IND vs AUS: ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ 25000 ರನ್! ಸಚಿನ್ ಹಿಂದಿಕ್ಕಿದ ಕಿಂಗ್ ಕೊಹ್ಲಿ

Virat Kohli: ಆಸೀಸ್ ವಿರುದ್ಧದ ಎರಡನೇ ಟೆಸ್ಟ್​ 2ನೇ ಇನ್ನಿಂಗ್ಸ್​ನಲ್ಲಿ ಬೌಂಡರಿ ಬಾರಿಸಿದ ವಿರಾಟ್ ಇದರೊಂದಿಗೆ ಅಂತರಾಷ್ಟ್ರೀಯ ಕ್ರಿಕೆಟ್​ನಲ್ಲಿ 25 ಸಾವಿರ ರನ್ ಪೂರೈಸಿದ ದಾಖಲೆ ಬರೆದಿದ್ದಾರೆ.

ಪೃಥ್ವಿಶಂಕರ
|

Updated on:Feb 19, 2023 | 3:40 PM

ಮೈದಾನಕ್ಕಿಳಿದಾಗಲೆಲ್ಲ ಒಂದಿಲ್ಲೊಂದು ದಾಖಲೆ ಬರೆಯುವ ಕಿಂಗ್ ಕೊಹ್ಲಿ, ಇದೀಗ ಆಸ್ಟ್ರೇಲಿಯಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದ ಮೂರನೇ ದಿನದಲ್ಲೂ ಮತ್ತೊಂದು ಮೈಲಿಗಲ್ಲು ಸ್ಥಾಪಿಸಿದ್ದಾರೆ.

1 / 6
ಆಸೀಸ್ ವಿರುದ್ಧದ ಎರಡನೇ ಟೆಸ್ಟ್​ 2ನೇ ಇನ್ನಿಂಗ್ಸ್​ನಲ್ಲಿ ಬೌಂಡರಿ ಬಾರಿಸಿದ ವಿರಾಟ್ ಇದರೊಂದಿಗೆ ಅಂತರಾಷ್ಟ್ರೀಯ ಕ್ರಿಕೆಟ್​ನಲ್ಲಿ 25 ಸಾವಿರ ರನ್ ಪೂರೈಸಿದ ದಾಖಲೆ ಬರೆದಿದ್ದಾರೆ. ಇದರೊಂದಿಗೆ ಈ ಸಾಧನೆ ಮಾಡಿದ ಎರಡನೇ ಭಾರತೀಯ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೂ ಕೊಹ್ಲಿ ಪಾತ್ರರಾಗಿದ್ದಾರೆ.

2 / 6
ಹೆಚ್ಚು ಅಂತಾರಾಷ್ಟ್ರೀಯ ರನ್ ಕಲೆ ಹಾಕಿದ ಆಟಗಾರರ ಪಟ್ಟಿಯಲ್ಲಿ ಸಚಿನ್ ತೆಂಡೂಲ್ಕರ್ ಮೊದಲ ಸ್ಥಾನದಲ್ಲಿದ್ದು, ಸಚಿನ್ ಒಟ್ಟು 664 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 34 ಸಾವಿರದ 357 ರನ್ ಕಲೆ ಹಾಕಿದ್ದಾರೆ.

3 / 6
ಹಾಗೆಯೇ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಅತಿ ವೇಗವಾಗಿ 25 ಸಾವಿರ ರನ್ ಪೂರೈಸಿದ ಮೊದಲ ಆಟಗಾರ ಎಂಬ ದಾಖಲೆಯನ್ನೂ ಕೊಹ್ಲಿ ಬರೆದಿದ್ದಾರೆ. ಇದರೊಂದಿಗೆ ಕೊಹ್ಲಿ, ಈ ಹಿಂದೆ ಸಚಿನ್ ಹೆಸರಿನಲ್ಲಿದ್ದ ದಾಖಲೆಯನ್ನೂ ಮುರಿದಿದ್ದಾರೆ.

4 / 6
ಅಲ್ಲದೆ 25,000 ಅಂತಾರಾಷ್ಟ್ರೀಯ ರನ್ ಪೂರೈಸಿದ ವಿಶ್ವದ ಆರನೇ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೂ ಕೊಹ್ಲಿ ಪಾತ್ರರಾಗಿದ್ದಾರೆ.

5 / 6
ವಿಶ್ವ ಮಟ್ಟದಲ್ಲಿ ಕೊಹ್ಲಿಗಿಂತ ಮೊದಲು ಸಚಿನ್ ತೆಂಡೂಲ್ಕರ್, ಕುಮಾರ ಸಂಗಕ್ಕಾರ, ರಿಕಿ ಪಾಂಟಿಂಗ್, ಮಹೇಲಾ ಜಯವರ್ಧನೆ ಮತ್ತು ಜಾಕ್ವೆಸ್ ಕಾಲಿಸ್ ಈ ಸಾಧನೆ ಮಾಡಿದ್ದಾರೆ.

6 / 6

Published On - 3:36 pm, Sun, 19 February 23

Follow us