದ್ಯದ ಮೂಲಕ ನಾಥನ್ ಲಿಯಾನ್ 100ನೇ ಟೆಸ್ಟ್​ ಪಂದ್ಯವಾಡಿದ್ದರು. ಈ ಕ್ಷಣವನ್ನು ಸ್ಮರಣೀಯವಾಗಿಸಲು ಟೀಮ್ ಇಂಡಿಯಾ ನಾಯಕರಾಗಿದ್ದ ಅಜಿಂಕ್ಯ ರಹಾನೆ ಭಾರತೀಯ ಆಟಗಾರರ ಸಹಿ ಹೊಂದಿದ್ದ ವಿಶೇಷ ಜೆರ್ಸಿಯನ್ನು ಉಡುಗೊರೆಯಾಗಿ ನೀಡಿದ್ದರು.

6 / 6
ಇದೀಗ ಇದೇ ಮಾದರಿಯಲ್ಲಿ ಆಸ್ಟ್ರೇಲಿಯಾ ತಂಡದ ನಾಯಕ ಪ್ಯಾಟ್ ಕಮಿನ್ಸ್ ಕೂಡ ತನ್ನ ಸಹ ಆಟಗಾರರ ಸಹಿ ಹೊಂದಿರುವ ವಿಶೇಷ ಜೆರ್ಸಿಯನ್ನು 100ನೇ ಟೆಸ್ಟ್ ಪಂದ್ಯವಾಡಿದ ಟೀಮ್ ಇಂಡಿಯಾ ಆಟಗಾರ ಚೇತೇಶ್ವರ ಪೂಜಾರಾಗೆ ಉಡುಗೊರೆಯಾಗಿ ನೀಡಿದ್ದಾರೆ.